ನಾಪೋಕ್ಲು, ಆ. ೧೯: ಹೊದ್ದೂರು ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಕಾನೂನಾತ್ಮಕ ಹಕ್ಕನ್ನು ಪಡೆಯಲು ಸಾಮಾಜಿಕವಾಗಿ ಒಗ್ಗಟ್ಟಾಗಬೇಕು ಎಂದು ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ಕರೆ ನೀಡಿದರು.

ಹೊದ್ದೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಬಹುಜನ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಮಿತಿಯ ನೂತನ ಗ್ರಾಮ ಸಮಿತಿ ಪುನರ್ ರಚನಾ ಸಭೆಯಲ್ಲಿ ಮಾತನಾಡಿದರು.

ಪೆಗ್ಗೋಳಿ ನಿವೇಶನ ಹೋರಾಟ ಸಮಿತಿಯ ಮೇಲುಸ್ತುವಾರಿ ಕಿರಣ್ ಜಗದೀಶ್ ಮಾತನಾಡಿ ಕಾನ್ಸೀರಾಂಜೀ ನಗರ ಪಾಲೆಮಾಡುವಿನ ಅಂದಿನಿAದ ಇಂದಿನವರೆಗಿನ ಹೋರಾಟದ ಬಗ್ಗೆ ಮೆಲುಕು ಹಾಕಿ, ಬಡವರ ಸಾಮಾಜಿಕ ಹಕ್ಕೊತ್ತಾಯಗಳು ಬಗೆಹರಿಯುವವರೆಗೂ ಹೋರಾಟಗಳು ಅನಿವಾರ್ಯವಾಗಿದೆ ಎಂÀzರು.

ಕುಸುಮಾವತಿ ಆನಂದ್ ಮಾತನಾಡಿ ಕೊಡಗಿನಲ್ಲಿ ನಿವೇಶನ ರಹಿತ ಬಡವರ ಪರವಾಗಿ ಧ್ವನಿ ಎತ್ತಿದ ಮೊದಲ ಹೋರಾಟ ಪಾಲೆಮಾಡು ಇಂದು ಕೊಡಗಿನಾದ್ಯಂತ ನಿವೇಶನ ರಹಿತರ ಮೂಲಭೂತ ಹಕ್ಕುಗಳಿಗಾಗಿ ಕೊಡಗಿನಾದ್ಯಂತ ಹೋರಾಟವು ವಿಸ್ತರಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಮ್ಮತ್ತಿ ನಿವೇಶನ ಹೋರಾಟ ಸಮಿತಿಯ ಮೇಲುಸ್ತುವಾರಿಗಳಾದ ಮಹೇಶ್, ಹನೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಮ್ಮತ್ತಿ ನಿವೇಶನ ಹೋರಾಟ ಸಮಿತಿಯ ಅಧ್ಯಕ್ಷ ಪಾಪಣ್ಣ, ಪೆಗ್ಗೋಳಿ ಹೋರಾಟ ಸಮಿತಿಯ ಸುಜಾತ, ಪೊನ್ನತ್‌ಮೊಟ್ಟೆ ಹೋರಾಟ ಸಮಿತಿಯ ಸೌಕತ್ ಆಲಿ, ಕಬಡಕೇರಿ ಹೋರಾಟ ಸಮಿತಿಯ ಸುರೇಶ್, ಕಾನ್ಸಿರಾಂಜೀ ನಗರ ಪಾಲೆಮಾಡು ಹೋರಾಟ ಮತ್ತು ಅಭಿವೃದ್ಧಿ ಸಮಿತಿ ಸುರೇಶ್ ಪಿ.ಸಿ., ನೂತನವಾಗಿ ಕೊಕೇರಿ ನಿವೇಶನ ಹೋರಾಟದ ಮಂಜು, ಬಲಮುರಿಯ ಕವೀನ್, ಕೊಂಡAಗೇರಿಯ ಅಣ್ಣು, ಪಾಲೆಮಾಡು ಕಾನ್ಸೀರಾಂಜೀ ನಗರ ಪಾಲೆಮಾಡುವಿನ ಅಭಿವೃದ್ಧಿ ಸಮಿತಿಯ ಸುರೇಶ್ ಪಿ.ಸಿ. ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಎಂ. ಅಶ್ವತ್ ಮೌರ್ಯ ಮತ್ತು ಕೊಡಗು ಜಿಲ್ಲೆಯಾದ್ಯಂತ ಇರುವ ಭೂ ಮತ್ತು ನಿವೇಶನ ರಹಿತ, ಹಕ್ಕು ವಂಚಿತರ ಹೋರಾಟದ ಸ್ಥಳದಿಂದ ಸದಸ್ಯರು ಆಗಮಿಸಿದ್ದರು.

ಸಭೆಯಲ್ಲಿ ನಿವೇಶನ ರಹಿತ ಗ್ರಾಮಗಳಲ್ಲಿ ೨೦ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಂ. ರಂಜಿತ್ ಮೌರ್ಯ ಸ್ವಾಗತಿಸಿ ವಂದಿಸಿದರು.