ಮಡಿಕೇರಿ, ಆ. ೧೩: ವೀರಾಜಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸ್ಪರ್ಧಾ ಕಣದಲ್ಲಿದ್ದ ಒಟ್ಟು ೯ ಅಭ್ಯರ್ಥಿಗಳು ಪಡೆದಿರುವ ಮತ ವಿವರ ಇಲ್ಲಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಅಮ್ಮುಣಿಚಂಡ ರವಿ ಉತ್ತಪ್ಪ ಅವರು ೮೧೮ ಮತ ಗಳಿಸಿದ್ದರೆ, ಮತ್ತೋರ್ವ ಅಭ್ಯರ್ಥಿ ಮುಲ್ಲೇಂಗಡ ಶಂಕರಿ ಪೊನ್ನಪ್ಪ ೪೬೭ ಮತ ಗಳಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದು, ಜಯ ಸಾಧಿಸಿರುವ ಕಾಣತಂಡ ಜಗದೀಶ್ (ಜಗ್ಗ) ಅವರಿಗೆ ೫೮೧ ಮತ ಲಭ್ಯವಾಗಿದ್ದರೆ ಪ್ರತಿ ಸ್ಪರ್ಧಿಗಳಾಗಿದ್ದ ಅಂಜಪರವAಡ ಅನಿಲ್ ಮಂದಣ್ಣ ಅವರಿಗೆ ೫೭೨ ಮತ ಹಾಗೂ ಮತ್ತೋರ್ವ ಅಭ್ಯರ್ಥಿ ಮಾಳೇಟಿರ ಕಾಳಯ್ಯ ಅವರಿಗೆ ೧೨೦ ಮತ ದೊರೆತಿದೆ.

ಮಹಿಳಾ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಲ್ವರ ಪೈಕಿ ಜಯಗಳಿಸಿರುವ ಮೂವರು ಅಭ್ಯರ್ಥಿಗಳಾದ ಮೆಕೇರಿರ ಪಾಲಿ ಸುಬ್ರಮಣಿ ಅವರಿಗೆ ೧೦೫೫, ಮೇರಿಯಂಡ ಗಾಯತ್ರಿ ಅಚ್ಚಯ್ಯ ಅವರಿಗೆ ೯೭೦, ನಡಿಕೇರಿಯಂಡ ಶಿಲ್ಪ ತಿಮ್ಮಯ್ಯ ಅವರಿಗೆ ೯೫೦ ಮತ ದೊರೆತಿದೆ. ಮತ್ತೋರ್ವ ಸ್ಪರ್ಧಿ ಬೊಳ್ಯಪಂಡ ರುಕ್ಮಿಣಿ ಮುತ್ತಪ್ಪ ಅವರಿಗೆ ೪೭೨ ಮತ ಬಂದಿದೆ. ಆಡಳಿತ ಮಂಡಳಿಯ ಇತರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.