ವೀರಾಜಪೇಟೆ, ಆ. ೧೨: ನಿವೃತ್ತ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ಠೇವಣಾತಿಯಲ್ಲಿ ಹೆಚ್ಚಿನ ಬಡ್ಡಿ ಹಾಗೂ ನೀಡುವ ಸಾಲದಲ್ಲಿ ಕಡಿಮೆ ಬಡ್ಡಿ ವಿಧಿಸಲು ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಹಾಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಇಲ್ಲಿನ ಪಟ್ಟಣ ಸಹಕಾರ ಬ್ಯಾಂಕ್‌ನ ಕಟ್ಟಡದಲ್ಲಿ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ್ಲ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.
ಮಡಿಕೇರಿ, ವೀರಾಜಪೇಟೆ, ಪೊನ್ನಂಪೇಟೆಯಲ್ಲಿ ಸಂಘ ಕಾರ್ಯವ್ಯಾಪಿ ಹೊಂದಿದೆ. ೨೦೨೪-೨೫ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಂತೆ ಸಂಘ ‘ಎ+’ ಶ್ರೇಣಿ ಪಡೆದುಕೊಂಡಿದೆ. ಸಂಘವು ೧೩೨೫ ಸದಸ್ಯರನ್ನು ಹೊಂದಿದ್ದು, ರೂ. ೯೭ ಲಕ್ಷ ಪಾಲು ಬಂಡವಾಳ ಹೊಂದಿದೆ. ಒಟ್ಟು ರೂ. ೮ ಕೋಟಿ ೪೦ ಲಕ್ಷ ಠೇವಣಾತಿ ಇದೆ. ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿದ್ದಾರೆ ಎಂದು ಅಧ್ಯಕ್ಷ ಉಮೇಶ್ ಮುತ್ತಣ್ಣ ತಿಳಿಸಿದರು.
೨೦೨೪-೨೫ನೇ ಸಾಲಿನಲ್ಲಿ ೨೦,೫೫,೪೪೮ ರೂ ನಿವ್ವಳ ಲಾಭಗಳಿಸಿದೆ. ಈ ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ ೧೦ ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಚಂಬಾAಡ ಕರುಣ್ ಕಾಳಯ್ಯ, ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕುಪ್ಪಣಮಾಡ ಬಿದ್ದಪ್ಪ, ಬೊಳಕಾರಂಡ ವಿಠಲ, ಚಾರಿಮಂಡ ಪ್ರಕಾಶ್, ಕುಲ್ಲಚಂಡ ಪೂಣಚ್ಚ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಸದಸ್ಯರುಗಳ ಮಕ್ಕಳು ಹಾಗೂ ಹೆಚ್ಚು ಪಿಗ್ಮಿ ಸಂಗ್ರಹ ಮಾಡಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಚೇಂದAಡ ವಸಂತ್ ಕುಮಾರ್, ನಿರ್ದೇಶಕರುಗಳಾದ ನೆಲ್ಲಮಕ್ಕಡ ಬೆಳ್ಯಪ್ಪ, ಕಾಂಡAಡ ಚರ್ಮಣ, ಐನಂಡ ಗಣಪತಿ, ಕೇಳಪಂಡ ವಿಶ್ವನಾಥ್, ಚೇಂದ್ರಿಮಾಡ ನಂಜಪ್ಪ, ವಾಟೇರಿರ ಪೂವಯ್ಯ, ಕೊಂಗAಡ ನಾಣಯ್ಯ, ನೆಲ್ಲಚಂಡ ಭೀಮಯ್ಯ, ಕಾಳೇಂಗಡ ತಿಮ್ಮಯ್ಯ, ಮೇಕೆರಿರ ಪಾಲಿ ಸುಬ್ರಮಣಿ, ಪಟ್ಟಡ ದಿವ್ಯಾ, ಕಾರ್ಯನಿರ್ವಣಾಧಿಕಾರಿ ಪಟ್ಟಡ ಟೀನಾ ಉಪಸ್ಥಿತರಿದ್ದರು.