ಗೋಣಿಕೊಪ್ಪ ವರದಿ, ಸೆ. ೫ : ಕರುಂಬಯ್ಯಾಸ್ ಅಕಾಡೆಮಿಕ್ ಲರ್ನಿಂಗ್ ಸ್ಕೂಲ್, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್, ಎನ್‌ಇಬಿ, ಫೆಡರಲ್ ಬ್ಯಾಂಕ್, ಟಾಟಾ ಕಾಫಿ ಹಾಗೂ ಲೋಪಮುದ್ರ ಹಾಸ್ಪಿಟಲ್ ಸಹಯೋಗದಲ್ಲಿ ತಾ. ೭ ರಂದು ರಾಷ್ಟçಮಟ್ಟದ ಕೊಡಗು ಮಾನ್ಸೂನ್ ಹಾಲ್ಫ್ ಮ್ಯಾರಥಾನ್ ಆಯೋಜಿ

ಸಲಾಗಿದೆ ಎಂದು ಕ್ಯಾಲ್ಸ್ ಮುಖ್ಯಸ್ಥ ದತ್ತ ಕರುಂಬಯ್ಯ ತಿಳಿಸಿದ್ದಾರೆ.

ಕ್ಯಾಲ್ಸ್ ಶಾಲಾ ಆವರಣದಿಂದ ಬೆಳಿಗ್ಗೆ ೬ಗಂಟೆಗೆ ಮ್ಯಾರಥಾನ್ ಆರಂಭಗೊಳ್ಳಲಿದೆ. ೬.೪೫ ಕ್ಕೆ ೧೦ ಕೆ., ೮ ಗಂಟೆಗೆ ೫ ಕೆ. ಸ್ಪರ್ಧೆ ನಡೆಯಲಿದೆ. ೧೦ ಕಿ. ಮೀ, ೫ ಕಿ. ಮೀ. ದೂರದಲ್ಲಿ ನಡೆಯುವ ಸ್ಪರ್ಧೆಯು ಕೈಕೇರಿ, ಕಳತ್ಮಾಡ್, ಪಾಲಿಬೆಟ್ಟ ಟಾಟಾ ಕಾಫಿ ಮೂಲಕ ಹಿಂತಿರುಗಲಿದೆ.