ವೀರಾಜಪೇಟೆ, ಆ. ೧೬: ಕೊಡವರು ಆಚರಿಸುವ ಪ್ರತಿಯೊಂದು ಹಬ್ಬ ಹರಿದಿನಗಳು ಕೂಡ ಪ್ರಕೃತಿಯೊಂದಿಗೆ ವಿಲೀನ ವಾಗಿದ್ದು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಹೊಂದಿಕೊAಡು ಹೋಗುತ್ತಿದೆ ಎಂದು ವೀರಾಜಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕುಂಬೇರ ಮನು ಕುಮಾರ್ ಹೇಳಿದರು.
ಕೊಡವ ಪೊಮ್ಮಕ್ಕಡ ಒಕ್ಕೂಟ ಕೊಡವ ಸಮಾಜ ವೀರಾಜಪೇಟೆ ವತಿಯಿಂದ ವೀರಾಜಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಕ್ಕಡ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೊಡವರ ಮೂಲ ಸಂಸ್ಕೃತಿ ಉಳಿಯುತ್ತಿರುವುದೇ ಮಹಿಳೆಯರಿಂದ ಎಂದು ಹೇಳಿದರು
ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಮಾತನಾಡಿ, ಕಕ್ಕಡ ಮಾಸದಲ್ಲಿ ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಂದ ಖಾದ್ಯಗಳನ್ನು ತಯಾರಿಸಿ ತಿಂದರೆ ಹಲವಾರು ಕಾಯಿಲೆಗಳು ವಾಸಿ ಆಗುತ್ತದೆ ಎಂಬ ನಂಬಿಕೆ ಈಗಲೂ ಇದೆ ಎಂದರು.
ಉಪಾಧ್ಯಕ್ಷ ಕಾಣತಂಡ ಜಗದೀಶ್ ಮಾತನಾಡಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬಹಿರಂಗಪಡಿಸದೆ ಸರಿದೂಗಿಸಿಕೊಂಡು ಎಲ್ಲಾರು ಒಗ್ಗಟ್ಟಾಗಿ ಹೋಗುವ ಕೆಲಸ ಆಗಬೇಕಿದೆ. ಕೊಡವ ಸಮಾಜದ ವತಿಯಿಂದ ಪೊಮ್ಮಕ್ಕಡ ಒಕ್ಕೂಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು. ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ಸಭೆ ಸಮಾರಂಭ ಮಾತ್ರ ಅಲ್ಲ ಕೊಡವ ಸಮಾಜದ ಸಭಾಂಗಣಕ್ಕೆ ಬರುವಾಗ ನಾನು ಕೊಡವತಿಯಾಗಿ ಇರಬೇಕು ಎನ್ನುವುದು ನಮ್ಮಲ್ಲಿ ಬಂದರೆ ಮಾತ್ರ ಕೊಡವಾಮೆ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ, ೨೮೭ ಸದಸ್ಯರನ್ನು ಹೊಂದಿರುವ ಒಕ್ಕೂಟ ಪ್ರಾರಂಭವಾಗಿ ೭ ವಸಂತಗಳನ್ನು ಕಳೆದಿದೆ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಡವಾಮೆಗೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನು ಹಲವಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ವೇದಿಕೆಯಲ್ಲಿ ಕೊಡವ ಸಮಾಜದ ಮರಣನಿಧಿ ಕಾರ್ಯದರ್ಶಿ ಮಾದೇಯಂಡ ಸಂಪಿ ಪೂಣಚ್ಚ ಪೊಮ್ಮಕ್ಕಡ ಒಕ್ಕೂಟದ ಕಾರ್ಯದರ್ಶಿ ಕುಂಞÂರ ಚಿತ್ರ ಚರ್ಮಣ, ಉಪಾಧ್ಯಕ್ಷೆ ಮುರುವಂಡ ಉಷಾ ನೀಲಕಂಠ, ಜಂಟಿ ಕಾರ್ಯದರ್ಶೀ ಮೂಕೊಂಡ ಪ್ರೀತ್ ಈರಪ್ಪ, ಖಜಾಂಚಿ ತಾತಂಡ ಯಶೂ ಕಬೀರ್, ಬೋಜಕ್ಕ ಗ್ರೂಪ್‌ನ ಸಂಚಾಲಕಿ ಮಾಳೇಟಿರ ಮೀನಾ ಉಪಸ್ಥಿತರಿದ್ದರು.