ಮಡಿಕೇರಿ, ಸೆ. ೫; ವೀರಾಜಪೇಟೆ ಗೌಡ ಸಮಾಜಕ್ಕೆ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಸಂಬAಧ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಅವರ ಕುಟುಂಬಸ್ಥರು ಅಂದಾಜು ರೂ. ೩.೫ ಕೋಟಿ ಮೌಲ್ಯದ ಜಾಗವನ್ನು ದಾನವಾಗಿ ನೀಡಿದ್ದಾರೆ.

ವೀರಾಜಪೇಟೆಯಲ್ಲಿ ಸುಸಜ್ಜಿತ ಸಮಾಜದ ಕಟ್ಟಡ ಕಟ್ಟುವ ಅವಶ್ಯಕತೆಯನ್ನು ಮನಗಂಡು ದಿ. ಕುರುಂಜಿ ವೆಂಕಟರಮಣ ಗೌಡ ಅವರು ೨೦೦೪ ರಲ್ಲ್ಲಿ ೭೭ ಸೆಂಟ್ ಜಾಗವನ್ನು ರೂ. ೨೨ ಲಕ್ಷ ಹಣ ನೀಡಿ ಅವರ ಮಕ್ಕಳಾದ ಡಾ. ಕೆ. ವಿ. ಚಿದಾನಂದ ಮತ್ತು ಡಾ. ಕೆ. ವಿ. ರೇಣುಕಾ ಪ್ರಸಾದ್ ಅವರುಗಳ ಹೆಸರಿನಲ್ಲಿ ಖರೀದಿಸಿದ್ದರು. ಹಲವು ಕಾರಣಗಳಿಂದ ೨೧ ವರ್ಷಗಳಿಂದ ಜಾಗ ವರ್ಗಾವಣೆ ಆಗಿರಲಿಲ್ಲ. ಇದೀಗ ಕೊಡಗು ಗೌಡ ಸಮಾಜಗಳ ಒಕ್ಕೂಟದ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಜಾಗ ಹಸ್ತಾಂತರ ಪ್ರಕ್ರಿಯೆ ಕಾರ್ಯಕ್ಕೆ ಚಾಲನೆ ನೀಡುವ ಸಂಬAಧ ತೀರ್ಮಾನ ಕೈಗೊಳ್ಳಲಾಗಿತ್ತು.ಚಿದಾನಂದ ಅವರ ಪರವಾಗಿ ಅವರ ಮಗ ಕೆ.ಸಿ. ಅಕ್ಷಯ್, ಡಾ ಕೆ.ವಿ. ರೇಣುಕಾ ಪ್ರಸಾದ್ ಅವರ ಪರವಾಗಿ ಅವರ ೪ಆರ (ಮೊದಲ ಪುಟದಿಂದ) ಮಗ ಕೆ.ಆರ್. ಮೌರ್ಯ ಅವರುಗಳು ಮಡಿಕೇರಿ ಉಪ ನೋಂದಾವಣೆ ಕಚೇರಿಗೆ ಹಾಜರಾಗಿ ಅಂದಾಜು ರೂ ೩.೫೦ ಕೋಟಿ ಬೆಲೆಬಾಳುವ ಜಾಗವನ್ನು ವೀರಾಜಪೇಟೆ ಸಮಾಜದ ಅಧ್ಯಕ್ಷ ಮುಕ್ಕಾಟಿ ವಾಸು ಗಣಪತಿ ಅವರ ಹೆಸರಿಗೆ ಜಾಗದ ದಾನಪತ್ರ ಬರೆಸಿ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಉಪಾಧ್ಯಕ್ಷ ಡಾ.ತೇನನ ರಾಜೇಶ್, ಕಾರ್ಯದರ್ಶಿ ಪೇರಿಯನ ಉದಯ, ಕಾನೂನು ಸಲಹೆಗಾರ ಕೊಂಬಾರನ ರೋಶನ್, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಹಾಗೂ ಸಮಾಜದ ಪ್ರಮುಖರು ಇದ್ದರು.