ಕೂಡಿಗೆ, ಆ. ೧೯: ಆಲೂರು - ಸಿದ್ದಾಪುರ ರೋಟರಿ ಕ್ಲಬ್ ವತಿಯಿಂದ ಬುಡಬನಹಳ್ಳಿ ಶಾಲೆಗೆ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಲಾಗಿದೆೆ. ವರ್ಷಂಪ್ರತಿಯAತೆ ಶಾಲಾ ಸಹ ಶಿಕ್ಷಕಿ ಕೆ.ವಿ. ಜಾನ್ಸಿ ಅವÀರು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತç ಹಾಗೂ ನೋಟ್ಸ್ ಪುಸ್ತಕಗಳನ್ನು, ೭೯ನೇ ಸ್ವಾತಂತ್ರ‍್ಯದ ದಿನಾಚರಣೆಯ ಅಂಗವಾಗಿ ನೀಡಿದರು. ಈ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಸ್ವಾಮಿ, ಕ್ಲಬ್‌ನ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರಾದ ರಾಜ್‌ಕುಮಾರ್, ಸಹ ಶಿಕ್ಷಕರರಾದ ಕೆ.ವಿ. ಜಾನ್ಸಿ, ದಿನೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರಾಣಿ, ಅಂಗನವಾಡಿ ಕಾರ್ಯಕರ್ತರು, ಹಾಗೂ ಪೋಷಕರು ಹಾಜರಿದ್ದರು.