ಮಡಿಕೇರಿ, ಆ. ೧೪: ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡದಂತೆ ತಡೆಯಲು ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳ ಕೈಗಾರಿಕ ಪ್ರದೇಶಗಳಲ್ಲಿ ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರ ಬಳಸುತ್ತಿರುವ ಕಾರ್ಖಾನೆ/ ಕೈಗಾರಿಕೆಗಳನ್ನು ಪತ್ತೆಹಚ್ಚಿ, ಬಳಸುತ್ತಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ೧೯೫೫ರ ಅಡಿಯಲ್ಲಿ ಹಾಗೂ ರಸಗೊಬ್ಬರ (ನಿಯಂತ್ರಣ) ಆದೇಶ ೧೯೮೫ರ ಅನ್ವಯ ಸೂಕ್ತ ಕ್ರಮ ವಹಿಸಲು ಹಾಗೂ ಅಂತಹ ಕೈಗಾರಿಕೆಗಳ ಪರವಾನಿಗೆ ರದ್ದುಪಡಿಸಲು ಜಿಲ್ಲಾಧಿಕಾರಿ ಅವರು ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ, ತೋಟಗಾರಿಕೆ, ಕಾಫಿ ಮಂಡಳಿ, ಪೊಲೀಸ್ ಹಾಗೂ ಅರಣ್ಯ ಇಲಾಖೆಗಳನ್ನು ಒಳಗೊಂಡAತೆ ತಾಲೂಕುವಾರು ೩ (ಮೂರು) ತಂಡಗಳನ್ನು ರಚಿಸಿ ಆದೇಶಿಸಿರುತ್ತಾರೆ.

ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಅಕ್ರಮವಾಗಿ ಬಳಕೆ ಮಾಡುತ್ತಿರುವುದು ಅಥವಾ ಅಕ್ರಮವಾಗಿ ದಾಸ್ತಾನು ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿರುವುದು ಕಂಡುಬAದಲ್ಲಿ ದೂರವಾಣಿ (ಜಂಟಿ ಕೃಷಿ ನಿರ್ದೇಶಕರು, ಕೊಡಗು ಜಿಲ್ಲೆ: ೮೨೭೭೯೩೧೯೦೦, ಉಪ ಕೃಷಿ ನಿರ್ದೇಶಕರು, ಮಡಿಕೇರಿ: ೮೨೭೭೯೩೧೯೦೧, ಸಹಾಯಕ ಕೃಷಿ ನಿರ್ದೇಕರು, ಮಡಿಕೇರಿ: ೮೨೭೭೯೨೬೯೬೯, ಸಹಾಯಕ ಕೃಷಿ ನಿರ್ದೇಕರು, ಸೋಮವಾರಪೇಟೆ: ೮೨೭೭೯೩೧೯೦೭, ಸಹಾಯಕ ಕೃಷಿ ನಿರ್ದೇಕರು, ವೀರಾಜಪೇಟೆ: ೮೨೭೭೯೨೯೪೫೬, ಹಾಗೂ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ), ಜ.ಕೃ.ನಿ. ಕಚೇರಿ ಮಡಿಕೇರಿ: ೮೨೭೭೯೨೯೪೯೨) ಮುಖಾಂತರ ಮಾಹಿತಿ ನೀಡುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.