ರೈತ ಹೋರಾಟ ಸಮಿತಿಯು ಕರೆನೀಡಿದ್ದ ಸೋಮವಾರಪೇಟೆ ತಾಲೂಕು ಬಂದ್‌ಗೆ ಶನಿವಾರಸಂತೆಯಲ್ಲಿ ಬೆಂಬಲ ವ್ಯಕ್ತವಾಯಿತು. ವಾಣಿಜ್ಯೋದ್ಯಮಿಗಳ ಸಂಘ ಬೆಂಬಲ ವ್ಯಕ್ತಪಡಿಸಿದ್ದರಿಂದ ಬೆಳಿಗ್ಗೆ ೬ ರಿಂದ ಸಂಜೆ ೬ ರವರೆಗೆ ಪಟ್ಟಣದಲ್ಲಿ ಅಂಗಡಿಮುAಗಟ್ಟು, ಹೊಟೇಲ್ ಮುಚ್ಚಲ್ಪಟ್ಟಿದ್ದವು. ವಿವಿಧ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ವಿವಿಧ ಬ್ಯಾಂಕ್‌ಗಳು ಸ್ವಯಂ ಪ್ರೇರಿತವಾಗಿಮುಚ್ಚಲ್ಪಟ್ಟವು.

ಬೆರಳೆಣಿಕೆ ಅಂಗಡಿ ಮುಂಗಟ್ಟುಗಳು, ಬ್ಯಾಂಕ್‌ಗಳು ತೆರೆದಿದ್ದರಿಂದ ನಮ್ಮ ಬೆಳೆಗಾರರ ಸಂಘ, ರೈತ ಸಂಘ, ನಿವೃತ್ತ ಸೈನಿಕರ ಸಂಘ, ಇತರೆ ಸಂಘಟನೆಗಳು ಮನವೊಲಿಸಿ ಮುಚ್ಚಿಸಿದವು. ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಬೆಳಿಗ್ಗೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹೋಬಳಿ ವ್ಯಾಪ್ತಿಯ ಬೆಳೆಗಾರರು, ರೈತರು ಸಮಾವೇಶಗೊಂಡು ಮಾನವ ಸರಪಳಿ ನಿರ್ಮಿಸಿ, ರೈತ ಪರ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಎಂ. ಉಮಾಶಂಕರ್ ಮಾತನಾಡಿ, ರೈತರಿಗೆ ಬಹಳ ಸಮಸ್ಯೆಗಳಾಗುತ್ತಿದ್ದು; ಸರ್ಕಾರದ ಕಣ್ಣು ತೆರೆಸಲು ಬಂದ್ ಮಾಡುತ್ತಿದ್ದೇವೆ ಎಂದರು. ಬೆಳೆಗಾರ ಎಸ್ .ಎನ್.ರಘು ಮಾತನಾಡಿ, ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಬೆಳೆಗಾರರಾದ ಅನಂತ್ ಕುಮಾರ್, ರಕ್ಷಿತ್, ಚಂದ್ರಕಾAತ್, ಸಿ.ಜೆ. ಗಿರೀಶ್ ಮಾತನಾಡಿದರು. ನಂತರ ರೈತ ಹೋರಾಟ ಸಮಿತಿ, ಕಾಫಿ ಬೆಳೆಗಾರರ ಸಂಘ, ವರ್ತಕರ ಸಂಘ ಮತ್ತಿತರ ಸಂಘಟನೆಗಳ ಪ್ರಮುಖರು ಬೆಳೆಗಾರರು ಶನಿವಾರಸಂತೆ ವಲಯ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ “ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ರೈತರ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗ ಬಾರದು’ ಎಂದು ಘೋಷಣೆ ಕೂಗಿದರು. ಅರಣ್ಯ ಇಲಾಖೆ ಕಚೇರಿ ಯನ್ನು ಮುಚ್ಚುವಂತೆ ಒತ್ತಾಯಿಸಿದಾಗ ಮಣಿದ ಇಲಾಖಾಧಿಕಾರಿಗಳು ಕಚೇರಿ ಮುಚ್ಚಿದರು.

ಸಂಘಟನೆಗಳ ಪ್ರಮುಖರಾದ ಕೇಶವಮೂರ್ತಿ, ವಿನೋದ್, ಪುನೀತ್, ಸರ್ದಾರ್ ಅಹಮ್ಮದ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಹೋಬಳಿ ಯಾದ್ಯಂತ ೨೦೦ ಕ್ಕೂ ಅಧಿಕ ರೈತರು, ಬೆಳೆಗಾರರು ಪಾಲ್ಗೊಂಡಿದ್ದರು. - ನಯನತಾರ