ಕುಶಾಲನಗರ, ಸೆ. ೫: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವು ೧೦೪ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು ಸತತವಾಗಿ ೮ ವರ್ಷಗಳಿಂದ ಕೋಟಿಗೂ ಮೀರಿ ಲಾಭಗಳಿಸುತ್ತಿದ್ದು, ೨೦೨೪-೨೫ನೇ ಸಾಲಿನಲ್ಲಿ ರೂ. ೨೫೯.೩೦ ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ರೂ. ೧.೨೬ ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಹೇಳಿದರು.

ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಸಾಲಿನಲ್ಲಿ ೩೬೦೪ ಸದಸ್ಯರಿಂದ ರೂ. ೩೫೮.೩೯ ಲಕ್ಷಗಳ ಪಾಲುಹಣ ಸಂಗ್ರಹಿಸಿದ್ದು, ಈ ವರ್ಷ ರೂ. ೪೦೦.೬೭ ಲಕ್ಷಗಳ ಪಾಲುಹಣ ಸಂಗ್ರಹ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ದುಡಿಯುವ ಬಂಡವಾಳ ರೂ. ೭೮೫೩.೦೨ ಲಕ್ಷಗಳಷ್ಟು ಕ್ರೋಢೀಕರಿಸಿ ರೂ. ೮೯೬.೫೯ ಲಕ್ಷಗಳ ಹೆಚ್ಚಿಗೆ ಸಂಗ್ರಹ ಮಾಡಿರುತ್ತೇವೆ. ವಿವಿಧ ಠೇವಣಿಗಳ ರೂಪದಲ್ಲಿ ರೂ. ೫೭೬೩.೨೬ ಲಕ್ಷಗಳನ್ನು ಠೇವಣಿ ಹೊಂದಿದ್ದು, ಕಳೆದ ಸಾಲಿಗಿಂತ ಅಧಿಕ ರೂ. ೩೦೦.೪೧ ಲಕ್ಷಗಳ ಠೇವಣಿ ಸಂಗ್ರಹಿಸಲಾಗಿದೆ.

ಸಂಘದ ಸದಸ್ಯರು ಮತ್ತು ಗ್ರಾಹಕರು ಸಂಘದ ಮೇಲೆ ಇಟ್ಟಿರುವ ಅಭಿಮಾನವೇ ಇದಕ್ಕೆ ಸಾಕ್ಷಿಯಾಗಿರುತ್ತದೆ ಎಂದರು. ಸದಸ್ಯರಿಗೆ ಕೆ.ಸಿ.ಸಿ. ಸಾಲ ರೂ. ೧೦೫.೦೬ ಲಕ್ಷಗಳನ್ನು ಪಾವತಿಸಿದ್ದು, ಇನ್ನೂ ಕೆಲವು ಸದಸ್ಯರಿಗೆ ಸಾಲ ವಿತರಿಸಲು ಕ್ರಮ ತೆಗೆದುಕೊಂಡಿರುತ್ತೇವೆ. ಈ ಸಾಲಿನಲ್ಲಿ ವಿವಿಧ ಸಾಲಗಳ ರೂಪದಲ್ಲಿ ರೂ. ೫೦೦೦.೭೮ ಲಕ್ಷಗಳನ್ನು ವಿತರಿಸಿದ್ದು ರೂ. ೭೩೪.೦೪ ಲಕ್ಷಗಳ ಹೆಚ್ಚಿಗೆ ಸಾಲ ವಿತರಿಸಿರುತ್ತೇವೆ. ಸಂಘದ ಸ್ವಂತ ಬಂಡವಾಳದಿAದ ರೂ. ೪೦ ಲಕ್ಷಗಳನ್ನು ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಲಾಗಿದೆ ಎಂದರು.

ರೂ. ೪೯೦.೮೭ ಲಕ್ಷಗಳು ಕ್ರೋಢಿಕೃತವಾಗಲಿದ್ದು, ಕ್ಷೇಮನಿಧಿ ಮೊಬಲಗನ್ನು ಪೂರ್ತಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾಗುವುದು ಮತ್ತು ಕಟ್ಟಡ ನಿಧಿ ರೂ. ೩೮೮.೨೦ ಲಕ್ಷಗಳಿದ್ದು ೨೦೨೪-೨೦೨೫ನೇ ಸಾಲಿನ ಲಾಭ ವಿಲೇವಾರಿಯಲ್ಲಿ ರೂ. ೪೭.೯೩ ಲಕ್ಷ ಸೇರಿ ಕಟ್ಟಡ ನಿಧಿಯಲ್ಲಿ ಒಟ್ಟು ರೂ. ೪೩೬.೧೩ ಲಕ್ಷಗಳಿದ್ದು ಈ ಮೊಬಲಗು ಸಂಘವು ಉದ್ದೇಶಿಸಿರುವ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.

ಸದಸ್ಯರಿಗೆ ಕಳೆದ ೧೩ ವರ್ಷಗಳಿಂದ ಶೇ.೧೬ ರಿಂದ ಶೇ.೨೫ ಡಿವಿಡೆಂಡ್ ನೀಡುತ್ತಿದ್ದು, ಸಂಘವು ಸದಸ್ಯರ ಅನುಕೂಲಕೋಸ್ಕರ ತ್ಯಾಗರಾಜ ರಸ್ತೆಯಲ್ಲಿರುವ ೮.೬೦ ಸೆಂಟ್ಸ್ ನಿವೇಶನದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಸುಲಲಿತವಾಗಿ ಸದಸ್ಯರ ಸೇವೆಗೆ ಅನುಕೂಲವಾಗುವಂತೆ ವ್ಯವಹಾರವನ್ನು ನಡೆಸುತ್ತಿದ್ದೇವೆ. ಈ ಸಾಲಿನಲ್ಲಿ ಸದಸ್ಯರಿಗೆ ಶೇ. ೧೦ ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಹಿಂದಿನ ಸಾಲುಗಳಲ್ಲಿ ಸಾಲಗಾರ ಸದಸ್ಯರಿಗೋಸ್ಕರ ಹೊಸದಾಗಿ ಸಾಲಗಾರ ಸದಸ್ಯರ ಮರಣೋತ್ತರ ಪರಿಹಾರ ನಿಧಿಯ ಯೋಜನೆಯನ್ನು ಸಂಘದಲ್ಲಿ ಪ್ರಾರಂಭಿಸಿದ್ದು ಈ ಯೋಜನೆಗೆ ಸದಸ್ಯರು ಉತ್ತಮ ಪ್ರತಿಕ್ರಿಯೆಯನ್ನು ಹೊಂದಿದ್ದು ಕೇವಲ ೪ ವರ್ಷಗಳಲ್ಲಿ ಸದಸ್ಯರ ಠೇವಣಿ ಮತ್ತು ಸದಸ್ಯರು ತೊಡಗಿಸಿರುವ ಠೇವಣಿಯನ್ನು ಸಂಘದಲ್ಲಿ ಅತೀ ಹೆಚ್ಚಿನ ಬಡ್ಡಿದರದಲ್ಲಿ ತೊಡಗಿಸಿಕೊಂಡಿದ್ದು ವರದಿ ಸಾಲಿಗೆ ಈ ಮೊಬಲಗು ರೂ. ೭೬.೫೦ ಲಕ್ಷಗಳಾಗಿದ್ದು, ಮರಣ ಹೊಂದಿದ ಸದಸ್ಯರ ಸಾಲವನ್ನು ಅವರ ಕುಟುಂಬಸ್ಥರು ಮರುಪಾವತಿಸುವಾಗ ಈ ನಿಧಿಯಿಂದ ನಿಯಾಮಾನುಸಾರ ಆಡಳಿತ ಮಂಡಳಿಯವರು ಕಾಲಕಾಲಕ್ಕೆ ನಿಗದಿ ಮಾಡಿರುವ ಹಾಲಿ ಸದಸ್ಯರು ಸದ್ರಿ ನಿಧಿಯಲ್ಲಿ ಹೂಡಿರುವ ಮೊತ್ತಕ್ಕೆ ಈ ಹಿಂದೆ ನಿಗದಿಪಡಿಸಿದ್ದ ೭ ಪಟ್ಟು ಮೊತ್ತಕ್ಕೆ ಬದಲಾಗಿ ೯ ಪಟ್ಟು ಮೊತ್ತವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡಿ ಮೃತ ಸಾಲಗಾರ ಸದಸ್ಯನ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದ ಈ ನಿಧಿ ಅನುಕೂಲವಾಗತ್ತದೆ. ವನಿತಾ ಬಂಧು ಮತ್ತು ಜನಚೈತನ್ಯ ಎಂಬ ಜಂಟಿ ಭಾದ್ಯತಾ ಗುಂಪು ಸಾಲ ಯೋಜನೆಯು ಯಶಸ್ವಿಯಾಗಿದ್ದು ಈ ಯೋಜನೆಯಡಿಯಲ್ಲಿ ಒಟ್ಟು ೮೮೭ ಮಹಿಳೆಯರಿಗೆ ವರದಿ ಸಾಲಿನಲ್ಲಿ ರೂ. ೫.೮೩ ಕೋಟಿ ಸಾಲ ವಿತರಿಸಿದ್ದು ವಾರ್ಷಿಕ ಅಂತ್ಯಕ್ಕೆ ಒಟ್ಟಾಗಿ ೬.೫೨ ಕೋಟಿ ಬರಲು ಬಾಕಿಯಿದ್ದು ಈ ಸಾಲದ ಯೋಜನೆಯಿಂದ ಎಲ್ಲಾ ವರ್ಗದ ಮಹಿಳೆಯರು ಆರ್ಥಿಕ ಸಬಲತೆಯತ್ತ ಹೋಗುತ್ತಿರುವುದು ಸಂಘಕ್ಕೆ ಒಂದು ಹೆಗ್ಗಳಿಕೆಯ ವಿಚಾರವಾಗಿರುತ್ತದೆ ಎಂದು ತಿಳಿಸಿದರು. ಸದಸ್ಯರಿಗೆ ಜಾಮೀನು ಸಾಲದ ಮಿತಿ ರೂ. ೩ ಲಕ್ಷ, ಮಧ್ಯಮಾವಧಿ ಗಿರ್ವಿ ಸಾಲ, ಮನೆ ರಿಪೇರಿ, ಮನೆ ಕಟ್ಟಲು ಮನೆ ಅಡಮಾನ ರೂ. ೧೫ ರಿಂದ ೫೦ ಲಕ್ಷ, ನಿವೇಶನ, ಕಟ್ಟಡ, ವಾಣಿಜ್ಯ ಮಳಿಗೆ ವಾಸದ ಮನೆ ಖರೀದಿ ಮತ್ತು ನೂತನ ಗೃಹ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣ ಸಾಲ ರೂ. ೫೦ ಲಕ್ಷ, ವ್ಯಾಪಾರ, ಕೈಗಾರಿಕೆಯನ್ನು ಅಭಿವೃದ್ಧಿಪಡಿಸಲು ವ್ಯಾಪಾರಾಭಿವೃದ್ಧಿ ದೀರ್ಘಾವಧಿ ಸಾಲ ರೂ. ೫೦ ಲಕ್ಷ, ಹೊಸ ವಾಹನ ಖರೀದಿ ರೂ. ೨೫ ಲಕ್ಷ, ದೊಡ್ಡ ಮಟ್ಟದ ವ್ಯಾಪಾರಸ್ಥರಿಗೆ ವ್ಯಾಪಾರ ಮೀರಳತೆ ಸಾಲ ರೂ. ೫೦ ಲಕ್ಷ, ವ್ಯಾಪಾರಭಿವೃದ್ಧಿ ಸಲಾ ೩ ಲಕ್ಷ, ವನಿತಾ ಬಂಧು ಮಹಿಳಾ ಗುಂಪು ಸಾಲ ೨.೫ ಲಕ್ಷ, ಸ್ವ-ಸಹಾಯ ಗುಂಪು ಸಾಲ ೧೫ ಲಕ್ಷ, ಭದ್ರತಾ ಠೇವಣಿ ಸಾಲ-ಭದ್ರತಾ ಠೇವಣಿಯ ಮೇಲೆ ಶೇ. ೮೦ ರಷ್ಟು ಸಾಲ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಘದಲ್ಲಿ ತೊಡಗಿಸಿರುವ ನಿರಖು ಠೇವಣಿಗೂ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳಿಗೆ ಶೇ. ೦.೨೫ ಹೆಚ್ಚಿನ ಬಡ್ಡಿ ನೀಡುತ್ತಿದ್ದೇವೆ. ಸಂಘದ ನೂತನ ಕಟ್ಟಡದಲ್ಲಿ ಆರ್.ಬಿ.ಐ. ಮಾನದಂಡದAತೆ ನಿರ್ಮಾಣ ಮಾಡಿರುವ ಭದ್ರತಾ ಕೊಠಡಿಯೊಳಗೆ ಲಾಕರ್ ಸೌಲಭ್ಯವು ಸದಸ್ಯರು ಮತ್ತು ಗ್ರಾಹಕರಿಗೆ ದೊರೆಯುತ್ತದೆ. ಪ್ರತಿ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಮಕ್ಕಳ ಪೈಕಿ ೧೦ನೇ ತರಗತಿ, ದ್ವಿತೀಯ ಪಿ.ಯು.ಸಿ., ಅಂತಿಮ ಪದವಿ ಪರೀಕ್ಷೆ, ಡಿಪ್ಲೊಮ ಮತ್ತು ಕೊನೆಯ ಇಂಜಿನಿಯರಿAಗ್ ಪರೀಕ್ಷೆ, ವೈದ್ಯಕೀಯ ಪದವೀಧರರಿಗೂ ಉತ್ತಮ ಅಂಕಗಳಿಸಿರುವAತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ಕಳೆದ ೧೫ ವರ್ಷಗಳಿಂದಲೂ ನೀಡುತ್ತಿದ್ದೇವೆ. ಸದಸ್ಯರ ಮಕ್ಕಳು ರಾಷ್ಟçಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಸ್ಪರ್ಧಿಸಿರುವ ಕ್ರೀಡಾಸ್ಪರ್ಧಿಗಳಿಗೆ ಬಹುಮಾನ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

ಸAಘವು ಶತಮಾನೋತ್ಸವ ಸವಿನೆನಪಿಗಾಗಿ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರಿನಲ್ಲಿ ೨ ಎಕರೆ ನಿವೇಶನದಲ್ಲಿ ಇದೀಗ ಶತಮಾನೋತ್ಸವ ಭವನ ಕಟ್ಟಡ ಕಾಮಗಾರಿಯು ಭರದಿಂದ ನಡೆಯುತ್ತಿದ್ದು, ಮುಂದಿನ ವರ್ಷ ಅಂದರೆ ೨೦೨೬ ರ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಉದ್ಘಾಟನೆ ಆಗಲಿದೆ ಎಂದರು.

ಮಹಾಸಭೆ: ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ತಾ. ೭ ರಂದು ಪೂರ್ವಾಹ್ನ ೧೧.೦೦ ಗಂಟೆಗೆ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್‌ರವರ ಅಧ್ಯಕ್ಷತೆಯಲ್ಲಿ ಗಾಯಿತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಮಹಾಸಭೆ ನಡೆಯಲಿದೆ.

ಗೋಷ್ಠಿಯಲ್ಲಿ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ವಿ.ಎಸ್. ಆನಂದ್ ಕುಮಾರ್, ಯತೀಶ್, ಎಂ.ಎಸ್. ರಾಜೇಶ್, ಎಂ.ಎA. ಚರಣ್, ಕೆ.ಎನ್.ದೇವರಾಜ್, ಬಿ. ರಾಮಕೃಷ್ಣ, ಕವಿತಾ, ಹೆಚ್.ಎಂ. ಮಧುಸೂದನ್, ಮಹಮ್ಮದ್ ಇಬ್ರಾಹಿಂ, ಪ್ರಸನ್ನ, ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಇದ್ದರು.