*ಗೋಣಿಕೊಪ್ಪ, ಆ. ೨೨: ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯೊಂದಿಗೆ ನೀರಿನ ಸಂರಕ್ಷಣೆ ವಿಚಾರವಾಗಿ ಬೀದಿನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಹರಿಶ್ಚಂದ್ರಪುರದಲ್ಲಿ ಪ್ರಗತಿ ಜ್ಞಾನ ವಿಕಾಸ ಕೇಂದ್ರ, ಹರಿಶ್ಚಂದ್ರಪುರ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾರ್ಯಕ್ರಮ ನಡೆಯಿತು.

ಜಾಗೃತಿ ಅಭಿಯಾನಕ್ಕೆ ಗೋಣಿಕೊಪ್ಪ ಗ್ರಾಪಂ ಸದಸ್ಯೆ ಸಪೂರ ಬಾನು ಚಾಲನೆ ನೀಡಿದರು.

ಒಕ್ಕೂಟ ಅಧ್ಯಕ್ಷೆ ಲತಾ, ನಿವೃತ್ತ ಸೈನಿಕ ಮಣಿಕಂಠ, ನಿವೃತ್ತ ಶಿಕ್ಷಕ ಕಾಡ್ಯಮಾಡ ದೇವಯ್ಯ, ತಾಲೂಕು ಸಂಪನ್ಮೂಲ ಅಧಿಕಾರಿ ವರಲಕ್ಷ್ಮಿ, ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾತಂಡ, ಜ್ಞಾನವಿಕಾಸ ಸಮನ್ವಯಾಧಿಕಾರಿ ಉಷಾರಾಣಿ ಸೇವಾ ಪ್ರತಿನಿಧಿ ಸರಿತಾ ಇದ್ದರು.