ಮಡಿಕೇರಿ, ಸೆ. ೬: ಅತಿಯಾದ ಮಳೆಯಿಂದ ಜಿಲ್ಲೆಯ ಬೆಳೆಗಾರರು, ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ರಾಜ್ಯ ಸರಕಾರ ನಷ್ಟದ ಪರಿಹಾರ ನೀಡುವಲ್ಲಿ ನಿರ್ಲಕ್ಷö್ಯ ತಾಳಿದೆ ಎಂದು ಆರೋಪಿಸಿರುವ ಜಿಲ್ಲಾ ಬಿಜೆಪಿ, ತಾ. ೯ ರಂದು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯ ಕುರಿತು ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ನಿರ್ಧರಿಸಿದೆ ಎಂದು ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೪ ತಿಂಗಳಿನಿAದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಕಾಫಿ ಸೇರಿದಂತೆ ಇನ್ನಿತರ ಬೆಳೆ ನಷ್ಟಕ್ಕೆ ತುತ್ತಾಗಿದೆ. ಆದರೆ, ಸರಕಾರ ಇದನ್ನು ಲಘುವಾಗಿ ಪರಿಗಣಿಸಿದೆ. ಜಿಲ್ಲಾಡಳಿತ, ಶಾಸಕರು, ಉಸ್ತುವಾರಿ ಸಚಿವರು ಇದರ ಬಗ್ಗೆ ಗಮನಹರಿಸುತ್ತಿಲ್ಲ. ಕಾಫಿ ಫಸಲು ನೆಲಕಚ್ಚುತ್ತಿದ್ದರೂ ಪರಿಹಾರ ಸಂಬAಧ ಸಮೀಕ್ಷೆಗಳನ್ನು ಕೈಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟಿçÃಯ ಹಬ್ಬದ ಸಂದರ್ಭ ಮಾತ್ರ ಕಾಣ ಸಿಗುತ್ತಾರೆ. ಮಳೆ ಕಡಿಮೆಯಾಗುವ ಸಮಯದಲ್ಲಿ ಸಮೀಕ್ಷೆ ತಂಡವನ್ನು ಜಿಲ್ಲಾಡಳಿತ ರಚಿಸಿದ್ದು, ಇದು ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಈ ಹಿಂದಿನ ಬಿಜೆಪಿ ಸರಕಾರ ಸಕಾಲದಲ್ಲಿ ಬೆಳೆ ಹಾನಿ ಪರಿಹಾರವನ್ನು ನೀಡುತ್ತಿತ್ತು. ಮಳೆಯಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತೋಟ ನಿರ್ವಹಣೆಯ ವೆಚ್ಚ ೪ ಪಟ್ಟು ಹೆಚ್ಚಾಗಿದೆ. ಇದರೊಂದಿಗೆ ಮನೆ ಹಾನಿ ಪ್ರಕರಣಗಳು ವರದಿಯಾಗಿವೆ. ಪರಿಸ್ಥಿತಿ ಹೀಗಿದ್ದರೂ ಸರಕಾರ ಮೌನವಹಿಸಿರುವುದು ಖಂಡನೀಯ. ಈ ನಿಟ್ಟಿನಲ್ಲಿ ತಾ. ೯ ರಂದು ಜಿಲ್ಲೆಯ ತೋಳುರು ಶೆಟ್ಟಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಸೂರ್ಲಬ್ಬಿ, ಹಮ್ಮಿಯಾಲ-ಮುಟ್ಲು, ಮುಕ್ಕೋಡ್ಲು, ಕಾಲೂರು, ಗಾಳಿಬೀಡು, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ಬಲ್ಲಮಾವಟ್ಟಿ, ಕಕ್ಕಬ್ಬೆ ಗ್ರಾಮಗಳಿಗೆ ಬಿಜೆಪಿ ನೇತೃತ್ವದ ತಂಡ ತೆರಳಿ ಪರಿಶೀಲಿಸಿ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ. ಸಂಸದರ ಮೂಲಕ ಕೇಂದ್ರ ಸರಕಾರಕ್ಕೂ ವರದಿ ಸಲ್ಲಿಸಲಾಗುವುದು ಎಂದು ವಿವರಿಸಿದರು.

ರೈತ ವಿರೋಧಿ ಸರಕಾರ

ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದಲ್ಲಿ ರೈತ ವಿರೋಧಿ ಸರಕಾರ ನಡೆಯುತ್ತಿದೆ. ಬೆಳೆಗಾರರಿಗೆ ಬಿಡಿಗಾಸು ಪರಿಹಾರವನ್ನು ನೀಡಿಲ್ಲ. ದೇಶದ ಅಭ್ಯುದಯದಲ್ಲಿ ಕಾಫಿ ಬೆಳೆಗಾರರ ಪಾತ್ರ ದೊಡ್ಡ ಮಟ್ಟದಲ್ಲಿದೆ. ಬೆಳೆಗಾರರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಕಿಡಿಕಾರಿದರು. ಧರ್ಮಸ್ಥಳವನ್ನು ಗುರಿ ಮಾಡಿ ಅಪಪ್ರಚಾರದಲ್ಲಿ ಎಡಪಂಥಿಯರ ಕೈವಾಡ ಇದೆ. ಇದರ ತನಿಖೆಯನ್ನು ಎನ್‌ಐಎಗೆ ನೀಡಬೇಕು. ಜೊತೆಗೆ ಇಡಿ ಕೂಡ ಮಧ್ಯಪ್ರವೇಶಿಸಿ ತನಿಖೆ ಕೈಗೊಳ್ಳಬೇಕೆಂದು ಅಪ್ಪಚ್ಚು ರಂಜನ್ ಒತ್ತಾಯಿಸಿದರು.