ಕಣಿವೆ, ಆ. ೧೭: ಈ ಬಾರಿ ಎಲ್ಲೆಲ್ಲೂ ಹೆಚ್ಚಾಗಿ ರೈತರು ಬೆಳೆದಿರುವ ವಾಣಿಜ್ಯ ಬೆಳೆ ಶುಂಠಿಗೆ ಈಗ ಒಂದಷ್ಟು ದರ ಏರಿಕೆಯಲ್ಲಿ ಚೇತರಿಕೆ ಕಂಡುಬರುತ್ತಿದೆ.

ಕಳೆದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಬಿತ್ತನೆ ಮಾಡಿದ್ದ ಶುಂಠಿ ಬೆಳೆಗೆ ಈಗ ಆರು ತಿಂಗಳು ಭರ್ತಿಯಾಗುತ್ತಿರುವುದರಿಂದ ರೋಗಪೀಡಿತ ಶುಂಠಿಯನ್ನು ಬೆಳೆಗಾರರು ಕಟಾವು ಮಾಡಿ ಭತ್ತದ ಬಿತ್ತನೆಯತ್ತ ತಮ್ಮ ಚಿತ್ತ ಹರಿಸುತ್ತಿದ್ದಾರೆ.

ಈ ಶುಂಠಿಯ ಬೆಳೆ ಮೂರರಿಂದ ನಾಲ್ಕನೆಯ ತಿಂಗಳಿಗೆ ದಾಟುತ್ತಿದ್ದಂತೆ ಮಾರಕ ವೈರಸ್ ರೋಗ ಕಾಡಿದ ಪರಿಣಾಮ ರೋಗ ಹತೋಟಿಗೆ ಅಪಾರ ಹಣ ಸುರಿದು ರಾಸಾಯನಿಕ ತಂದು ಸಿಂಪಡಿಸಬೇಕಿದ್ದ ಕಾರಣ ಈಗಾಗಲೇ ಬೆಳೆ ಹಾಗೂ ಬೆಲೆ ಇಲ್ಲದೇ ಹೈರಾಣಾಗಿರುವ ಸಣ್ಣ ಸಣ್ಣ ಬೆಳೆಗಾರರು ಸಿಕ್ಕಷ್ಟೇ ಸಿಗಲಿ ಎಂದು ಬಹಳ ಅಸಮಾಧಾನ ಹಾಗೂ ದುಗುಡದಿಂದ ರೋಗಕ್ಕೆ ಸಿಲುಕಿದ್ದ ಶುಂಠಿಯನ್ನು ಕೇವಲ ಸಾವಿರದ ಒಳಗಿನ ಕೇವಲ ೬೦೦ ರಿಂದ ೭೦೦ ರೂ ದರಕ್ಕೆ ಕಟಾವು ಮಾಡಿದ್ದರು.

ಆರ್ಥಿಕವಾಗಿ ಸದೃಢರಾದ ಕೃಷಿಕರು ರಸಾಯನಿಕ ಸಿಂಪಡಿಸಿ ಏನೆಲ್ಲಾ ಸರ್ಕಸ್ ಮಾಡಿ ಒಂದಷ್ಟು ರೋಗ ಹತೋಟಿಗೆ ತಂದು ಈಗ ೧,೨೦೦ ರೂ. ರ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ದರ ಇನ್ನೊಂದು ತಿಂಗಳ ಅವಧಿಯಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದಾಗ್ಯೂ ರೂ ೨೦೦೦ ಸಾವಿರ ರೂ ಬೆಲೆ ನಿಗದಿಯಾದರೂ ಕೂಡ ಶುಂಠಿ ಬೆಳೆಗಾರರಿಗೆ ಯಾವುದೇ ಲಾಭ ಆಗುವುದಿಲ್ಲ.

ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಶುಂಠಿಗೆ ವ್ಯಯಿಸುತ್ತಿರುವ ಖರ್ಚು ಲೆಕ್ಕ ಹಾಕಿದರೆ ಒಂದು ಎಕರೆಗೆ ಕನಿಷ್ಟ ಎಂದರೂ ರೂ. ೪-೫೦ ಲಕ್ಷ ಹಣ ಖರ್ಚಾಗುತ್ತಿದೆ.

ಒಂದು ಎಕರೆ ಭೂಮಿಯಲ್ಲಿ ಎಷ್ಟೇ ಉತ್ತಮವಾಗಿ ರೋಗ ರಹಿತವಾಗಿ ಬೆಳೆ ತೆಗೆಯುತ್ತೇನೆ ಅಂದರೂನು ೨೦೦ ಚೀಲ ಫಸಲು ಬರುವುದು ಹೆಚ್ಚೇ.

ಹಾಗಾಗಿ ಮಾಡಿದ ಖರ್ಚಿನ ಅರ್ಧದ ಪ್ರಮಾಣವೂ ಬಹಳಷ್ಟು ಕೃಷಿಕರಿಗೆ ದೊರಕುವುದಿಲ್ಲ.

ಹೊಸ ಶುಂಠಿಗೆ ಮಾರುಕಟ್ಟೆಯಲ್ಲಿ ೬೦ ಕೆ.ಜಿ. ಚೀಲಕ್ಕೆ ೩,೦೦೦ ಸಾವಿರ ಮೇಲ್ಪಟ್ಟು ದರ ಬಂದರೆ ಮಾತ್ರ ಶುಂಠಿ ಬೆಳೆಗಾರರು ಲಾಭ ನಿರೀಕ್ಷಿಸಬಹುದು.

ಇಲ್ಲದೇ ಹೋದರೆ ಈ ಬಾರಿಯೂ ಕಳೆದ ವರ್ಷದ ಹಾಗೆ ಖರ್ಚು ಮಾಡಿದ ಗಂಟು ಕೂಡ ಸಿಗದೇ ಮತ್ತೆ ಕೈ ಸುಟ್ಟುಕೊಳ್ಳುವ ಪರಿತಾಪ