ಮಡಿಕೇರಿ, ಆ. ೧೩: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡಗಳಲ್ಲಿ ಮುಂದುವರೆದ ಕಾಮಗಾರಿಗೆ ತಾ. ೧೫ ರಂದು ಭೂಮಿಪೂಜೆ ನೆರವೇರಲಿದೆ. ಸರಕಾರಿ ಈ ಕಟ್ಟಡಗಳ ಕೆಲಸಕ್ಕೆ ರೂ. ೪೧ ಕೋಟಿ ನೀಡಿದ್ದು, ಇದನ್ನು ಬಳಸಿಕೊಂಡು ಕೆಲಸ ಪೂರ್ಣಗೊಳಿಸಲಾಗುವುದು. ತಾ. ೧೫ ರ ಮಧ್ಯಾಹ್ನ ೧ ಗಂಟೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.