ಮಡಿಕೇರಿ, ಆ. ೧೭: ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘÀ ೨೦೨೩-೨೪ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನೀಡುವ ಬಹುಮಾನದಲ್ಲಿ ದ್ವಿತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನಾ ಪ್ರಶಸ್ತಿ ಮತ್ತು ರೂ. ೭೫ ಸಾವಿರ ನಗದು ಬಹುಮಾನ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ನಡೆದ ಅಪೆಕ್ಸ್ ಬ್ಯಾಂಕ್‌ನ ೧೦೦ನೇ ವಾಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೊಡಂದೇರ ಗಣಪತಿ, ಉಪಾಧ್ಯಕ್ಷ ಸೋಮೆಯಂಡ ಮಂದಣ್ಣ, ಕಾರ್ಯನಿರ್ವಹಣಾಧಿಕಾರಿ ಬಾನಂಗಡ ಎಂ. ಪ್ರದೀಪ್, ನಿರ್ದೇಶಕರುಗಳಾದ ಹೆಚ್.ಡಿ. ಶ್ರೀನಿವಾಸ್, ಪುಲಿಯಂಡ ಡಿ. ದಿನೇಶ್, ಕೊಲ್ಲೀರ ಗೋಪಿ ಚಿಣ್ಣಪ್ಪ ಪ್ರಶಸ್ತಿ ಸ್ವೀಕರಿಸಿದರು.