ಚೆಯ್ಯಂಡಾಣೆ, ಸೆ. ೬: ಕೊಡವ ಜಮ್ಮಾ ಮುಸ್ಲಿಂ ಆ್ಯಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಕುಟುಂಬ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ನಾಪೋಕ್ಲುವಿನಲ್ಲಿ ನಡೆಯಿತು.
ನಾಪೋಕ್ಲುವಿನ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವಲೆರ ಅನೀಸ್ ವಹಿಸಿದ್ದರು. ಕೊಟ್ಟಮುಡಿಯ ಹರಿಶ್ಚಂದ್ರ ಹಂಸ ಅವರನ್ನು ಅಸೋಸಿಯೇಷನ್ ಗೌರವ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಹರಿಶ್ವಂದ್ರ ಹಂಸ ಅವರು, ಒಗ್ಗಟ್ಟು ಮೂಡಲು ಈ ರೀತಿಯ ಕಾರ್ಯಕ್ರಮ ಸಹಕಾರಿ ಎಂದರು.
ಪ್ರಧಾನ ಕಾರ್ಯದರ್ಶಿ ಅಷ್ಫಾಕ್ ಕುವಲೆರ, ಉಪಾಧ್ಯಕ್ಷÀ ಸಹದ್ ಹಾಜಿ ಎಮ್ಮೆಮಾಡು, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.