ಶ್ರೀಮಂಗಲ, ಆ. ೨೩: ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಕುಟ್ಟ ಕೊಡವ ಸಮಾಜದಲ್ಲಿ ಬೆಂಕಿ ಇಲ್ಲದೆ ಅಡುಗೆ ಮಾಡುವ ವಿಶೇಷ ಸ್ಪರ್ಧೆ ನಡೆಯಿತು.

ಕುಟ್ಟ, ಶ್ರೀಮಂಗಲ ಮತ್ತು ಟಿ ಶೆಟ್ಟಿಗೇರಿಯ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೈವಿಧ್ಯಮಯವಾದ ಸಲಾಡ್, ಡೆಸಾರ್ಟ್ ತಿನಿಸು, ಅವಲಕ್ಕಿಯಿಂದ ಆಹಾರ, ಒಣ ಹಣ್ಣು ಗಳ ಖಾದ್ಯ, ಎಳನೀರು ಪಾಯಸ ಹಾಗೂ ವಿವಿಧ ಪಾನೀಯವನ್ನು ತಯಾರು ಮಾಡಿ, ತಯಾರು ಮಾಡುವ ವಿಧಾನ ವಿವರಿಸಿ, ತಿನಿಸುಗಳ ಪ್ರದರ್ಶನ ಮಾಡಿ ಗಮನ ಸೆಳೆದರು.

ಪೈಪೋಟಿಗೆ ತೀರ್ಪುಗಾರರಾಗಿ ಚೆಪ್ಪುಡಿರ ಮೀರಾ ಕಾವೇರಪ್ಪ ಬೊಳ್ಳೆರ ಲೀನಾ ಕುಟ್ಟಪ್ಪ ಹಾಗೂ ಅಜ್ಜಮಾಡ ನಿಕಿತಾ ಚಂಗಪ್ಪ ಉಪಸ್ಥಿತರಿದ್ದರು

ವಿಶಿಷ್ಟವಾದ ಸ್ಪರ್ಧೆಯ ಮೊದಲನೇ ಸ್ಥಾನವನ್ನು ಮೀದೇರಿರ ಗೀತಾ ಹಾಗೂ ಚೆಟ್ಟಂಡ ಸುನಿತಾ, ಎರಡನೇ ಸ್ಥಾನವನ್ನು ನೆಲ್ಲಿರ ನೀತಾ ಮಧು -ನೆಲ್ಲಿರ ನಿಧಿ ಪೊನ್ನಣ್ಣ, ಹಾಗೂ ಮೂರನೇ ಸ್ಥಾನವನ್ನು ಚೆಟ್ಟಂಗಡ ವಿಜು ಹಾಗೂ ಕುಂಞAಗಡ ವಿಲೀನ ಕೃಷ್ಣ ಅವರು ಪಡೆದುಕೊಂಡರು.

ಕುಟ್ಟ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಕ್ಕಾಟಿರ ಅರ್ಚನಾ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅವÀರು ಸ್ಪರ್ಧಾರ್ಥಿಯರು ಹಾಗೂ ಸದಸ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕೋಟ್ರಮಾಡ ನಳಿನಿ ಪ್ರಾರ್ಥಿಸಿ, ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ತೀರ್ಪುಗಾರರನ್ನು ಪರಿಚಯ ಮಾಡಿಕೊಟ್ಟರು. ಚೆಕ್ಕೆರ ದೇಚು ಕಾರ್ಯಪ್ಪ ವಂದನಾರ್ಪಣೆ ಮಾಡಿದರು.

ಪೊಮ್ಮಕ್ಕಡ ಕೂಟದ ಕಾರ್ಯಕಾರಿ ಸಮಿತಿಯಿಂದ ಸ್ಪರ್ಧಾರ್ಥಿಗಳಿಗೆ ಹಾಗೂ ತೀರ್ಪುಗಾರರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.