ನಾಪೋಕ್ಲು, ಆ. ೧೪: ಇಲ್ಲಿನ ಕಕ್ಕುಂದ ಕಾಡಿನ ಗಣಪತಿ ಸೇವಾ ಸಮಿತಿ ವತಿಯಿಂದ ೨೦ನೇ ವರ್ಷದ ಗಣೇಶೋತ್ಸವ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಆಗಸ್ಟ್ ೨೭ ರಂದು ಬೆಳಿಗ್ಗೆ ೯ಕ್ಕೆ ನೆರವೇರಲಿದೆ.
ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ನಿತ್ಯ ಪೂಜೆ, ಮಹಾಪೂಜೆ, ಭಜನೆ, ಮಂಗಳಾರತಿ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ತಾ. ೩೦ ರಂದು ಶನಿವಾರ ಸಂಜೆ ೭:೦೦ಗೆ ಭಜನೆ ಕಾರ್ಯಕ್ರಮ ನಡೆಯಲಿದೆ. ತಾ. ೩೧ ರಂದು ಭಾನುವಾರ ಮಹಾ ಪೂಜೆಯ ನಂತರ ಮಧ್ಯಾಹ್ನ ೧ ಘಂಟೆ ಅನ್ನದಾನ ನಡೆಯಲಿದೆ.
ಮೂರು ಗಂಟೆಗೆ ಸುಳ್ಯದ ನಾಸಿಕ್ ಬ್ಯಾಂಡ್ ಭವ್ಯ ಅಲಂಕೃತ ವಿದ್ಯುತ್ ಹಾಗೂ ಹೂವಿನ ಅಲಂಕಾರ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಕೊಂಡೊಯ್ದು ಕಾವೇರಿ ಪವಿತ್ರ ನದಿಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಗುವುದು.