ಮಡಿಕೇರಿ, ಆ. ೧೩: ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿ ವ್ಯಾಪಕ ವಿರೋಧಕ್ಕೆ ಒಳಗಾಗಿದ್ದ ರಾಜಾಸೀಟ್ನಲ್ಲಿ ‘ಗ್ಲಾಸ್ ಬ್ರಿಡ್ಜ್ ಹಾಗೂ ಫುಡ್ ಕೋರ್ಟ್’ ನಿರ್ಮಾಣ ಯೋಜನೆಯನ್ನು ಕೊನೆಗೂ ರಾಜ್ಯ ಸರಕಾರ ಕೈ ಬಿಟ್ಟಿರುವ ಕುರಿತು ‘ಶಕ್ತಿ’ಗೆ ಅಧಿಕೃತ ಮೂಲಗಳು ದೃಢಪಡಿಸಿದ್ದು, ಇದನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೂಡ ಒಪ್ಪಿಕೊಂಡಿದ್ದಾರೆ.
ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಕೇಂದ್ರಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವ ರಾಜಾಸೀಟ್ ತನ್ನ ವಾತಾವರಣ, ಪರಿಸರ ಹಾಗೂ ವಿಹಂಗಮ ನೋಟದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಹಚ್ಚ ಹಸಿರನ್ನು ಹೊದ್ದು ಮಲಗಿರುವ ಈ ಜಾಗದಲ್ಲಿ ಸೂರ್ಯಸ್ತಮಾನ ನೋಡುವುದೇ ಒಂದು ಆಹ್ಲಾದಕರ ಅನುಭವವಾಗಿದೆ. ವಾಯು ವಿಹಾರಕ್ಕಂತೂ ಹೇಳಿ ಮಾಡಿಸಿದ ಈ ಜಾಗ ಪ್ರವಾಸಿಗರು ಮಾತ್ರವಲ್ಲ ಸ್ಥಳೀಯರಿಗೂ ಅಚ್ಚುಮೆಚ್ಚು. ಇಂತಹ ಜಾಗದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದ್ದಲ್ಲಿ ಸೌಂದರ್ಯಕ್ಕೆ ಧಕ್ಕೆಯಾಗುವುದರೊಂದಿಗೆ ಭೌಗೋಳಿಕ ಸಮಸ್ಯೆಗಳಿಂದ ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪದಂತಹ ಅನಾಹುತಗಳು ಸಂಭವಿಸುತ್ತವೆೆ ಎಂಬ ವಿರೋಧ ಜಿಲ್ಲೆಯ ಜನರಿಂದ ವ್ಯಕ್ತವಾಗತೊಡಗಿತ್ತು. ರಾಜಕೀಯವಾಗಿಯೂ ಪರ-ವಿರೋಧದ ಚರ್ಚೆಗೂ ಒಳಗಾಗಿತ್ತು.
ಗಮನ ಸೆಳೆದಿದ್ದ ‘ಶಕ್ತಿ’
ರಾಜಾಸೀಟ್ ಒಳಭಾಗದಲ್ಲಿ ಗ್ಲಾಸ್ ಬ್ರಿಡ್ಜ್ ಹಾಗೂ ಫುಡ್ ಕೋರ್ಟ್ ನಿರ್ಮಾಣ ಪ್ರಸ್ತಾಪದ ಬಗ್ಗೆ ಒಂದು ವರ್ಷದ ಹಿಂದೆಯೇ ‘ಶಕ್ತಿ’ ವಿಸ್ತೃತ ವರದಿ ಪ್ರಕಟಗೊಳಿಸಿ ಪ್ರಸ್ತಾಪಿತ ಯೋಜನೆಯ ಬಗ್ಗೆ ಬೆಳಕು ಚೆಲ್ಲಿತ್ತು. ಈ ವೇಳೆಯೇ ಇದಕ್ಕೆ ವಿರೋಧಗಳು ಆರಂಭಗೊAಡಿದ್ದವು.
೨೦೨೪ರ ಜುಲೈ ೬ ರಂದು ಬೆಂಗಳೂರಿನಲ್ಲಿ ಸಭೆ ನಡೆದ ಬಗ್ಗೆ ವರದಿ ಮಾಡಲಾಗಿತ್ತು. ಜೂನ್ ೨ ರಂದು ಖಾಸಗಿ ಸಹಭಾಗಿತ್ವದಲ್ಲಿ ಗ್ಲಾಸ್ ಬ್ರಿಡ್ಜ್ ಹಾಗೂ ಫುಡ್ ಕೋರ್ಟ್ ನಿರ್ಮಾಣಕ್ಕೆ ಅನುಮೋದನೆಗೊಂಡಿರುವ ಬಗ್ಗೆಯೂ ‘ಶಕ್ತಿ’ ಮೊದಲು ಸುದ್ದಿ ಪ್ರಕಟಿಸಿತ್ತು.
ಜುಲೈ ೧೬ ರಂದು ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿಯೂ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಸಂಬAಧ ಚರ್ಚೆಗಳು ನಡೆದಾಗ ಸಭೆಗೆ ಹಾಜರಾಗಿದ್ದ ವಿಶೇಷ ಆಹ್ವಾನಿತ ಜಿ. ಚಿದ್ವಿಲಾಸ್ ಅವರು ಇದರಿಂದಾಗುವ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿ ಯೋಜನೆ ರದ್ದಿಗೆ ಆಗ್ರಹಿಸಿದ್ದರು.
ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ನೀಡದೆ ಬೆಂಗಳೂರು ಮಟ್ಟದಲ್ಲಿ ಗ್ಲಾಸ್ ಬ್ರಿಡ್ಜ್ ಹಾಗೂ ಫುಡ್ ಕೋರ್ಟ್ ನಿರ್ಮಾಣಕ್ಕೆ ರೂ. ೧೫ ಕೋಟಿಯ ಟೆಂಡರ್ ನಡೆದ ಬಗ್ಗೆ ಮೊದಲು ‘ಶಕ್ತಿ’ ವರದಿ ಪ್ರಕಟಿಸಿತ್ತು. ಗುಟ್ಟಾಗಿ ನಡೆದ ಈ ಪ್ರಕ್ರಿಯೆಯಿಂದ ಯೋಜನೆಯ ಬಗ್ಗೆ ಅನುಮಾನ ಮೂಡಿತ್ತು. ಅದಲ್ಲದೆ ಟೆಂಡರ್ದಾರರೊAದಿಗೆ ಪೂರ್ವಭಾವಿ ಸಭೆಯನ್ನು ನಡೆಸಿದ ಬಗ್ಗೆಯೂ ಬೆಳಕಿಗೆ ತಂದಿತ್ತು. ಕಾನೂನಿನಡಿ ಬರುವ ತೊಡಕುಗಳ ಬಗ್ಗೆಯೂ ವರದಿಯಾಗಿತ್ತು.
ವ್ಯಾಪಕ ವಿರೋಧ
ತೋಟಗಾರಿಕಾ ಇಲಾಖೆಯಡಿ ನಿರ್ವಹಣೆಗೊಳಪಟ್ಟಿರುವ ಹಾಗೂ ಪುರಾತತ್ವ ಇಲಾಖೆ ಮೇಲ್ವಿಚಾರಣೆ ಯಲ್ಲಿರುವ ರಾಜಾಸೀಟ್ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವನ್ನು ಸರಕಾರ ನೇರವಾಗಿ ಕೈಗೆತ್ತಿಕೊಂಡಿರುವುದು ವಿವಾದದ ಬಲೆಯಲ್ಲಿ ಸಿಲುಕಿಕೊಂಡಿತ್ತು.
‘ಶಕ್ತಿ’ ಈ ಕುರಿತು ವರದಿ ಪ್ರಕಟಿಸಿದ್ದ ಮರುದಿನ ಮಾಜಿ ಸಚಿವ ಯಂ.ಸಿ. ನಾಣಯ್ಯ ವಿರೋಧ ವ್ಯಕ್ತಪಡಿಸಿ ಅನುಮತಿ ಹಿಂಪಡೆಯುವAತೆ ಆಗ್ರಹಿಸಿದ್ದರು. ವಾಣಿಜ್ಯೋದ್ಯಮ ಉದ್ದೇಶದಿಂದ ಯೋಜನೆ ರೂಪಿಸುವುದು ಸರಿಯಲ್ಲ ಎಂದಿದ್ದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮಾಹಿತಿ ನೀಡಿ ಯೋಜನೆ ಕೈಬಿಡುವಂತೆ ಕೋರಿದ್ದರು. ಇದರೊಂದಿಗೆ ಜಿಲ್ಲಾ ಬಿಜೆಪಿಯೂ ಗ್ಲಾಸ್ ಬ್ರಿಡ್ಜ್ ನಿರ್ಮಾಣವನ್ನು ಕೈಬಿಡುವಂತೆ ಪಟ್ಟು ಹಿಡಿದಿತ್ತು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾನೂನು ಹೋರಾಟದ ಬಗ್ಗೆಯೂ ಎಚ್ಚರಿಕೆ ನೀಡಿದ್ದರು.
ನಗರಸಭೆಯಲ್ಲಿ ಈ ವಿಚಾರವಾಗಿ ದೊಡ್ಡ ಗಲಾಟೆಯೇ ಏರ್ಪಟ್ಟಿತ್ತು. ಕಾಂಗ್ರೆಸ್ ಓರ್ವ ಸದಸ್ಯ ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಗ್ಲಾಸ್ ಬ್ರಿಡ್ಜ್ ವಿಚಾರವಾಗಿ ವಿಶೇಷ ಸಭೆ ನಡೆಸುತ್ತಿರುವ ಬಗ್ಗೆ ವಿರೋಧಿಸಿ ಸಭೆ ಸ್ಥಗಿತಕ್ಕೆ ಒತ್ತಾಯಿಸಿದ್ದರು. ಬಿಜೆಪಿ ಸದಸ್ಯರು ಇದರ ಸಾಧಕ-ಬಾಧಕ ಚರ್ಚೆ ಅಗತ್ಯ ಎಂದು ಪಟ್ಟು ಹಿಡಿದಿದ್ದರು. ಸರಕಾರದಿಂದ ವರದಿ ಬಂದ ನಂತರ ಅಂತಿಮ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಗಿತ್ತು.
ಸಿದ್ದರಾಮಯ್ಯ ಚರ್ಚೆ
ಗ್ಲಾಸ್ ಬ್ರಿಡ್ಜ್ ಯೋಜನೆ ವಿವಾದವಾಗಿ ಪರಿವರ್ತನೆಗೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಕೆಲ ಪ್ರಮುಖರು ಹಾಗೂ ಶಾಸಕರೊಂದಿಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಯಂ.ಸಿ. ನಾಣಯ್ಯ ಅವರಂತವರು ವಿರೋಧಿಸುವ ಈ ಯೋಜನೆಯ ಅಗತ್ಯತೆ ಇದೆಯೇ? ಎಂಬ ಪ್ರಶ್ನೆಯನ್ನೂ ಮಾಡಿದ್ದಾರೆ ಎನ್ನಲಾಗಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಯೋಜನೆ ಕೈಬಿಡಲು ಸೂಚಿಸಿದ ಹಿನ್ನೆಲೆ ಗ್ಲಾಸ್ ಬ್ರಿಡ್ಜ್ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ‘ಶಕ್ತಿ’ಗೆ ಬಂದ ಮಾಹಿತಿಯಾಗಿದೆ.
ಸ್ಕೆöÊವಾಕ್ ಅವಶ್ಯವಿಲ್ಲ : ಮಂತರ್
ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವನ್ನು ಸರಕಾರ ಕೈ ಬಿಟ್ಟಿದೆ. ಅವೈಜ್ಞಾನಿಕ ಯೋಜನೆ ಹಾಗೂ ಕಾನೂನಿನ ಪರಿಧಿಯಿಂದ ಇದನ್ನು ಕೈಬಿಡಲಾಗಿದೆ. ಇದಕ್ಕೂ ಮುಖ್ಯವಾಗಿ ಪ್ರಕೃತಿಗೆ ಧಕ್ಕೆಯಾಗುವ ಯೋಜನೆಯನ್ನು ಅನುಷ್ಠಾನ ಮಾಡಲು ನನಗೂ ಒಪ್ಪಿಗೆ ಇಲ್ಲ. ರಾಜಾಸೀಟ್ನಲ್ಲಿ ಸ್ಕೆöÊವಾಕ್ನ ಅವಶ್ಯಕತೆಯಿಲ್ಲ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.
ಯೋಜನೆ ಕೈ ಬಿಟ್ಟಿರುವ ಅಂಶ ತಿಳಿದು ಬಂದ ಹಿನ್ನೆಲೆ ಇದನ್ನು ಸ್ಪಷ್ಟಪಡಿಸಿಕೊಳ್ಳಲು ‘ಶಕ್ತಿ’ ಸಂಪರ್ಕಿಸಿದ ಸಂದರ್ಭ ಪ್ರತಿಕ್ರಿಯಿಸಿದ ಮಂತರ್, ಈ ಹಿಂದೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಅನೇಕ ಸಮಸ್ಯೆಗಳು ಎದುರಾಗಿತ್ತು. ಪ್ರಕೃತಿಗೆ ಧಕ್ಕೆ ಮಾಡುವ ಕೆಲಸ ಎಂದಿಗೂ ಮಾಡುವುದಿಲ್ಲ. ರಾಜಕಾರಣವಾಗಿ ಕೆಲವರು ಇದನ್ನು ವಿರೋಧಿಸಿದ್ದಾರೆ. ಆದರೆ, ಜನರ ಭಾವನೆ ಹಾಗೂ ಪ್ರಕೃತಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ಕಾಮಗಾರಿ ಮುಂದುವರೆಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಇನ್ನೂ ೨-೩ ದಿನಗಳಲ್ಲಿ ಸ್ಪಷ್ಟ ಮಾಹಿತಿ ನೀಡುತ್ತೇನೆ. ರಾಜಾಸೀಟ್ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ, ಯೋಜನೆ ಸ್ಥಗಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.
೨೦೨೪ರಲ್ಲೇ ಬೆಳಕಿಗೆ ತಂದಿದ್ದ ‘ಶಕ್ತಿ’
ರಾಜಾಸೀಟ್ ಉದ್ಯಾನವನದ ಸ್ಥಳದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಗೌಪ್ಯವಾಗಿ ಪ್ರಯತ್ನ ನಡೆದಿದ್ದ ಬಗ್ಗೆ ‘ಶಕ್ತಿ’ ೨೦೨೪ರ ಜುಲೈ ೬ ರ ಪತ್ರಿಕೆಯಲ್ಲಿ ಬೆಳಕು ಚೆಲ್ಲಿತ್ತು.
ಈ ಪ್ರಯತ್ನದ ಹಿಂದೆ ಕೆಲವು ಪ್ರಭಾವಿಗಳ ಪಾತ್ರವಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಉನ್ನತ ಮಟ್ಟದಲ್ಲಿ ಈ ವ್ಯವಹಾರ ನಡೆಯುತ್ತಿರುವ ಬಗ್ಗೆ ವರದಿ ಮಾಡಲಾಗಿತ್ತು.
ಕೇವಲ ಅಧಿಕಾರಿಗಳೇ ಭಾಗವಹಿಸಿದ್ದ ಸಭೆಯೊಂದರಲ್ಲಿ ಈ ಬಗ್ಗೆ ಮಾತುಕತೆ ನಡೆದಿತ್ತು. ತೋಟಗಾರಿಕಾ ಇಲಾಖೆಯ ಸರಕಾರದ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲೆಯ ಸಂಬAಧಿತ ಕೆಲವು ಅಧಿಕಾರಿಗಳು ವೀಡಿಯೋ ಸಂವಾದದ ಮೂಲಕ ಈ ಸಭೆಯಲ್ಲಿ ಭಾಗವಹಿಸಿದ್ದರು. ಇಂತಹ ಕೆಲವಾರು ಯೋಜನೆಗಳಿಗೆ ಜಿಲ್ಲೆಯಲ್ಲಿ ಪರಿಸರವಾದಿಗಳ ವಿರೋಧವಿರುವ ವಿಚಾರ ಹಾಗೂ ಪುರಾತತ್ವ ಇಲಾಖೆಯ ಅನುಮತಿ ಅಗತ್ಯವಿರುವ ವಿಚಾರವೂ ಈ ಸಭೆಯಲ್ಲಿ ಪ್ರಸ್ತಾಪವಾಗಿತ್ತು.
ಆದರೆ, ಆ ಸಂದರ್ಭದಲ್ಲಿ ಸ್ವತಃ ಜಿಲ್ಲಾಧಿಕಾರಿಗಳು, ತೋಟಗಾರಿಕಾ ಇಲಾಖೆಯ ಆಗಿನ ಸಹಾಯಕ ನಿರ್ದೇಶಕರು ಈ ಕುರಿತಾಗಿ ಯಾವುದೇ ಮಾಹಿತಿಯಿಲ್ಲ ಎಂಬುದಾಗಿ ಪತ್ರಿಕೆ ಮಾಹಿತಿ ಬಯಸಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದರು. ತಾ. ೧೮-೬-೨೦೨೪ರಲ್ಲಿ ನಡೆದ ಸಭೆ ಇದಾಗಿತ್ತು.
ಈ ಬೆಳವಣಿಗೆಯ ನಂತರದಲ್ಲಿ ಮತ್ತೇ ೧೬-೬-೨೦೨೫ರಲ್ಲಿ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಪ್ರೆöÊವೆಟ್ ಪಬ್ಲಿಕ್ ಪಾರ್ಟ್ನರ್ಶಿಪ್ (ಪಿಪಿಪಿ) ಆಧಾರದಲ್ಲಿ ರಾಜಾಸೀಟ್ನಲ್ಲಿ ಗ್ಲಾಸ್ ಬ್ರಿಡ್ಜ್ ಹಾಗೂ ಫುಡ್ಕೋರ್ಟ್ ನಿರ್ಮಾಣಕ್ಕೆ ಅನುಮೋದನೆ ದೊರೆತಿರುವುದಾಗಿ ತಿಳಿಸಿ ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದಿದ್ದರು. ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಉನ್ನತ ಮಟ್ಟದ ಸಭೆಯಲ್ಲೇ ಅನುಮೋದನೆ ನೀಡಲಾಗಿದ್ದ ಅಂಶವನ್ನು ೨೧-೬-೨೦೨೫ರ ‘ಶಕ್ತಿ’ಯಲ್ಲಿ ವಿವರವಾಗಿ ಪ್ರಕಟಿಸಲಾಗಿತ್ತು.
ಈ ಯೋಜನೆಗೆ ಅದಾಗಲೇ ಟೆಂಡರ್ ಪ್ರಕ್ರಿಯೆಗೆ ಪೂರಕ ವೇಳಾಪಟ್ಟಿ ತಯಾರಿಸಲೂ ಸೂಚನೆ ನೀಡಿದ್ದ ಕುರಿತು ವಿವರ ನೀಡಲಾಗಿತ್ತು. ಈ ವಿಚಾರ ಬೆಳಕಿಗೆ ಬಂದ ಬಳಿಕ ಇದಕ್ಕೆ ಪರಿಸರವಾದಿಗಳು, ಮಾಜಿ ಸಚಿವರಾದ ಯಂ.ಸಿ. ನಾಣಯ್ಯ ಸೇರಿದಂತೆ ಹಲವು ಸಂಘ-ಸAಸ್ಥೆಗಳು, ಬಿಜೆಪಿ, ಆಮ್ ಆದ್ಮಿ ಪಾರ್ಟಿಯಿಂದ ವಿರೋಧ ವ್ಯಕ್ತಗೊಂಡಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.