ಮಡಿಕೇರಿ, ಆ. ೧೪ : ಕೊಡಗು ಜಿಲ್ಲಾ ಸಾರ್ವನಿಕ ಹಿತರಕ್ಷಣಾ ಸಮಿತಿ ವತಿಯಿಂದ ಕಂದಾಯ ಇಲಾಖೆಯಲ್ಲಿ ಉಳಿದಿರುವ ಕಡತಗಳ ತ್ವರಿತ ವಿಲೇವಾರಿಗೆ ಕ್ರಮವಹಿಸುವ ಕುರಿತು ಸಭೆ ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕು ಕಚೇರಿಯಲ್ಲಿ ಕಡತ ವಿಲೇವಾರಿಯಾಗದಿದ್ದರೆ ತಾ. ೧೦ ರೊಳಗೆ ಸಮಿತಿಗೆ ಮಾಹಿತಿ ನೀಡುವಂತೆ ಕೋರಲಾಗಿತ್ತು. ಈ ಸಂಬAಧ ಅರ್ಜಿಗಳು ಬಂದಿದ್ದು, ಇದರ ವಿಲೇವಾರಿಗೆ ಕ್ರಮವಹಿಸ ಬೇಕೆಂದು ತಹಶೀಲ್ದಾರ್ ಅವರನ್ನು ಕೋರಲಾಗಿದೆ. ಈ ಸಂಬAಧ ತಾ. ೧೮ ರ ಮಧ್ಯಾಹ್ನ ೩ ಗಂಟೆಗೆ ಸಮಯ ನಿಗದಿಪಡಿಸಲಾಗಿದ್ದು, ಕಡತ ವಿಲೇವಾರಿ ಸಂಬAಧ ಚರ್ಚೆ ನಡೆಸಲಾಗುವುದು. ಸರ್ವೆ ಅಧಿಕಾರಿಗಳು ಭಾಗವಹಿಸುತ್ತಾರೆ. ಸಮಸ್ಯೆ ಉಳ್ಳವರು ಭಾಗವಹಿಸಿ ಪರಿಹರಿಸಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ.