ಮಡಿಕೇರಿ, ಅಆ. ೧೨ : ಮಡಿಕೇರಿ ಸಂತ ಮೈಕಲರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ 'ಕಲಾಸಂಪದ' ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿ.ಕೆ.ಡಿ. ವಿಜೇತ ರಾಹುಲ್ ಎಸ್. ರಾವ್ ಮಾತನಾಡಿ, ೧೯ ವರ್ಷಗಳ ನಿರಂತರ ಪರಿಶ್ರಮದಿಂದಾಗಿ ತಾವು ಯಶಸ್ಸಿನ ಮೆಟ್ಟಿಲೇರಲು ಸಾಧ್ಯವಾಯಿತು. ಒಂದು ದಿನದ ಪರಿಶ್ರಮ ಯಶಸ್ಸು ತರದು. ಗುರಿಯ ಸಾಧನೆಗೆ ಗುರಿಯ ಕಡೆಗೆ ಗಮನವಿರಬೇಕು ಎಂದು ಹೇಳಿದರು. ನಂತರ ತಮ್ಮ ನೃತ್ಯದ ಮೂಲಕ ಮಕ್ಕಳನ್ನು ರಂಜಿಸಿದ್ದಲ್ಲದೆ ರ‍್ಯಾಪ್ ಹಾಡಿನ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು. ಸಂಸ್ಥೆಯ ಸಂಚಾಲಕರಾದ ಗುರುಗಳಾದ ಸಂಜಯ್ ಕುಮಾರ್ ಅವರು ರಾಹುಲ್ ಅವರ ಸಾಧನೆಯನ್ನು ಶ್ಲಾಘಿಸಿದರು.
ನಂತರ ಮಾತನಾಡಿದ ಅವರು ಬೈಬಲ್‌ನ ಸಾಮತಿಯ ಹೋಲಿಕೆ ನೀಡಿ ಅರ್ಥವನ್ನು ತಿಳಿಸಿದರು. ತಾವು ಎಸ್.ಪಿ. ಬಾಲಸುಬ್ರಮಣ್ಯಂ ಅವರ ಜೊತೆಯಲ್ಲಿ ಹಾಡಿನ ರಚನೆ ಮಾಡಿ ಹಾಡಿಸಿದ ಅನುಭವವನ್ನು ಹಂಚಿಕೊAಡರು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಅದನ್ನು ಗುರುತಿಸಿ ಬೆಳೆಸಬೇಕು. ಅವಕಾಶಗಳು ಎಲ್ಲರಿಗೂ ಬಾಗಿಲು ತಟ್ಟುತ್ತದೆ. ಅದನ್ನು ಬಳಸಬೇಕು ಎಂದರು. ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಸೇವೆಯನ್ನು ಸ್ಮರಿಸಿ ಬೊಂಬೆ ಹೇಳುತೈತೆ ಹಾಡನ್ನು ಸ್ವತಹ ತಾವೇ ಹಾಡಿ ರಂಜಿಸಿದರು.
ವೇದಿಕೆಯಲ್ಲಿ ಪ್ರಾಂಶುಪಾಲರಾದ ಪಂಕಜ ಎಂ.ಎ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜೆಫ್ರಿ ಡಿಸಿಲ್ವಾ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಸರಿತಾ. ಮಾರ್ತಾ ಹಾಗೂ ಸಿಸ್ಟರ್ ಸಿಸಿಲಿಯಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸಿಂಚನ ಪ್ರಸನ್ನ ಹಾಗೂ ಸ್ಯಾಮುವಲ್ ಶೇನ್ ನಿರೂಪಿಸಿದರು. ಮುರ್ಷಿದಾ ಸ್ವಾಗತಿಸಿ, ತ್ರಿಶಾ ವಂದಿಸಿದರು.