ಸರಿಸುಮಾರು ಮೂರು ದಶಕಗಳ ಕಾಲ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅತೀವ ಗೌರವ ಮತ್ತು ನಂಬಿಕೆ ಇಟ್ಟಿರುವ ನಾನು ಇತ್ತೀಚೆಗಿನ ಕೆಲವು ವಿದ್ಯಮಾನಗಳನ್ನು ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಇರುವ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ತಿಳಿದು ಈ ವಿಮರ್ಶಾತ್ಮಕವಾದ ಲೇಖನವನ್ನು ಬರೆಯುವ ಸಾಹಸ ಮಾಡುತ್ತಿದ್ದೇನೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಅಂಗಗಳಾದ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಇವುಗಳಲ್ಲಿ ಅತಿ ಹೆಚ್ಚು ಜನರ ನಂಬಿಕೆಗೆ ಅರ್ಹವಾಗಿರುವ ಅಂಗವೆAದರೆ ನ್ಯಾಯಾಂಗ ಎಂದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಹತ್ತು ಹಲವು ನಿದರ್ಶನಗಳು ಇವೆ. ಜನಸಾಮಾನ್ಯರ ಹಕ್ಕುಗಳಿಗೆ ಧಕ್ಕೆ ಉಂಟಾದಾಗ ನ್ಯಾಯಾಲಯ ತನ್ನ ಕರ್ತವ್ಯವನ್ನು ಸಮಯೋಚಿತವಾಗಿ ನಿರ್ವಹಿಸಿ ಪರಿಹಾರ ನೀಡಿದ ಉದಾಹರಣೆಗಳಿವೆ. ನಮ್ಮ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಸಂವಿಧಾನದ ಅತಿ ಪ್ರಮುಖ ಅನುಚ್ಛೇದ ಅಂತ ಹೇಳಿದರೆ ಅದು ಅನುಚ್ಛೇದ ೩೨. ಇದರಲ್ಲಿ ಒಬ್ಬ ಸಾಮಾನ್ಯ ಪ್ರಜೆ ತನ್ನ ಹಕ್ಕನ್ನು ಪ್ರತಿಪಾದನೆ ಮಾಡಲಿಕ್ಕೆ ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ತಟ್ಟುವ ಅವಕಾಶ ಹೊಂದಿದ್ದಾನೆ.
ಭಾರತದ ನ್ಯಾಯಾಂಗ ವ್ಯವಸ್ಥೆ ಬ್ರಿಟಿಷರ ಆಳ್ವಿಕೆಯ ಪರಿಣಾಮವಾಗಿ ರೂಪುಗೊಂಡಿದೆ. ಸ್ವಾತಂತ್ರö್ಯ ನಂತರ ಭಾರತೀಯ ಸಂವಿಧಾನ ರಚನೆಗೊಂಡು ದೇಶದ ನ್ಯಾಯಾಂಗ ವ್ಯವಸ್ಥೆಗೆ ಹೊಸ ರೂಪಬಂದಿದೆ.
ಪ್ರಾಚೀನ ಸಂಸ್ಕೃತಿಯಲ್ಲಿ ನ್ಯಾಯಾಂಗವನ್ನು ಧರ್ಮ ಎನ್ನಲಾಗುತ್ತಿತ್ತು ಮತ್ತು ಇದನ್ನು ಆಧಾರವಾಗಿಟ್ಟುಕೊಂಡು ಹಿಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ನ್ಯಾಯದ ಕಲ್ಪನೆಯು ಆಳವಾಗಿ ನೆಲೆಗೊಂಡಿತು. ಇಂದಿನ ಕಾಲಘಟ್ಟದಲ್ಲಿ ನ್ಯಾಯಾಂಗವು ನೈತಿಕತೆ ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ.
ನ್ಯಾಯಾಂಗದಲ್ಲಿ ಸೇವೆ ಸಲ್ಲಿಸುವ ನ್ಯಾಯಾಧೀಶರ ಸ್ವಾಯತ್ತತೆ ಮತ್ತು ಸ್ವತಂತ್ರತೆಯ ಭದ್ರತೆ ಎಷ್ಟು ಮುಖ್ಯವೋ ಹಾಗೆ ನ್ಯಾಯಾಧೀಶರ ಮೇಲೆ ಯಾವುದೇ ಗಂಭೀರ ವಿವಾದಗಳು ಸೃಷ್ಟಿ ಆದಾಗ ಅವರ ಮೇಲೆ ಭ್ರಷ್ಟಾಚಾರದ ಆರೋಪ ಇಲ್ಲವೇ ಯಾವುದೇ ಗುರುತರವಾದ ಆರೋಪ ಬಂದಾಗ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಾದಂತಹ ಸರಳವಾದ ಕಾನೂನಿನ ಅವಶ್ಯಕತೆ ಇವತ್ತಿಗಿದೆ. ಅಚಿeseಡಿ’s ತಿiಜಿe shouಟಜ be ಚಿbove susಠಿiಛಿioಟಿ ಎಂಬ ನಾಣ್ಣುಡಿಯಂತೆ ಅತ್ಯುನ್ನತ ನೈತಿಕ ಸ್ಥಾನದಲ್ಲಿರುವ ನ್ಯಾಯಾಧೀಶರು ತಮ್ಮ ಖಾಸಗಿ, ವ್ಯವಹಾರಿಕ ಮತ್ತು ವೃತ್ತಿಜೀವನದಲ್ಲಿ ಅವರ ಹುದ್ದೆಗೆ ತಕ್ಕಂತೆ ಶಂಕೆಗೆ ಅವಕಾಶಕೊಡದಂತೆ ಕೆಲಸ ನಿರ್ವಹಣೆ ಮಾಡುವ ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮ ಸ್ಥಾನದ ಗೌರವ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗುತ್ತದೆ. ಕಾರ್ಯಾಂಗ ಮತ್ತು ಶಾಸಕಾಂಗವನ್ನು ವಿಮರ್ಶೆ ಮಾಡುವಾಗ ಜನಸಾಮಾನ್ಯರಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಸ್ವಾತಂತ್ರö್ಯ ಇರುತ್ತದೆ. ಅದೇ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಮಾತನಾಡುವಾಗ ಎಲ್ಲೋ ಒಂದು ಕಡೆ ನಾವು ಆಡುವ ಮಾತುಗಳು ನ್ಯಾಯಾಂಗ ನಿಂದನೆಗೆ ಒಳಪಡುತ್ತದೆ ಎಂಬ ಚಿಂತೆ ಜನಸಾಮಾನ್ಯರಿಗೆ ಕಾಡುತ್ತದೆ. ನ್ಯಾಯಾಧೀಶರು ವೈಯಕ್ತಿಕವಾಗಿ ಎಂತಹದೇ ಅಭಿಪ್ರಾಯವನ್ನು ಹೊಂದಿರಲಿ. ಅಥವಾ ಯಾವುದೇ ರೀತಿಯ ಸಾಮಾಜಿಕ, ಧಾರ್ಮಿಕ ಹಿನ್ನೆಲೆಯಿಂದ ಬಂದಿರಲಿ ಆದರೆ ನ್ಯಾಯಸ್ಥಾನದಲ್ಲಿ ಕುಳಿತಿರುವನು, ಇದರ ಹೊರತಾಗಿ ಕೇವಲ ಕಕ್ಷಿದಾರರ ಹಿತಚಿಂತನೆ ಮತ್ತು ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಿ ಕೊಡುವಂತಹ ಮನೋಭಾವ ಅವರಲ್ಲಿ ಇರಬೇಕಾಗುತ್ತದೆ.
ನ್ಯಾಯಾಧೀಶರಷ್ಟೇ ಅಲ್ಲ ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ವಕೀಲರಿಗಳಿಗೂ ಸಹ ಈ ವಿಚಾರ ಅನ್ವಯಿಸುತ್ತದೆ. ಡಾ. ಅಂಬೇಡ್ಕರ್ ಹೇಳಿದಂತೆ “ಊoತಿeveಡಿ gooಜ ಚಿ ಅoಟಿsಣiಣuಣioಟಿ mಚಿಥಿ be, iಜಿ ಣhose ತಿho ಚಿಡಿe imಠಿಟemeಟಿಣiಟಿg iಣ ಚಿಡಿe ಟಿoಣ gooಜ, iಣ ತಿiಟಟ ಠಿಡಿove ಣo be bಚಿಜ.” (ಯಾವುದೇ ಸಂವಿಧಾನ ಎಷ್ಟು ಉತ್ತಮವಾಗಿದ್ದರೂ, ಅದನ್ನು ಜಾರಿಗೆ ತರುವವರು ಒಳ್ಳೆಯವರಾಗಿಲ್ಲ. ಅಂದರೆ ಅದು ಕೆಟ್ಟದ್ದಾಗುತ್ತದೆ.) ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವಾರು ಸಮಸ್ಯೆಗಳು ನಮಗೆ ಎದ್ದು ಕಾಣುತ್ತವೆ. ಅವುಗಳಲ್ಲಿ ಕೆಲವೊಂದು ಅಂಶಗಳನ್ನು ನಾವು ಅವಲೋಕಿಸಿದರೆ ಪ್ರಮುಖವಾಗಿ ಗೋಚರಿಸುವ ವಿಚಾರಗಳೆಂದರೆ ನ್ಯಾಯದಾನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಎusಣiಛಿe ಜeಟಚಿಥಿeಜ is ರಿusಣiಛಿe ಜeಟಿieಜ (ನ್ಯಾಯವು ತಡವಾದರೆ ಅದು ನ್ಯಾಯದಿಂದ ವಂಚಿತವಾಗುವುದು) ಎಂಬ ಮಾತು ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬ ನೀತಿಯನ್ನು ಹೋಲುವ ಮಾತಿನಂತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಪ್ರಮುಖ ಸ್ತಂಭವೆAದು ಕರೆಯಲ್ಪಡುವ ನ್ಯಾಯಾಂಗವು ಜನಸಾಮಾನ್ಯರ ನ್ಯಾಯೋಚಿತ ಹಕ್ಕುಗಳನ್ನು ರಕ್ಷಿಸುವ ಮಹತ್ವದ ವ್ಯವಸ್ಥೆಯಾಗಿದೆ. ಆದರೆ ಹೆಚ್ಚಿನ ಕೆಲಸದ ಹೊರೆ, ಪ್ರಕ್ರಿಯಾತ್ಮಕ ತಡೆಗಳು ಮತ್ತು ಇನ್ನಿತರ ಕಾರಣಗಳಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ನಮ್ಮ ದೇಶದಲ್ಲಿ ಸರಿಸುಮಾರು ೫ ಕೋಟಿಗೂ ಹೆಚ್ಚು ಪ್ರಕರಣಗಳು ಅಧೀನ ನ್ಯಾಯಾಲಯದಿಂದ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದವರೆಗೆ ವಿವಿಧ ಹಂತದಲ್ಲಿ ವಿಚಾರಣೆಗೆ ಬಾಕಿ ಇವೆ. ಈ ರೀತಿ ವಿವಿಧ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಅವಲೋಕಿಸಿದಾಗ ಸರ್ವೋಚ್ಚ ನ್ಯಾಯಾಲಯದಲ್ಲಿ ಸುಮಾರು ೮೦,೦೦೦, ಉಚ್ಚ ನ್ಯಾಯಾಲಯದಲ್ಲಿ ಸುಮಾರು ೬೧ ಲಕ್ಷ ಮತ್ತು ಅಧೀನ ನ್ಯಾಯಾಲಯ (ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳು ಸೇರಿ) ಸುಮಾರು ನಾಲ್ಕು ಕೋಟಿ ೫೦ ಲಕ್ಷ ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಇನ್ನೂ ಆತಂಕಕಾರಿ ವಿಚಾರ ಎಂದರೆ ಸುಮಾರು ಒಂದು ಲಕ್ಷ ಎಂಬತ್ತು ಸಾವಿರ ಪ್ರಕರಣಗಳು ೩೦ ವರ್ಷಕ್ಕೂ ಹೆಚ್ಚು ಕಾಲ ಬಾಕಿ ಇವೆ. ೫೨ ಲಕ್ಷ ಪ್ರಕರಣಗಳು ೧೦ ವರ್ಷಕ್ಕೂ ಹೆಚ್ಚು ಕಾಲದ್ದು ಮತ್ತು ಸುಮಾರು ಒಂದು ಕೋಟಿ ೪೦ ಲಕ್ಷ ಪ್ರಕರಣಗಳು ಐದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಇತ್ಯರ್ಥಕ್ಕೆ ಬಾಕಿ ಇವೆ. ಈ ರೀತಿ ನ್ಯಾಯದಾನ ಪ್ರಕ್ರಿಯೆಯಲ್ಲಿ ವಿಳಂಬಕ್ಕೆ ಹಲವಾರು ಕಾರಣಗಳು ಇದ್ದು ಅವುಗಳಲ್ಲಿ ಮುಖ್ಯವಾಗಿ ನ್ಯಾಯಾಧೀಶರ ಕೊರತೆ, ಜಟಿಲ ಕಾನೂನಿನ ಪರಿಭಾಷೆಗಳು ಮತ್ತು ಅನಗತ್ಯ ನಿಯಮಾವಳಿಗಳು, ಅನವಶ್ಯಕ ಮಧ್ಯಂತರ ಅರ್ಜಿಗಳು ಅದರ ಮೇಲೆ ಆದೇಶ ಮತ್ತು ಮೇಲ್ಮನವಿ, ನ್ಯಾಯಾಲಯಗಳು ಕಾನೂನಿನ ತಾಂತ್ರಿಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡುವುದು ಮತ್ತು ಅನವಶ್ಯಕ ಕಾರಣಗಳಿಂದ ಕೇಸು ಮುಂದೂಡಲ್ಪಡುವುದು. ಜಸ್ಟಿಸ್ ಕೃಷ್ಣ ಅಯ್ಯರ್ ಹೇಳಿದಂತೆ ‘Pಡಿoಛಿeಜuಡಿe is buಣ ಣhe hಚಿಟಿಜmಚಿiಜ, ಟಿoಣ ಣhe misಣಡಿess oಜಿ ರಿusಣiಛಿe.’ ಅಂದರೆ ನ್ಯಾಯದ ಪ್ರಕ್ರಿಯೆ ನ್ಯಾಯಕ್ಕೆ ಸೇವಕಿಯಾಗಿರಬೇಕು, ಅದನ್ನು ನಿಯಂತ್ರಿಸುವುದಕ್ಕೆ ಅಲ್ಲ.
ನ್ಯಾಯಾಧೀಶರ ಕೊರತೆ ಮತ್ತು ನೇಮಕಾತಿಯಲ್ಲಿ ವಿಳಂಬ
ಉಚ್ಚ ನ್ಯಾಯಾಲಯಗಳಲ್ಲಿ ಮಂಜೂರಾದ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ ೧೧೧೪ ಆದರೆ ಅದರಲ್ಲಿ ಭರ್ತಿಯಾಗದೆ ಉಳಿದಿರುವ ಸ್ಥಾನ ಶೇ. ೩೩. ಹಾಗೆ ಅಧೀನ ನ್ಯಾಯಾಲಯದಲ್ಲೂ ಸಹ ಶೇ. ೨೦ ಹೆಚ್ಚಾಗಿ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಬಾಕಿ ಇದೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಹಲವಾರು ಹೆಸರುಗಳನ್ನು ಸರ್ವೋಚ್ಚ ನ್ಯಾಯಾಲಯ ಶಿಫಾರಸ್ಸು ಮಾಡಿದ್ದರೂ ಕೇಂದ್ರದಲ್ಲಿರುವ ಯಾವುದೇ ರಾಜಕೀಯ ಪಕ್ಷಗಳಾಗಲಿ ತಮ್ಮ ರಾಜಕೀಯ ಲೆಕ್ಕಾಚಾರಕ್ಕೆ ಅನುಗುಣವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಡ್ಡಗಾಲು ಹಾಕುತ್ತಿರುವುದು ಒಂದು ಸಂಪ್ರದಾಯವಾಗಿದೆ.
ಈ ರೀತಿ ನೇಮಕಾತಿಗೆ ಒಪ್ಪಿಗೆ ಸೂಚಿಸಿದ ಕೆಲವು ನುರಿತ ಮತ್ತು ಪ್ರಾಮಾಣಿಕ ನ್ಯಾಯವಾದಿಗಳು ವಿಳಂಬ ಧೋರಣೆಗೆ ಬೇಸತ್ತು ತಮ್ಮ ಒಪ್ಪಿಗೆಯನ್ನು ಹಿಂದಕ್ಕೆ ಪಡೆದಿರುವುದನ್ನೂ ನಾವು ಇತ್ತೀಚೆಗೆ ನೋಡಿರುತ್ತೇವೆ. ಕೆಲವೊಮ್ಮೆ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ ಮತ್ತು ರಾಜಕೀಯ ಪ್ರಭಾವ ನುಸುಳಿ ನ್ಯಾಯಾಂಗ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಒಂದು ದುರಂತವೇ ಸರಿ. ನಮ್ಮ ದೇಶದಲ್ಲಿ ಮಾತ್ರ ಕಾಣುವಂತೆ ಉಚ್ಚ ನ್ಯಾಯಾಲಯದ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಸಂಬAಧಪಟ್ಟ ‘ಕೊಲಿಜಿಯಂ’ ನೇಮಕಾತಿ ಮಾಡುತ್ತಿರುವುದು ಇದರಲ್ಲಿ ಪಾರದರ್ಶಕತೆ ಇಲ್ಲದಿರುವುದು ಹಲವು ಸಂದರ್ಭದಲ್ಲಿ ಕಂಡುಬAದಿದೆ. ಡಾ. ಅಂಬೇಡ್ಕರ್ ಹೇಳಿದಂತೆ ‘ಖಿhe ರಿuಜiಛಿiಚಿಡಿಥಿ musಣ be ಚಿbove susಠಿiಛಿioಟಿ ಚಿಟಿಜ beಥಿoಟಿಜ ಡಿeಠಿಡಿoಚಿಛಿh.’ (ನ್ಯಾಯಾಂಗವು ಅನುಮಾನಕ್ಕೂ, ಟೀಕೆಗೂ ಎಳೆಯದಷ್ಟು ಶುದ್ಧವಾಗಿರಬೇಕು).
ನ್ಯಾಯಮೂರ್ತಿಗಳ ಮೇಲೆ ಭ್ರಷ್ಟಾಚಾರದ ಆರೋಪ
ಸಂವಿಧಾನದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವ ಕೆಲವು ನ್ಯಾಯಮೂರ್ತಿಗಳು ತಮ್ಮ ಸೇವಾವಧಿಯಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ನ್ಯಾಯಾಂಗ ವ್ಯವಸ್ಥೆಗೆ ಕಳಂಕತAದಿರುವ ನಿದರ್ಶನಗಳು ನಮ್ಮ ಮುಂದೆ ಇವೆ. ಹಿಂದೆ ಜಸ್ಟಿಸ್ ಪಿ.ಡಿ. ದಿನಕರ್ ಎಂಬವರು ಸಿಕ್ಕಿಂ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಮಯದಲ್ಲಿ ಅವರ ಮೇಲೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹದ ಆರೋಪ ಬಂದ ಹಿನ್ನೆಲೆ ಅವರ ವಿರುದ್ಧ ಸರ್ವೋಚ್ಚ ನ್ಯಾಯಾಲಯ ತನಿಖೆ ಕೈಗೊಳ್ಳಬೇಕೆಂಬ ನಿರ್ಧಾರದ ಹಿನ್ನಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಹಾಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟಿಸ್ ರಂಜನ್ ಗೊಗೋಯ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಬಂದಿತ್ತು. ಅವರದೇ ಪೀಠ ಆ ಕೇಸಿನ ವಿಚಾರಣೆಯನ್ನು ಕೈಗೆತ್ತಿಕೊಂಡು ಅವರ ಮೇಲೆ ಮಾಡಿದ ಆರೋಪದ ಅರ್ಜಿಯನ್ನು ತಿರಸ್ಕರಿಸಿ ವಜಾಗೊಳಿಸಿದ್ದು ಜನಸಾಮಾನ್ಯರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಇದೇ ಜಸ್ಟಿಸ್ ರಂಜನ್ ಗೊಗೋಯ್ ಅವರು ನಿವೃತ್ತಿ ಆದ ನಂತರ ಆಡಳಿತ ಪಕ್ಷ ಕೇಳಿಕೊಂಡ ಮೇರೆಗೆ ರಾಜ್ಯಸಭೆಯ ಸದಸ್ಯತ್ವವನ್ನು ಪಡೆದುಕೊಂಡರು. ಒಂದು ರೀತಿಯಲ್ಲಿ ಹಿಂದಿನ ಕಾನೂನು ಮಂತ್ರಿ ಅರುಣ್ ಜೆಟ್ಲಿ ಅವರು ಹೇಳಿದಂತೆ ನ್ಯಾಯಾಧೀಶರುಗಳು ಅವರ ಕೆಲವೊಂದು ತೀರ್ಪು, ನಿವೃತ್ತಿ ಜೀವನದ ನಂತರ ಅವರಿಗೆ ದೊರಕುವ ಸವಲತ್ತು ಅಥವಾ ಅಧಿಕಾರವನ್ನು ಅವಲಂಬಿಸಿದೆ ಎನ್ನುವ ಮಾತು ನಿಜವೇ ಎಂಬ ಸಂಶಯ ಜನರಲ್ಲಿ ಮೂಡಿಸುವಂತಾಗಿದೆ. ಹಾಗೆಯೇ ಬಹಳ ದೊಡ್ಡ ಸುದ್ದಿಯಲ್ಲಿದ್ದವರು ಎಂದರೆ ಜಸ್ಟಿಸ್ ಕಣ್ಣನ್ ಅವರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಇತರ ನ್ಯಾಯಮೂರ್ತಿಗಳ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿ ನ್ಯಾಯಾಂಗ ನಿಂದನೆಯಡಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದ ಮತ್ತು ಸೇವೆಯಲ್ಲಿದ್ದ ಪ್ರಥಮ ನ್ಯಾಯಮೂರ್ತಿಯೆಂಬ ಅಪಕೀರ್ತಿಗೆ ಒಳಗಾದವರು. ಇದರಿಂದ ನ್ಯಾಯಾಂಗ ವ್ಯವಸ್ಥೆಯ ಘನತೆಗೆ ದೊಡ್ಡ ಆಘಾತವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇತ್ತೀಚೆಗೆ ಪ್ರಚಲಿತವಾಗಿರುವ ಪ್ರಕರಣ ಅಂದರೆ ಜಸ್ಟಿಸ್ ಯಶವಂತ್ ವರ್ಮ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ದೊಡ್ಡಮಟ್ಟದಲ್ಲಿ ನಗದು ಹಣ ಬೆಂಕಿಯಲ್ಲಿ ಸುಟ್ಟುಹೋಗಿ ಅವರ ಮೇಲೆ ಗುರುತರ ಆರೋಪ ಜನರನ್ನು ತಲ್ಲಣಗೊಳಿಸಿದೆ. ಈ ಆರೋಪದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ನೇಮಕ ಮಾಡಿದ ಸಮಿತಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿ ಈಗ ಅವರನ್ನು ಇಂಪೀಚ್ಮೆAಟ್ ಮಾಡಲು ಸಂಸತ್ತಿಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ವರದಿ ಸಲ್ಲಿಸಿದ್ದಾರೆ. ಇದು ಸಹ ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಒಂದು ಕಪ್ಪುಚುಕ್ಕಿ.
ನಿವೃತ್ತ ನ್ಯಾಯಮೂರ್ತಿಗಳು ತಮ್ಮ ಸೇವಾವಧಿಯ ನಂತರ ಕೇಂದ್ರ ಸರ್ಕಾರ ಇಲ್ಲವೇ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುವ ಕೆಲವೊಂದು ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಒಂದು ಒಳ್ಳೆಯ ಬೆಳವಣಿಗೆಯಲ್ಲ. ಈಗಾಗಲೇ ಹೇಳಿದಂತೆ ಜಸ್ಟಿಸ್ ರಂಜನ್ ಗೊಗೋಯ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ನಂತರ ರಾಜ್ಯಸಭೆಯ ಸದಸ್ಯತ್ವವನ್ನು ತೆಗೆದುಕೊಂಡಿದ್ದು ಹಾಗೆ ಜಸ್ಟಿಸ್ ಅಬ್ದುಲ್ ನಜೀರ್‌ರವರು ತಮ್ಮ ನಿವೃತ್ತಿಯ ತಕ್ಷಣದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದು ಮತ್ತು ಜಸ್ಟಿಸ್ ಸತಶಿವಮ್ ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ನಂತರ ಕೇರಳದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡದ್ದು, ಇಂತಹ ಹಲವಾರು ಸಂದರ್ಭಗಳು ನ್ಯಾಯಪೀಠದ ಗೌರವಕ್ಕೆ ಧಕ್ಕೆಯನ್ನು ಉಂಟು ಮಾಡಿದೆ ಮತ್ತು ಜನರು ನ್ಯಾಯಾಂಗ ವ್ಯವಸ್ಥೆ ಮೇಲಿಟ್ಟಿರುವ ನಂಬಿಕೆಗೆ ಒಂದು ರೀತಿಯಲ್ಲಿ ದ್ರೋಹಬಗೆದಂತಾಗುತ್ತದೆ.
ಇತ್ತೀಚೆಗೆ ಹೈಕೋರ್ಟ್ನ ನ್ಯಾಯಾಧೀಶರೊಬ್ಬರು ಬೆಂಗಳೂರಿನ ಬಡಾವಣೆಯೊಂದನ್ನು ಪಾಕಿಸ್ತಾನಕ್ಕೆ ಹೋಲಿಸಿ ನ್ಯಾಯಾಲಯದಲ್ಲಿ ಮಾತನಾಡಿದ್ದಲ್ಲದೆ ಮಹಿಳಾ ವಕೀಲೆಯನ್ನು ಉದ್ದೇಶಿಸಿ "ಇನ್ನೊಬ್ಬ ವಕೀಲ ಯಾವ ಒಳ ಉಡುಪನ್ನು ಹಾಕಿದ್ದಾರೆ" ಎಂದೂ ಹೇಳುತ್ತೀರಿ ಎಂದ ಸಡಿಲ ನಾಲಿಗೆಯ ಮಾತುಗಳು ನ್ಯಾಯಾಧೀಶರ ಗೌರವಕ್ಕೆ ತಕ್ಕುದಲ್ಲ ಎನ್ನುವ ಜನಸಾಮಾನ್ಯರ ಅಭಿಪ್ರಾಯದ ಬಗ್ಗೆ ಸುಪ್ರೀಂ ಕೋರ್ಟ್ ಈ ನ್ಯಾಯಾಧೀಶರಿಗೆ ಎಚ್ಚರಿಕೆ ಕೊಟ್ಟಿದ್ದು ಕೂಡ ಇತ್ತೀಚಿನ ಬೆಳವಣಿಗೆಯಾಗಿದೆ. ನ್ಯಾಯಾಧೀಶರುಗಳನ್ನು "ಸ್ವಾಮಿ" "ಮೈಲಾರ್ಡ್" ಎನ್ನುವ ವಕೀಲರಿಗೂ, ಕಕ್ಷಿದಾರರಿಗೂ ನ್ಯಾಯಾಧೀಶರ ಇಂತಹ ಮಾತುಗಳಿಂದ ನ್ಯಾಯಾಂಗ ಮೇಲಿನ ನಂಬಿಕೆಗಳೇ ಕಡಿಮೆಯಾಗುತ್ತವೆ. ಜನರ ಮಾತು, ಜನರ ನಡತೆ, ಜನರ ವರ್ತನೆ ಹೇಗಿರಬೇಕು ಎಂದು ಹೇಳುವ ನ್ಯಾಯಾಧೀಶರೇ ಹೀಗೆಲ್ಲಾ ಮಾತನಾಡುತ್ತಾರಲ್ಲ ಎಂದು ಜನ ಪ್ರಶ್ನಿಸುವಂತೆ ಆಗಿದೆ.
ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ
ನ್ಯಾಯದಾನ ಪ್ರಕ್ರಿಯೆಯ ಇನ್ನೊಂದು ಪ್ರಮುಖ ಅಂಗವಾದ ಪೊಲೀಸ್ ಇಲಾಖೆಯಲ್ಲಿಯೂ ಸುಧಾರಣೆಯ ಅವಶ್ಯಕತೆ ಇದೆ. ಎಷ್ಟೋ ಗಂಭೀರ ಪ್ರಕರಣಗಳಲ್ಲಿ ಸರಿಯಾದ ತನಿಖೆಯಾಗದೆ ಸೂಕ್ತ ಸಾಕ್ಷಾö್ಯಧಾರದ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳು ಬಿಡುಗಡೆ ಆಗುತ್ತಿರುವ ಉದಾಹರಣೆಗಳನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ.
ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಅಂದರೆ ಕೊಲೆ, ಅತ್ಯಾಚಾರ, ದರೋಡೆ, ಸೈಬರ್ ಅಪರಾಧ, ಭ್ರಷ್ಟಾಚಾರ ಇವುಗಳನ್ನು ತ್ವರಿತ ನ್ಯಾಯಾಲಯದ ಮುಖಾಂತರ ವಿಚಾರಣೆ ಕೈಗೊಂಡು ಅಪರಾಧಿಗಳಿಗೆ ಶಿಕ್ಷೆ ಆಗುವಂತಹ ವ್ಯವಸ್ಥೆ ಜಾರಿಗೆ ಬಂದರೆ ಜನಸಾಮಾನ್ಯರಿಗೆ ಕಾನೂನು ಪಾಲಕರ ಮೇಲೆ ಮತ್ತು ನ್ಯಾಯಾಲಯದ ಮೇಲೆ ಇನ್ನಷ್ಟು ನಂಬಿಕೆ ಹೆಚ್ಚುತ್ತದೆ.
ವಕೀಲರ ಕರ್ತವ್ಯ
ನ್ಯಾಯಾಂಗ ವ್ಯವಸ್ಥೆಯಲ್ಲಿ ದೊಡ್ಡ ಪಾತ್ರವನ್ನು ವಹಿಸಿರುವ ವಕೀಲರು ಸಹ ತಮ್ಮ ವೃತ್ತಿ ಧರ್ಮವನ್ನು ಮರೆಯದೇ ತಮ್ಮ ಬಳಿ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ. ವಕೀಲರು ಹಣದ ಹಂಬಲಕ್ಕೆ ಬೀಳದೆ ತಮ್ಮ ಬಳಿ ಬಂದ ಕಕ್ಷಿದಾರರ ಹಿತರಕ್ಷಣೆಯನ್ನು ಮಾಡುವ ಮಹತ್ತರ ಜವಾಬ್ದಾರಿ ವಕೀಲರ ಮೇಲಿದೆ ಎಂದು ಅರಿತು ತಮ್ಮ ವೃತ್ತಿಯನ್ನು ನಡೆಸಿಕೊಂಡು ಹೋದರೆ ಅದು ಸಮಾಜಕ್ಕೆ ಒಂದು ದೊಡ್ಡ ಕೊಡುಗೆಯಾಗುತ್ತದೆ. ಇದರಿಂದ ನಾವು ಸಹ ಸಾರ್ಥಕತೆಯನ್ನು ಕಂಡುಕೊಳ್ಳಬಹುದು.
ನ್ಯಾಯಾAಗ ವ್ಯವಸ್ಥೆಯನ್ನು ಕಾಡುತ್ತಿರುವ ಇನ್ನಿತರ ಸವಾಲುಗಳು ಎಂದರೆ; ಪರಿಕರಗಳ ಅಭಾವ, ಕಾನೂನುಗಳ ಜಟಿಲತೆ, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಪ್ರಮುಖವಾಗಿ ಸೈಬರ್ ಅಪರಾಧ ಮತ್ತು ಆರ್ಥಿಕ ವ್ಯವಹಾರಕ್ಕೆ ಸಂಬAಧಪಟ್ಟAತಹ ಅಪರಾಧಗಳು, ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ, ಅಧಿಕ ಖರ್ಚು (ಊigh ಅosಣ oಜಿ ಐiಣigಚಿಣioಟಿ) ಭಾರತದ ಕಾನೂನು ವ್ಯವಸ್ಥೆಯ ಸುಧಾರಣೆಗೆ ಬೇಕಾದ ಪ್ರಮುಖ ಪರಿಹಾರ
೧. ತ್ವರಿತ ನ್ಯಾಯಾಲಯಗಳ ಸ್ಥಾಪನೆ
೨. ಡಿಜಿಟಲೀಕರಣ ಮತ್ತು ತಂತ್ರಜ್ಞಾನ ಬಳಕೆ
೩. ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ವೇಗ ಹಾಗೂ ಪಾರದರ್ಶಕತೆ
೪. ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆ
೫. ಸರಳ ಮತ್ತು ಜನಸ್ನೇಹಿ ಕಾನೂನು ಪ್ರಕ್ರಿಯೆ
೬. ಲೋಕ್ ಅದಾಲತ್‌ಗಳು ಮತ್ತು ಮಧ್ಯಸ್ಥಿಕೆ ವ್ಯವಸ್ಥೆ
೭. ನ್ಯಾಯಾಂಗದಲ್ಲಿ ಭ್ರಷ್ಟಾಚಾರ ನಿವಾರಣೆ
೮. ಕಾನೂನು ಶಿಕ್ಷಣದ ಸುಧಾರಣೆ
೯. ಸಾರ್ವಜನಿಕ ಜಾಗೃತಿ ಅಭಿಯಾನ
ಇತ್ತೀಚೆಗೆ ಕೇಂದ್ರ ಸರ್ಕಾರದ ಕಾನೂನು ಇಲಾಖೆಯಿಂದ ಹೊಸದೊಂದು ಶಿಫಾರಸ್ಸು ಹೊರಡಿಸಿದ್ದು ಅದರ ಪ್ರಕಾರ ದೇಶಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಸಂಜೆ ನ್ಯಾಯಾಲಯವನ್ನು ಸ್ಥಾಪನೆ ಮಾಡುವಂತಹ ಉದ್ದೇಶವನ್ನು ಪ್ರಸ್ತಾಪಿಸಲಾಗಿದೆ. ಇಂತಹ ಸಂಜೆ ನ್ಯಾಯಾಲಯಗಳು ಸಾಯಂಕಾಲ ೫ ಗಂಟೆಯಿAದ ರಾತ್ರಿ ೯ ರವರೆಗೆ ಕೆಲಸ ನಿರ್ವಹಿಸುವ ಒಂದು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಇಂತಹ ನ್ಯಾಯಾಲಯಕ್ಕೆ ನಿಯೋಜಿಸಲಾಗಿದೆ.
ಇಂತಹ ಯೋಜನೆ ಜನಸಾಮಾನ್ಯರಿಗೆ ಇನ್ನಷ್ಟು ಅನಾನುಕೂಲ ಉಂಟುಮಾಡುತ್ತದೆಯೇ ಹೊರತು ಇದರಿಂದ ಯಾವುದೇ ಫಲಪ್ರದವಾಗುವಂತಹ ಸನ್ನಿವೇಶ ಇಲ್ಲ. ಈ ಪ್ರಯೋಗ ನಿವೃತ್ತರಾದ ಜಿಲ್ಲಾ ನ್ಯಾಯಾಧೀಶರಿಗೆ ಒಂದು ರೀತಿಯ ಪುನರ್ವಸತಿ ಕೇಂದ್ರ ಒದಗಿಸಿದಂತಾಗುತ್ತದೆ ಮತ್ತು ವಕೀಲರಿಗೂ, ಕಕ್ಷಿದಾರರಿಗೂ ಹೆಚ್ಚಿನ ಸಮಸ್ಯೆಯನ್ನು ಉಂಟುಮಾಡುತ್ತದೆ ಎನ್ನುವುದು ಎಲ್ಲಾ ವಕೀಲರ ಸಂಘದ ಅಭಿಪ್ರಾಯ.
ಶೀಘ್ರ ನ್ಯಾಯ ಒದಗಿಸಿಕೊಡಬೇಕಾದರೆ ಇರುವ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಮತ್ತು ತ್ವರಿತ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಿ ವ್ಯವಸ್ಥೆಗೆ ಒಂದು ಹೊಸ ರೂಪವನ್ನು ಕೊಡಬಹುದೇ ಹೊರತು ಈಗ ಪ್ರಾಯೋಗಿಕವಾಗಿ ಮಾಡಲು ಹೊರಟಿರುವ ಸಂಜೆ ನ್ಯಾಯಾಲಯದ ಯೋಜನೆಯಿಂದಲ್ಲ.
ನ್ಯಾಯಾಲಯಗಳ ಬಗ್ಗೆ ಜನರು ಇಟ್ಟಿರುವ ನಂಬಿಕೆ, ಭರವಸೆ ಮತ್ತು ಪೂಜನೀಯ ಭಾವ ಎಂದಿಗೂ ದೂರವಾಗಬಾರದು. ಅಂತಹ ಸನ್ನಿವೇಶ ಬಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಸುಭದ್ರ ಮತ್ತು ಶಾಂತಿಯುತ ಸಮಾಜಕ್ಕೆ ಮಾರಕವಾಗುತ್ತದೆ. ಈ ದಿಸೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾಲುದಾರರಾಗಿರುವ ನ್ಯಾಯಾಧೀಶರಾಗಲಿ ನ್ಯಾಯವಾದಿಗಳಾಗಲಿ, ಕೈಜೋಡಿಸಿ ಸಂವಿಧಾನದ ಮೂಲ ಸಿದ್ಧಾಂತವನ್ನು ಎತ್ತಿಹಿಡಿದು ನ್ಯಾಯಾಂಗ ವ್ಯವಸ್ಥೆಯ ಘನತೆ ಮತ್ತು ಗೌರವವನ್ನು ಕಾಪಾಡುವ ಕೆಲಸವಾಗಬೇಕಿದೆ.
- ಎಂ.ಎ. ನಿರಂಜನ್, ವಕೀಲರು, ಮಡಿಕೇರಿ, ೯೪೪೮೧೫೬೫೮೩.