ಮದೆ, ಆ. ೨೨: ಮೈಸೂರು ಕಡೆಯಿಂದ ಪುತ್ತೂರು ಕಡೆಗೆ ಮಕ್ಕಳ ಅಟಿಕೆಗಳನ್ನು ಕೊಂಡೊಯ್ಯುತ್ತಿದ್ದ ವಾಹನ ಮಡಿಕೇರಿ-ಮಂಗಳೂರು ರಸ್ತೆಯ ದೇವರಕೊಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ವಾಹನದಲ್ಲಿದ್ದ ಪರಿಕರಗಳು ರಸ್ತೆ ಬದಿಗೆ ಬಿದ್ದಿದ್ದು, ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ