ಚೆಯ್ಯಂಡಾಣೆ, ಆ. ೯: ಕಕ್ಕಬ್ಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ತಾಮರ ಕೂರ್ಗ್ ರೆಸಾರ್ಟ್ ಕಕ್ಕಬ್ಬೆ ವತಿಯಿಂದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೆಸಾರ್ಟ್ ವ್ಯವಸ್ಥಾಪಕ ಕಲ್ಯಾಟಂಡ ಗಿರೀಶ್, ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಈ ಸಂದರ್ಭ ಎಸ್ಡಿಎಂಸಿ ಅಧ್ಯಕ್ಷ ಕೆ.ಎ. ಕಾರ್ಯಪ್ಪ, ಪ್ರಬಾರ ಮುಖ್ಯ ಶಿಕ್ಷಕಿ ಮಾಲತಿ, ಅತಿಥಿ ಶಿಕ್ಷಕಿಯರಾದ ಸಾಜಿದಾ, ಮಮತಾ, ಆಶಿಕಾ ಹಾಗೂ ರೆಸಾರ್ಟ್ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.