ಸಿದ್ದಾಪುರ, ಆ. ೧೫: ಅಕ್ರಮವಾಗಿ ಮರದ ನಾಟಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೇಧಿಸಿರುವ ಅರಣ್ಯ ಇಲಾಖೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಅರಪಟ್ಟು ನಿವಾಸಿ ಕೆ.ಎ. ಆನಂದ ಬಂಧಿತ ಆರೋಪಿ. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮಡಿಕೇರಿ-ವೀರಾಜಪೇಟೆ ಮುಖ್ಯರಸ್ತೆಯ ಮಠದ ಗದ್ದೆ ಎಂಬಲ್ಲಿ ಅಕ್ರಮವಾಗಿ ಪಿಕಪ್‌ನಲ್ಲಿ (ಕೆ.ಎ.೧೨.ಎ.೩೭೦೭) ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಮಾಡುತ್ತಿದ್ದ ವೇಳೆ ಖಚಿತ ಸುಳಿವಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮರಗಳ ನಾಟಗಳು ಸೇರಿದಂತೆ ರೂ. ೧.೫೦ ಲಕ್ಷ ವೆಚ್ಚದ ಮಾಲುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನ, ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಪಿ.ಜೆ. ರಾಘವ ಸಿಬ್ಬಂದಿಗಳಾದ ಎ.ಎಸ್. ನಂದೀಶ್, ಲಾರೆನ್ಸ್, ಪವಿತ್ರ ಕುಮಾರ್, ಅನಿಲ್, ನಾಚಪ್ಪ, ಮಹೇಶ್ ಇನ್ನಿತರರು ಪಾಲ್ಗೊಂಡಿದ್ದರು.