ನಾಪೋಕ್ಲು, ಆ. ೧೩: ಸಮೀಪದ ಪಾಲೆಮಾಡುವಿನ ಏಕದಂತ ಸೇವಾ ಸಮಿತಿ ವತಿಯಿಂದ ಹತ್ತನೇ ವರ್ಷದ ಗೌರಿ ಗಣೇಶೋತ್ಸವವನ್ನು ತಾ. ೨೭ ರಿಂದ ೨೯ ರವರೆಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ತಾ. ೨೭ ರಂದು ಬುಧವಾರ ಬೆಳಿಗ್ಗೆ ೮:೩೦ ಗಂಟೆಗೆ ಶ್ರೀ ಮಹಾ ಗಣಪತಿ ಹೋಮ ಮತ್ತು ಶ್ರೀ ವಿನಾಯಕನ ಪ್ರತಿಷ್ಠಾಪನೆ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ೬ ಗಂಟೆಗೆ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ತಾ. ೨೯ ರಂದು ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಮಹಾಮಂಗಳಾರತಿ ಬಳಿಕ ವಿನಾಯಕ ಮೂರ್ತಿಯನ್ನು ಪಾಲೆ ಮಾಡುವಿನ ಮುಖ್ಯಬೀದಿಯಲ್ಲಿ ಮೆರವಣಿಗೆ ಮಾಡಿ ಬಲಮುರಿಯ ಶ್ರೀ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಏಕದಂತ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.