ಗೋಣಿಕೊಪ್ಪ ವರದಿ, ಆ. ೯ : ಕ್ಯಾಲ್ಸ್ ಶಾಲೆಯ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಟರ್ಫ್ ಮೈದಾನದಲ್ಲಿ ನಡೆದ ಸಿಇಎಸ್‌ಸಿಇ ಪ್ರಾದೇಶಿಕ ಮಟ್ಟದ ಹಾಕಿ ಟೂರ್ನಿಯಲ್ಲಿ ಕ್ಯಾಲ್ಸ್ ಹಾಗೂ ಕಾಪ್ಸ್ ಆಟಗಾರರನ್ನು ಒಳಗೊಂಡು ಕೊಡಗು ತಂಡ ಪರಾಕ್ರಮ ಮೆರೆಯಿತು. ಜೋನ್ ಎಲ್ ತಂಡದ ಮೂಲಕ ಪ್ರಶಸ್ತಿ ಬಾಚಿಕೊಂಡಿತು.
ಬಾಲಕರಲ್ಲಿ ೧೪ ವಯೋಮಿತಿಯಲ್ಲಿ ಹಾಗೂ ೧೭ ವಯೋಮಿತಿಯಲ್ಲಿ ಚಾಂಪಿಯನ್ ಸ್ಥಾನ ಅಲಂಕರಿಸಿತು. ೧೯ ವಯೋಮಿತಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆಯಿತು. ಜೋನ್ ಎಲ್ ತಂಡದ ಮೂಲಕ ಸೆಣೆಸಾಟ ನಡೆಸಿದವು. ಫಲಿತಾಂಶ : ೧೪ ವಯೋಮಿತಿಯ ಬಾಲಕರ ವಿಭಾಗದಲ್ಲಿ ಜೋನ್ ಎಲ್ ಕಪ್ ಗೆದ್ದುಕೊಂಡಿತು. ಕ್ಯಾಲ್ಸ್ ಹಾಗೂ ಕಾಪ್ಸ್ ಶಾಲೆಗಳ ಆಟಗಾರರನ್ನು ಒಳಗೊಂಡಿರುವ ಜೋನ್ ಎಲ್ ತಂಡವು ವಿದ್ಯಾಶಿಲ್ಪ್ ಅಕಾಡೆಮಿ ಆಟಗಾರರನ್ನು ಒಳಗೊಂಡಿರುವ ಜೋನ್ ಬಿ ತಂಡವನ್ನು ೪ ಗೋಲುಗಳಿಂದ ಮಣಿಸಿ ವಿಜಯಿಯಾಯಿತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಜೋನ್ ಎ ಗೆದ್ದುಕೊಂಡಿತು. ದ ಫ್ರಾಂಕ್ ಅಂಥೋನಿ ಪಬ್ಲಿಕ್ ಸ್ಕೂಲ್, ಸೆಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್, ಬಾಲ್ದವಿನ್ ಬಾಯ್ಸ್ ಹೈಸ್ಕೂಲ್ ಆಟಗಾರರನ್ನು ಒಳಗೊಂಡ ಎ ಜೋನ್ ವಿರುದ್ದ ಸ್ಪರ್ಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ೩ ಗೋಲು ಹೊಡೆದು ಗೆಲುವು ದಾಖಲಿಸಿತು.
೧೯ ವಯೋಮಿತಿಯ ಬಾಲಕರ ವಿಭಾಗದಲ್ಲಿ ಜೋನ್ ಎ ತಂಡ ಚಾಂಪಿಯನ್ ಸ್ಥಾನ ಅಲಂಕರಿಸಿತು. ಜೋನ್ ಎಲ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಕ್ಯಾಲ್ಸ್ ಆಟಗಾರರನ್ನು ಒಳಗೊಂಡಿರುವ ಜೋನ್ ಎಲ್ ವಿರುದ್ದ ದ ಫ್ರಾಂಕ್ ಅಂಥೋನಿ ಪಬ್ಲಿಕ್ ಸ್ಕೂಲ್ ಹಾಗೂ ಸೆಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಒಳಗೊಂಡಿರುವ ತಂಡವು ೨-೧ ಗೋಲುಗಳಿಂದ ಜಯಿಸಿತು. ಮೂರನೇ ಸ್ಥಾನಕ್ಕೆ ಸರ್ಲಾ ಬಿರ್ಲಾ ಅಕಾಡೆಮಿ ಆಟಗಾರರನ್ನು ಒಳಗೊಂಡಿರುವ ಜೋನ್ ಸಿ ೩-೨ ಗೋಲುಗಳಿಂದ ಗೆದ್ದುಕೊಂಡಿತು.
೧೭ ವಯೋಮಿತಿ ವಿಭಾಗದಲ್ಲಿ ಕ್ಯಾಲ್ಸ್ ಹಾಗೂ ಕೂರ್ಗ್ ಪಬ್ಲಿಕ್ ಶಾಲೆಗಳ ಆಟಗಾರರನ್ನು ಒಳಗೊಂಡಿರುವ ಜೋನ್ ಎಲ್ ತಂಡವು ಚಾಂಪಿಯನ್ ಸ್ಥಾನ ಅಲಂಕರಿಸಿತು. ಬೆಂಗಳೂರು ವಿನ್ಮಯ್ ವಿದ್ಯಾಲಯ ತಂಡವನ್ನು ೩೦೨ ಗೋಲುಗಳಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿ ಸಾಧನೆ ಮಾಡಿತು. ಜೋನ್ ಎ ತಂಡವು ೪-೨ ಗೋಲುಗಳಿಂದ ಗೆದ್ದು ಮೂರನೇ ಸ್ಥಾನ ಉಳಿಸಿಕೊಂಡಿತು. ಸೆಂಟ್ ಜೋಸೆಫ್, ಸೆಂಟ್ ಜೆರ್ಮನ್ಸ್, ಬಾಲ್ದಿ÷್ವನ್ ಶಾಲೆಗಳ ತಂಡಗಳು ಜೋನ್ ಎ ತಂಡದಲ್ಲಿ ಭಾಗವಹಿಸಿದವು.
ಬಾಲಕಿಯರ ವಿಭಾಗ ; ೧೪ ವಯೋಮಿತಿ ಬಾಲಕಿಯರಲ್ಲಿ ಬೆಂಗಳೂರು ಚಿನ್ಮಯ್ ವಿದ್ಯಾಲಯ, ೧೭ ವಯೋಮಿತಿಯಲ್ಲಿ ರ‍್ಮನ್ಸ್ ಹೈಸ್ಕೂಲ್, ಬಿಷಪ್ ಕಾಟನ್ ಬಾಲಕಿಯರ ತಂಡ ವಿಜೇತರಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದರೊಂದಿಗೆ ರಾಷ್ಟçಮಟ್ಟದ ಪಂದ್ಯಾವಳಿಗೆ ಅರ್ಹತೆ ಗಿಟ್ಟಿಸಿಕೊಂಡಿತು.
ಬೆಸ್ಟ್ ; ಭವಿಷ್ಯದ ಆಟಗಾರರಾಗಿ ೧೪ ವಯೋಮಿತಿಯಲ್ಲಿ ಕ್ಯಾಲ್ಸ್ ಆಟಗಾರ ವಿಹಾನ್ ಮಂದಪ್ಪ. ೧೭ ವಯೋಮಿತಿಯಲ್ಲಿ ಕ್ಯಾಲ್ಸ್ ಆಟಗಾರ ಎಸ್ ಅಭಿನವ್, ೧೯ ವಯೋಮಿತಿಯಲ್ಲಿ ಸೆಂಟ್ ಜೋಸೆಫ್ ಪ್ರೌಢಶಾಲೆಯ ಮಾನವ್ ಕಾವೇರಪ್ಪ ಪಡೆದುಕೊಂಡರು. ಮೊದಲು ಗೋಲು ಹೊಡೆದವರಲ್ಲಿ ಕ್ಯಾಲ್ಸ್ ಶಾಲೆಯ ವಿಯಾನ್ ಅಚ್ಚಯ್ಯ, ಎಸ್. ಅಭಿನವ್, ದ ಫ್ರಾಂಕ್ ಆಂಥೋನಿ ಪಬ್ಲಿಕ್ ಶಾಲೆಯ ಪಿ. ಹವಿಶ್ ಬಹುಮಾನ ಗಿಟ್ಟಿಸಿಕೊಂಡರು.
ಕ್ಯಾಲ್ಸ್ ಶಾಲಾ ಮುಖ್ಯಸ್ಥ ದತ್ತ ಕರುಂಬಯ್ಯ, ಒಲಿಂಪಿಯನ್ ಬಾಳೆಯಡ ಸುಬ್ರಮಣಿ, ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡೀರ ಎ. ಕಾರ್ಯಪ್ಪ, ಪ್ರಾಂಶುಪಾಲ ಗೌರಮ್ಮ ನಂಜಪ್ಪ ಬಹುಮಾನ ವಿತರಣೆ ಮಾಡಿದರು.