ಸೋಮವಾರಪೇಟೆ, ಆ. ೯: ತಾಲೂಕು ಹೋಂ ಸ್ಟೇ ಅಂಡ್ ಟೂರಿಸಂ ಅಸೋಸಿಯೇಷನ್ ವತಿಯಿಂದ ಹಾರಂಗಿ ಜಲಾಶಯ ಅಣೆಕಟ್ಟಿನ ರಸ್ತೆ ಮುಂಭಾಗದಲ್ಲಿ ಪ್ರವಾಸಿ ಸ್ಥಳಗಳ ಸೂಚನಾ ಫಲಕವನ್ನು ಅಳವಡಿಸಲಾಯಿತು.

ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್ ಅವರು ಫಲಕಗಳನ್ನು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆ ಗಳನ್ನು ನಿರಂತರವಾಗಿ ಅಸೋಸಿ ಯೇಷನ್ ವತಿಯಿಂದ ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದ್, ವಿಟ್ಟಲ್, ಹೇಮಂತ್, ಲೋಹಿತ್ ಮೂದ್ರವಳ್ಳಿ ಮತ್ತು ಅಸೋಸಿಯೇಷನ್ ಸದಸ್ಯರುಗಳು ಉಪಸ್ಥಿತರಿದ್ದರು.