ಕಡಂಗ, ಆ. ೧೭: ಕಡಂಗ ಬದ್ರಿಯಾ ಸುನ್ನೀ ಸೆಕೆಂಡರಿ ಮದ್ರಸದಲ್ಲಿ ಶಾಖೆಯ ಮಹಾಸಭೆ ನಡೆಸಲಾಯಿತು ಅಧ್ಯಕ್ಷತೆಯನ್ನು ಜಿಲ್ಲಾ ನಾಯಕರಾದ ಸಯ್ಯಿದ್ ಮಹ್ದಿ ಲತ್ವೀಫಿ ತಂಙಳ್ ಚೋಕಂಡಳ್ಳಿ ವಹಿಸಿದ್ದರು. ಪ್ರಾರ್ಥನೆಗೆ ಸಯ್ಯಿದ್ ಅವರು ಚಾಲನೆ ನೀಡಿದರು. ಸ್ವಾಗತ ವರದಿ ವಾಚನೆಯನ್ನು ಶಾಖಾ ಅಧ್ಯಕ್ಷರಾಗಿದ್ದ ಅಶ್ರಫ್ ಸಿ.ಎ. ನಿರ್ವಹಿಸಿದರು

ಲೆಕ್ಕ ಪತ್ರ ಮಂಡನೆಯನ್ನು ಫೈನಾನ್ಸ್ ಸೆಕ್ರೆಟರಿ ರಝಾಕ್ ಸಿ.ಎ. ಮಂಡಿಸಿದರು. ತದನಂತರ ನೂತನ ಸಮಿತಿಯ ರಚನೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ೨೦೨೫-೨೭ನೇ ಸಾಲಿನ ಕಡಂಗ ಶಾಖೆಯ ನೂತನ ಸಮಿತಿಯ ಅಧ್ಯಕ್ಷರಾಗಿ ಸಿಎ. ಮುಹಮ್ಮದ್ ನಿಝಾರ್ ಸಖಾಫಿ ಅಫ್ಸಲ್ ಸಅದಿ, ಉಪಾಧ್ಯಕ್ಷರಾಗಿ ಝೈನುದ್ದೀನ್ ಪಿ.ಹೆಚ್., ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಸಿ.ಎ. ಫೈನಾನ್ಸ್ ಸೆಕ್ರೆಟರಿಯಾಗಿ ನಾಸರ್ ಪಿ.ಎಂ., ದಅವಾ & ಟ್ರೆöÊನಿಂಗ್ ಸೆಕ್ರೆಟರಿಯಾಗಿ ರಫೀಕ್ ಸಿ.ಎ, ಸಾಂತ್ವನ ವಿಭಾಗದಲ್ಲಿ ರಾಝಿಕ್ ಪಿ.ಎ. ಆಯ್ಕೆಯಾದರು. ಕಾರ್ಯಕಾರಿಣಿ ಸದಸ್ಯರಾಗಿ ರಾಶಿದ್ ಯು ಇ,ರಾಝಿಕ್ ಎ.ಬಿ.ಆರ್, ಸುಹೈಲ್ ಪಿ ಎ, ಸಿದ್ದೀಕ್ ಬೇತ್ರಿ ಎಂ.ಎA., ನಿಝಾರ್ ಯು.ಎ, ಯುನುಸ್ರವರನ್ನು ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ನೂತನ ಅಧ್ಯಕ್ಷರು ಸಭೆಯನ್ನು ವಂದಿಸಿದರು.