ವೀರಾಜಪೇಟೆ, ಆ. ೧೪: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ತೋಡಿಗೆ ತ್ಯಾಜ್ಯ ಹರಿಯಬಿಡುತ್ತಿ ರುವುದರಿಂದ ಆರ್ಜಿ ಗ್ರಾಮದ ರೈತರಿಗೆ ಸಂಕಷ್ಟ ಎದುರಾಗಿದೆ ಮತ್ತು ಕೃಷಿ ಚಟುವಟಿಕೆಗೆ ಅಡಚಣೆ ಯಾಗುತ್ತಿರುವುದರಿಂದ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಪರಿಸರ ಅಧಿಕಾರಿಗೆ ಪತ್ರ ಬರೆದಿದ್ದಾರೆ. ತ್ಯಾಜ್ಯದಿಂದ ಗ್ರಾಮಕ್ಕೆ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ವೀರಾಜಪೇಟೆ ಪುರಸಭೆ ವ್ಯಾಪ್ತಿಯ ತ್ಯಾಜ್ಯವನ್ನು ನೇರವಾಗಿ ತೋಡಿಗೆ ಬಿಡುತ್ತಿರುವ ವಿಚಾರವಾಗಿ ೨೮/೦೭/೨೫ ರಂದು ವೀರಾಜಪೇಟೆ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಆರ್ಜಿ ಗ್ರಾ. ಪಂ. ಯಿಂದ ಪತ್ರ ಬರೆಯಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಪರಿಸರ ಅಧಿಕಾರಿ ಗಳಿಗೆ ತ್ಯಾಜ್ಯದಿಂದ ಗ್ರಾಮಕೆ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಕೋರಲಾಗಿದೆ ಎಂದು ತಿಳಿಸಿದ್ದಾರೆ.