ಮಡಿಕೇರಿ, ಆ. ೧೩ ; ಮಡಿಕೇರಿ ನಗರದ ಹೊಸ ಖಾಸಗಿ ಬಸ್ ನಿಲ್ದಾಣದ ಪ್ರವೇಶದಲ್ಲಿ ಎದ್ದು ಹೋಗಿದ್ದ ಕಬ್ಬಿಣದ ರಾಡುಗಳನ್ನು ದುರಸ್ತಿ ಪಡಿಸಲಾಯಿತು.

ರಾಡುಗಳು ಎದ್ದು ಹೋಗಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದುದಲ್ಲದೆ ಹಲವು ವಿದ್ಯಾರ್ಥಿಗಳು ಬಿದ್ದು ಗಾಯಗೊಳಗಾದ ಘಟನೆಗಳೂ ನಡೆದಿವೆ. ಇದನ್ನು ಗಮನಿಸಿದ ಈ ವಿಭಾಗದ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಅವರು ಈ ಬಗ್ಗೆ ಅಧ್ಯಕ್ಷೆ ಕಲಾವತಿ ಹಾಗೂ ಉಪಾಧ್ಯಕ್ಷ ಮಹೇಶ್ ಜೈನಿ ಗಮನಕ್ಕೆ ತಂದಿದ್ದು ಇಂದು ತುರ್ತಾಗಿ ರಾಡ್‌ಗಳನ್ನು ವೆಲ್ಡ್ ಮಾಡುವ ಮೂಲಕ ದುರಸ್ತಿ ಪಡಿಸಲಾಯಿತು. ಈ ಸಂದರ್ಭ ಬಿಜೆಪಿ ನಗರ ಉಪಾಧ್ಯಕ್ಷ ಡಿ.ಪಿ. ಡಿಶು ಇದ್ದರು.