*ಗೋಣಿಕೊಪ್ಪ, ಆ. ೧೯: ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿರ್ಮಿಸಿರುವ ಆಸ್ಟೊçà ಟರ್ಫ್ ಮೈದಾನಕ್ಕೆ ಫೆಡರಲ್ ಬ್ಯಾಂಕ್ ವತಿಯಿಂದ ೧ ಕೋಟಿ ರೂ. ಅನುದಾನವನ್ನು ನೀಡಲಾಯಿತು.

ಫೆಡರಲ್ ಬ್ಯಾಂಕ್ ಬೆಂಗಳೂರು ವಲಯ ಮುಖ್ಯಸ್ಥ ಬಿ. ದಿಲಿಪ್ ಅವರು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮುಖ್ಯಸ್ಥೆ ಅಂತರರಾಷ್ಟಿçÃಯ ಓಟಗಾರ್ತಿ ಅಶ್ವಿನಿ ನಾಚಪ್ಪ ಹಾಗೂ ಕರುಂಬಯ್ಯಾಸ್ ಅಕಾಡೆಮಿಕ್ ಆಫ್ ಲರ್ನಿಂಗ್ ಆ್ಯಂಡ್ ಸ್ಪೋರ್ಟ್ಸ್ ಮುಖ್ಯಸ್ಥ ಮನೆಯಪಂಡ ದತ್ತ ಕರುಂಬಯ್ಯ ಅವರಿಗೆ ಮೈದಾನದಲ್ಲಿ ಹಸ್ತಾಂತರ ಮಾಡಿದರು.

ಫೆಡರಲ್ ಬ್ಯಾಂಕ್ ಬೆಂಗಳೂರು ವಲಯ ಮುಖ್ಯಸ್ಥ ಬಿ. ದಿಲೀಪ್ ಮಾತನಾಡಿ, ಸಾಮಾಜಿಕ ಜವಬ್ದಾರಿ ಅರಿತು ಕ್ರೀಡೆಗೆ ಉತ್ತೇಜನ ನೀಡಲು ಆರ್ಥಿಕ ಕೊಡುಗೆ ನೀಡಲಾಗಿದೆ. ಮತ್ತಷ್ಟು ಹಾಕಿ ಕಲಿಗಳು ದೇಶವನ್ನು ಪ್ರತಿನಿಧಿಸುವಂತಾಗಬೇಕು. ಕಿರಿಯ ಪ್ರತಿಭೆಗಳು ಮೈದಾನವನ್ನು ಸದುಪಯೋಗಪಡಿಸಿಕೊಂಡು ದೇಶವನ್ನು ಪ್ರತಿನಿಧಿಸುವ ಗುರಿ ಈಡೇರಿಸಿಬೇಕು ಎಂದು ಸಲಹೆ ನೀಡಿದರು.

ಬ್ಯಾಂಕ್ ಸಿಎಸ್‌ಆರ್ ಮುಖ್ಯಸ್ಥ ಕೆ. ವಿ. ಶಜಿ ಮಾತನಾಡಿ, ಹಾಕಿ ಕ್ರೀಡೆಗೆ ಯೋಜನೆ ಮೂಲಕ ಧನ ಸಹಾಯ ನೀಡಿರುವುದು ಖುಶಿ ತಂದಿದೆ ಎಂದರು.

ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಹೊರ ತರುವ ಕಾರ್ಯ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ನಡೆಯುತ್ತಿದೆ. ಸುಮಾರು ೫.೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೈದಾನದಲ್ಲಿ ಮತ್ತಷ್ಟು ಪ್ರತಿಭೆಗಳು ಹೊರ ಬರಬೇಕಿದೆ. ನಮ್ಮದೇ ವಿದ್ಯಾರ್ಥಿ ಸಿ. ಬಿ. ಪೂವಣ್ಣ ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಕ್ರೀಡೆಗೆ ಬ್ಯಾಂಕ್ ವತಿಯಿಂದ ನೀಡಿದ ಪ್ರೋತ್ಸಾಹ ಪ್ರತಿಭೆಗಳಿಗೆ ಕೂಡ ಬೆಂಬಲ ನೀಡಿದಂತಾಗಿದೆ ಎಂದರು.

ಕ್ಯಾಲ್ಸ್ ಮುಖ್ಯಸ್ಥ ಮನೆಯಪಂಡ ದತ್ತ ಕರುಂಬಯ್ಯ, ಬ್ಯಾಂಕ್ ಸಿಎಸ್‌ಆರ್ ಉಪಾಧ್ಯಕ್ಷ ಕೆ. ಪ್ರವೀಣ್, ವಲಯ ಮುಖ್ಯಸ್ಥ ವಿ. ಸಿ. ರಾಜಿವ್, ಗೋಣಿಕೊಪ್ಪ ಶಾಖಾ ವ್ಯವಸ್ಥಾಪಕ ಅಮಲ್ ಎಳ್‌ದ್ಯತ್ ಇದ್ದರು.

ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳ ಗ್ರೀನ್ ಹಾಗೂ ರೆಡ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು.