ಕೂಡಿಗೆ, ಆ. ೯: ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಎಂ. ಚಂದ್ರಕಾAತ್ ಅವರನ್ನು ಡಯಟ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಮಾತನಾಡಿ, ಚಂದ್ರಕಾAತ್ ಅವರು ೨೦೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆಯಲು ಪ್ರಮುಖ ಕಾರಣರಾಗಿದ್ದರು ಎಂದು ಸ್ಮರಿಸಿದರು. ಬಿ.ಎನ್. ಪುಷ್ಪ, ಸಂಸ್ಥೆಯ ಹಿರಿಯ ಉಪನ್ಯಾಸಕಿ ಗೀತಾ ಮಾತನಾಡಿದರು. ಸೋಮವಾರಪೇಟೆ ಬಿ.ಇ.ಓ ಎಸ್. ಭಾಗ್ಯಮ್ಮ, ಸುಳ್ಯ ಬಿ.ಇ.ಓ. ಎಂ. ಕೃಷ್ಣಪ್ಪ, ಹುಣಸೂರು ಬಿ.ಇ.ಓ. ಎಸ್.ಪಿ. ಮಹಾದೇವ, ನಿವೃತ್ತ ಬಿ.ಇ.ಓ. ಶಿವಣ್ಣ, ಆಲೂರು ಅಕ್ಷರ ದಾಸೋಹ ಯೋಜನೆಯ ಅಧಿಕಾರಿ ಸಿದ್ದೇಶ್ ಕುಮಾರ್, ಹಿರಿಯ ಉಪನ್ಯಾಸಕ ಎನ್.ವಿ. ಸ್ವಾಮಿ, ಉಪನ್ಯಾಸಕರಾದ ವಿ. ವಿಜಯ್, ಕೆ.ಎಸ್. ನಳಿನಾಕ್ಷಿ, ಪಿ.ಪಿ. ಗಾಯತ್ರಿ, ಎಂ. ಲತಾ, ಸದಾಶಿವಯ್ಯ ಎಸ್. ಪಲ್ಲೇದ್, ಪ್ರೌಢಶಾಲಾ ಶಿಕ್ಷಕರ ಸಂಘಟನೆಯ ಪ್ರಮುಖರಾದ ಪಿ. ನವೀನ್ ಕುಮಾರ್, ಎಂ.ಟಿ. ದಯಾನಂದ ಸೇರಿದಂತೆ ಇನ್ನಿತರರು ಹಾಜರಿದ್ದರು.