ಕುಶಾಲನಗರ, ಆ. ೧೨: ಕೊಡಗು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾಗಿ ಕುಶಾಲನಗರ ಎಂ.ಜಿ.ಎA ಪದವಿ ಕಾಲೇಜಿನ ಪ್ರಾಂಶುಪಾಲೆ ಅಯ್ಯಂಡ್ರ ಲಿಖಿತ ಟಿ.ಎ ನೇಮಕಗೊಂಡಿದ್ದಾರೆ. ೨೦೨೫-೨೦೨೬ನೇ ಸಾಲಿನ ಶೈಕ್ಷಣಿಕ ವರ್ಷದ ಒಂದು ವರ್ಷದ ಅವಧಿಗೆ ಮುಂದಿನ ಆದೇಶದವರೆಗೆ ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗಿದೆ. ಇವರು ೧೩ ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ. ಸಿಂಡಿಕೇಟ್ ಸದಸ್ಯರಾಗಿ, ಆಯ್ಕೆಯಾಗಿರುವ ಅಯ್ಯಂಡ್ರ ಲಿಖಿತ ಅವರನ್ನು ವಿವೇಕಾನಂದ ವಿದ್ಯಾಸಂಸ್ಥೆಯ, ಅಧ್ಯಕ್ಷ ಶಂಭುಲಿAಗಪ್ಪ ಎನ್.ಎನ್. ಹಾಗೂ ಪದವಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.