ಶ್ರೀಮಂಗಲ, ಆ. ೨೨: ಕೊಡವ ಜಾನಪದ ಗ್ರಂಥ ಪಟ್ಟೋಳ ಪಳಮೆ ಕೃತಿಯನ್ನು ಬರೆದು ಕೊಡವ ಕಲೆ, ಸಂಸ್ಕೃತಿ, "ಆಟ್-ಪಾಟ್," ಆಚಾರ-ವಿಚಾರ, "ನಮ್ಮೆ -ನಾಳ್" ಪದ್ಧತಿ, ನಾ ಜಾನಪದ, ಪರಂಪರೆ ಇವನ್ನೆಲ್ಲ ಸಾಹಿತ್ಯ ರೂಪದಲ್ಲಿ ದಾಖಲಿಸಿದ ಹಾಗೂ "ಭಗವಂತನ ಪಾಟ್" ಎಂಬ ಕೃತಿಯನ್ನು ಬರೆದ ನಡಿಕೇರಿಯಂಡ ಚಿಣ್ಣಪ್ಪ ಅವರ ೧೫೦ನೇ ಹುಟ್ಟುಹಬ್ಬದ ಪ್ರಯುಕ್ತ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ತಾ. ೨೩ ರಂದು ಬೆಳಗ್ಗೆ ೧೦.೩೦ ಗಂಟೆಯಿAದ ಮಧ್ಯಾಹ್ನದವರೆಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ತಾ. ೨೩ ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ವಹಿಸಲಿದ್ದು, ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಕಾಳಿಮಾಡ ಕೆ. ಶಿವಪ್ಪ ಹಾಗೂ ಅಜ್ಜಿನಿಕಂಡ ಇನಿತಾ ಸನ್ನಿ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಸಮಾಜದ ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಕಳ್ಳಿಚಂಡ ಚಿಪ್ಪ ದೇವಯ್ಯ, ಮೂಕಳೆರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಗಂಗಮ್ಮ ಹಾಗೂ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ, ಖಜಾಂಚಿ ಮೂಕಳೆರ ಪಟ್ಟು ಲೀಲಾವತಿ, ನಿರ್ದೇಶಕರುಗಳಾದ ಕೊಣಿಯಂಡ ಕಾವ್ಯ ಸೋಮಯ್ಯ, ಚೆಕ್ಕೆರ ವಾಣಿ ಸಂಜು, ಬಲ್ಯಮೀದೇರಿರ ಆಶಾ ಶಂಕರ್ ಉಪಸ್ಥಿತರಿದ್ದರು.