ಗೋಣಿಕೊಪ್ಪಲು, ಆ. ೧೨: ಪೊನ್ನಂಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ವಾಹನ ಜಾಥಾ ಗೋಣಿಕೊಪ್ಪದಿಂದ ಪೊನ್ನಂಪೇಟೆ ತನಕ ನಡೆಯಿತು.
ನಗರದ ಆರ್‌ಎಂಸಿ ಆವರಣದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಅಲ್ಲುಮಾಡ ಶರತ್, ಪುತ್ತಾಮನೆ ಅನಿಲ್ ಪ್ರಸಾದ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಸುಳ್ಳಿಮಾಡ ಸಂಪತ್ ಪೂಜೆ ನೆರವೇರಿಸಿ ವಾಹನ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾ ಸಂದರ್ಭ ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ದೇವಾಲಯ ಅರ್ಚಕ ಜನಾರ್ಧನ್ ಭಟ್ ಪಾಲ್ಗೊಂಡು ಮಾತನಾಡಿ, ಸ್ವಾತಂತ್ರö್ಯ ಸಂದರ್ಭದ ಅಖಂಡ ಭಾರತವನ್ನು ಚೂರು ಚೂರು ಮಾಡಿರುವ ಕರಾಳ ದಿನದ ಹಿಂದಿರುವ ಕರಾಳ ಸತ್ಯವನ್ನು ಪ್ರತಿ ಭಾರತೀಯರು ಅರಿಯಬೇಕು. ದೇಶಭಕ್ತ ಹಿಂದೂಗಳ ಹೃದಯಕ್ಕಾದ ಆ ಘೋರ ಗಾಯ ಇಂದಿಗೂ ಅಳಿಸಿಲ್ಲ. ಹಿಂದೂಗಳು ಸಂಘಟಿತರಾಗಿ ಸುನಾಮಿಯಂತೆ ಎದ್ದು ಭಯೋತ್ಪಾದಕರ, ದೇಶದ್ರೋಹಿಗಳ ಎದೆಗೆ ಅಪ್ಪಳಿಸಿ ಬೇರೆ ಬೇರೆ ಆಗಿರುವ ದೇಶವನ್ನು ಒಟ್ಟುಗೂಡಿ ಮಾತೃಭೂಮಿಯನ್ನು ಅಖಂಡಗೊಳಿಸಬೇಕು. ಈ ನಿಟ್ಟಿನಲ್ಲಿ ಜಾಗೃತರಾಗಬೇಕೆಂದು ಕರೆ ನೀಡಿದರು. ಗೋಣಿಕೊಪ್ಪ ನಗರದಿಂದ ಪೊನ್ನಂಪೇಟೆ ಮಾರ್ಗವಾಗಿ ಅಲ್ಲಿನ ಕೊಡವ ಸಮಾಜದ ಆವರಣದಲ್ಲಿ ಜಾಥಾ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರುಗಳಾದ ಮುಲ್ಲೆಂಗಡ ಸುಕೇಶ್ ಕಾರ್ಯಪ್ಪ, ಪುತ್ತಾಮನೆ ಅಪ್ಪಣ್ಣ, ಸುಳ್ಳಿಮಾಡ ರಾಕೇಶ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರಮುಖರುಗಳಾದ ಗುಮ್ಮಟ್ಟಿರ ಕಿಲನ್ ಗಣಪತಿ, ನೆಲ್ಲಿರ ಚಲನ್, ಕಾಡ್ಯಮಾಡ ಭರತ್, ಸಿ.ಕೆ. ಬೋಪಣ್ಣ, ಪಂದ್ಯAಡ ಹರೀಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪೊನ್ನಂಪೇಟೆಯಲ್ಲಿ ಸಮಾರೋಪ
*ಗೋಣಿಕೊಪ್ಪ: ಕೇಂದ್ರದಲ್ಲಿ ಸದೃಢ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ಭಾರತವನ್ನು ಅಕ್ರಮಣಕಾರಿ ರಾಷ್ಟçಗಳಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಬಾಲ ವಾಗ್ಮಿ ಶ್ರೀಶಾ ಸುಂಟಿಕೊಪ್ಪ ಅಭಿಪ್ರಾಯಪಟ್ಟರು. ಪೂನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲ್ಲಿ ಸಂಕಲ್ಪ ಯಾತ್ರಾ ಸಭೆಯಲ್ಲಿ ಮಾತನಾಡಿದ ಅವರು, ಭವ್ಯ ಪರಂಪರೆಯನ್ನು ಹೊಂದಿರುವ ಸನಾತನ ಧರ್ಮ ಇಡೀ ಪ್ರಪಂಚಕ್ಕೆ ಆದರ್ಶವಾಗಿದೆ. ಇಂತಹ ದೇಶವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಪಣತೊಡಬೇಕಾಗಿದೆ. ಪ್ರತಿಯೊಬ್ಬ ಹಿಂದೂ ಜಾಗೃತರಾಗಬೇಕು ಎಂದರು.
ರಾಷ್ಟçಪತಿ ಸ್ಮರಣ ಪದಕ ವಿಜೇತ ಮೇಜರ್ ಬಿದ್ದಂಡ ಅಯ್ಯಪ್ಪ ನಂಜಪ್ಪ, ಮಾತನಾಡಿ, ಒಬ್ಬ ಹಿಂದೂ ಎಚ್ಚೆತ್ತುಕೊಳ್ಳುವ ಮೂಲಕ ಈ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬ ಹಿಂದೂ ಜಾಗೃತರಾಗುವ ಮೂಲಕ ಸನಾತನ ಧರ್ಮವನ್ನ ಬೆಳೆಸಲು ಸಾಧ್ಯ.
ಜಾತಿ ಆಧಾರದ ಮೇಲೆ ಹಿಂದೂಗಳು ಬಡಿದಾಡುತ್ತಿದ್ದೇವೆ. ಇದು ಇತರ ಧರ್ಮಗಳಿಗೆ ನಗೆಪಟಲು ಮತ್ತು ಈ ಹಿಂದೂ ರಾಷ್ಟçವನ್ನು ಉರುಳಿಸಲು ಅಸ್ತçವಾಗುತ್ತಿದೆ. ಇಂತಹ ಘಟನೆಗಳಿಗೆ ನಾವು ಅಸ್ಪದ ಕೊಡಬಾರದು ಎಂದರು.
ಹಿಂದೂ ಜಾಗ್ರಣ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೆಗೌಡ, ಜಿಲ್ಲಾ ಸಹ ಸಂಯೋಜಕ ಅಲ್ಲುಮಾಡ ಶರತ್, ಜಿಲ್ಲಾ ಕಾರ್ಯಕಾರಿಣಿ ಶಾಂತೆಯAಡ ತಿಮ್ಮಯ್ಯ, ತಾಲೂಕು ಸಂಯೋಜಕ ಸುಳ್ಳಿಮಾಡ ಸಂಪತ್, ಪೊನ್ನಂಪೇಟೆ ತಾಲೂಕು ಸಹ ಸಂಯೋಜಕ ಪುತ್ತಮನೆ ಅನೀಲ್ ಪ್ರಸಾದ್, ಸುಖೇಶ್, ಪುತ್ತಮನೆ ಯತೀಶ್, ಸುಳ್ಳಿಮಾಡ ರಾಕೇಶ್ ಇದ್ದರು.
-ಎನ್.ಎನ್. ದಿನೇಶ್