ಸೋಮವಾರಪೇಟೆ, ಸೆ. ೫: ೨೦೨೫-೨೬ನೇ ಸಾಲಿಗೆ ಸಂಬಾರ ಮಂಡಳಿ ವತಿಯಿಂದ ಏಲಕ್ಕಿ ತೋಟ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ವಿವಿಧ ಯೋಜನೆಗಳಿಗೆ ಬೆಳೆಗಾರರಿಂದ ಸಹಾಯಧನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.
ಅರ್ಜಿ ಸಲ್ಲಿಸಲು ತಾ. ೩೦. ಕೊನೆಯ ದಿನವಾಗಿದ್ದು, ಮೊದಲು ಅರ್ಜಿ ಸಲ್ಲಿಸುವವರಿಗೆ ಆದ್ಯತೆ ನೀಡಲಾಗುವುದು. ಏಲಕ್ಕಿ ಮರುನಾಟಿ ಯೋಜನೆಯಡಿ ಅರ್ಜಿದಾರರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್, ೨೦೨೪-೨೫ನೇ ಸಾಲಿನ ಪಹಣಿ, ತೋಟದ ನಕ್ಷೆ, ಏಲಕ್ಕಿ ಸಿ.ಆರ್.ಸಿ., ತೋಟಗಾರಿಕೆ ಇಲಾಖೆಯಿಂದ ದೃಡೀಕರಣ ಪತ್ರ, ಎಸ್.ಸಿ. ಎಸ್.ಟಿ. ಸಮುದಾಯದವರು ಜಾತಿ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.
ಏಲಕ್ಕಿ ನರ್ಸರಿ ಯೋಜನೆಯಡಿ ಸಹಾಯ ಧನ ಬಯಸುವವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್, ೨೦೨೪-೨೫ ನೇ ಸಾಲಿನ ಪಹಣಿ ಲಗತ್ತಿಸಬೇಕು. ಕಾಳು ಮೆಣಸು ಬಿಡಿಸುವ ಯಂತ್ರ ಮತ್ತು ಸ್ಪöÊಸ್ ಕ್ಲೀನರ್, ಗ್ರೇಡರ್ಗೆ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್, ೨೦೨೪ - ೨೫ನೇ ಸಾಲಿನ ಪಹಣಿ, ಅನುಮೋದಿತ ತಯಾರಕರಿಂದ ಕೊಟೇಷನ್ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಂಬಾರ ಮಂಡಳಿ ಕಚೇರಿ ಅಥವಾ ಕ್ಷೇತ್ರಾಧಿಕಾರಿ ಎನ್.ಬಿ. ಲೋಕೇಶ್ ಮೊ: ೯೪೪೮೯೯೭೦೧೧ ನ್ನು ಸಂಪರ್ಕಿಸಬಹುದಾಗಿದೆ.