ವೀರಾಜಪೇಟೆ, ಆ. ೧೪: ಪರಕೀಯರ ದಾಳಿಗೆ, ಆಕ್ರಮಣಕ್ಕೆ ತುತ್ತಾಗಿ ಅಖಂಡ ಭಾರತವು ತುಂಡಾಗಿ ವಿಭಜನೆಗೊಂಡಿತು. ಜಾಗೃತರಾಗಿ ತುಂಡಾಗಿರುವ ಭಾರತವನ್ನು ಒಂದಾಗಿಸುವAತೆ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕಿ ಪ್ರಜ್ಞಾ ಕಶ್ಯಪ್ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.

ಹಿಂದೂ ಜಾಗರಣ ವೇದಿಕೆ ವೀರಾಜಪೇಟೆ ತಾಲೂಕು ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆಯ ಪ್ರಯುಕ್ತ ನಗರದಲ್ಲಿ ಪಂಜಿನ ಮೆರವಣಿಗೆ ಬಳಿಕ ಸಭಾ ಕಾರ್ಯಕ್ರಮ ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಪ್ರಜ್ಞಾ ಕಶ್ಯಪ್ ಅವರು ಸಂಪತ್ಭರಿತವಾಗಿದ್ದ ಭಾರತ ಖಂಡದ ಮೇಲೆ ಮೊಘಲರು, ಡಚ್ಚರು, ಫ್ರೆಂಚರು ಹಾಗೂ ಆಂಗ್ಲರ ಪ್ರವೇಶವಾಯಿತು. ಅಪಾರ ಸಂಪತ್ತು ನಿರ್ನಾಮವಾಯಿತು. ಭಾರತವನ್ನು ಉಳಿಸಿಕೊಳ್ಳುವ ಪ್ರಯತ್ನ ಫಲವಾಗಿ ಮೊತ್ತಮೊದಲ ಬಾರಿಗೆ ೧೮೫೭ರಲ್ಲಿ ಪ್ರಥಮ ಸ್ವಾತಂತ್ರ‍್ಯದ ಹೋರಾಟದ ರಣಕಹಳೆ ಮೊಳಗಿತ್ತು. ಸ್ವಾತಂತ್ರö್ಯ ಸಂಗ್ರಾಮದ ಆರಂಭದ ಕಾಲಘಟ್ಟದಲ್ಲಿ ದೇಶದ ಎಲ್ಲೆಡೆ ಪರಕೀಯರಿಂದ ಭಾರತ ಸ್ವಾತಂತ್ರಗೊಳ್ಳಬೇಕು ಎನ್ನುವ ಮಂತ್ರ ಭಾವನೆ ಹೋರಾಟಗಾರರ ಮನದಲ್ಲಿತ್ತು. ಆದರೇ ದುರಂತ ಎಂದರೆ ಆಂಗ್ಲರ ಭಾವ ಬೇರೆಯಾಗಿತ್ತು. ಒಡೆದು ಆಳುವ ನೀತಿಯನ್ನು ಅವರು ಅನುಸರಿಸಿದ್ದು, ಇದರ ಫಲ ಇಂದಿಗೂ ನಾವುಗಳು ಅನುಭವಿಸುತ್ತಿದ್ದೇವೆ. ಭವ್ಯವಾಗಿದ್ದ ಭೌಗೋಳಿಕ ಭಾರತವು ತ್ರಿಖಂಡವಾಯಿತು. ಪೂರ್ವ ಭಾರತದಲ್ಲಿ ನುಸುಳುಕೋರರ ಅಟ್ಟಹಾಸದಿಂದ ಅನೇಕರು ಪ್ರಾಣ ಕಳೆದುಕೊಂಡು ಮನೆ ಕಳೆದುಕೊಳ್ಳುವ ಭೀತಿ ಅನುಭವಿಸುತ್ತಿದ್ದಾರೆ. ಪಶ್ಚಿಮದಲ್ಲಿ ಪಂಜಾಬ್ ಪ್ರಾಂತದಲ್ಲಿ ಖಾಲಿಸ್ತಾನ್ ದಂಗೆಕೋರರು ಪ್ರತ್ಯೇಕವಾದವನ್ನು ಮೊಳಗಿಸುತ್ತಿದ್ದಾರೆ. ಕೇರಳ ರಾಜ್ಯದಲ್ಲಿ ಮತಾಂತರ ಭೂತ ಕಾಡುತ್ತಿದೆ. ತಮಿಳುನಾಡಿನಲ್ಲಿ ಹಿಂದೂ ಸಂಪ್ರದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಸ್ವಾತಂತ್ರö್ಯ ಪೂರ್ವದಿಂದ ಪ್ರತ್ಯೇಕತವಾದ ಮತ್ತು ಧರ್ಮದ ಮೇಲಿನ ನಿರಂತರ ದೌರ್ಜನ್ಯ ಇಂದಿಗೂ ಜೀವಂತವಾಗಿದೆ. ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಅಸಂಖ್ಯಾತ ವೀರ ಯೋಧರ ನೆತ್ತರು ಭಾರತ ಭೂಮಿಯನ್ನು ಸ್ಪರ್ಶಿಸಿದೆ. ಮನೆ ಮಠ ಕಳೆದುಕೊಂಡಿದ್ದಾರೆ. ನಿರಂತರ ಹೋರಾಟ, ತ್ಯಾಗ ಬಲಿದಾನದ ಮೂಲಕ ನಾವು ಪರಿಪೂರ್ಣ ಸ್ವಾತಂತ್ರ‍್ಯ ಗಳಿಸಿದ್ದೇವೆ. ಇದನ್ನು ಎಂದಿಗೂ ಮರೆಯಬಾರದು. ವೀರ ಯೋಧರ ತ್ಯಾಗ ಬಲಿದಾನಗಳ ಕಥೆಗಳನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯದಲ್ಲಿ ಸನಾತನ ಹಿಂದೂ ಬಾಂಧವರು ಸಾಗಬೇಕು. ಅಖಂಡ ಭಾರತದ ಕನಸಾಗದೆ ಸಂಕಲ್ಪವಾಗಲು ಸರ್ವರು ಕಠಿಬದ್ದರಾಗುವಂತೆ ಕರೆ ನೀಡಿದರು.

ನಿವೃತ್ತ ಸುಬೇದಾರ್ ಮೇಜರ್ ಚೇಂದ್ರಿಮಾಡ ಕೆ. ನಂಜಪ್ಪ ಗಣೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶವು ಸ್ವಾತಂತ್ರö್ಯ ನಂತರವೂ ಹಲವು ಸಮರಗಳನ್ನು ಕಂಡಿದೆ. ದೇಶದ ಹೊರಗಿರುವ ಮತೀಯ ಶಕ್ತಿಗಳ ವಿರುದ್ಧ ಕ್ಷಣ ಮಾತ್ರದಲ್ಲಿ ಧಮನ ಮಾಡಬಹುದು. ಆದರೆ ದೇಶದ ಒಳಗಿರುವ ಆಂತರಿಕ ಧರ್ಮ ಮತೀಯರ ವಿರುದ್ಧ ಹೋರಾಟ ಮಾಡುವುದು ಕಷ್ಟಸಾಧ್ಯ ಎಂದರು.

ಕಾರ್ಯಕ್ರಮದ ಮೊದಲಿಗೆ ನಗರದ ಪ್ರಮುಖ ಬೀದಿಗಳಲ್ಲಿ ಹಿಂದೂ ಬಾಂಧವರಿAದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಸಭಾ ವೇದಿಕೆಯಲ್ಲಿ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಅನಿಮೋಳ್ ರಾಜೇಶ್ ಆಚಾರ್ಯ ಅವರು ಪ್ರಾರ್ಥನೆ ಮತ್ತು ಕೊನೆಯಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದರು. ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಸಂಕಲ್ಪದ ಪ್ರಮಾಣವಚನ ಉಚ್ಛರಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಚಾಲಕ ಅನಿಲ್ ಸಿದ್ದಾಪುರ, ತಾಲೂಕು ಪ್ರಮುಖರಾದ ಯೋಗೇಶ್ ಬಿಟ್ಟಂಗಾಲ, ಗಣೇಶ್ ಬಿಟ್ಟಂಗಾಲ, ಜಿಲ್ಲಾ ಪ್ರಮುಖರಾದ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆಯ ರೋಹಿತ್ ಅಮ್ಮಣಿಚಂಡ ಸ್ವಾಗತಿಸಿ, ಸುನೀಲ್ ಮಾದಪುರ ನಿರೂಪಿಸಿ, ವಿನೂಪ್ ವಂದಿಸಿದರು. ಹಿಂದೂ ಜಾಗರಣ ವೇದಿಕೆ ವೀರಾಜಪೇಟೆ ತಾಲೂಕು ಪದಾಧಿಕಾರಿಗಳು, ಪ್ರಮುಖರು, ಜಿಲ್ಲಾ ಘಟಕದ ಪ್ರಮುಖರು, ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು, ಹಾಜರಿದ್ದರು.