ಸೋಮವಾರಪೇಟೆ, ಸೆ. ೭: ಸಮೀಪದ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ. ಮಂತರ್‌ಗೌಡ ಅವರು ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗುವ ಸೌಲಭ್ಯ, ಔಷಧಿಗಳ ಸರಬರಾಜಿನ ಬಗ್ಗೆ ಡಾ. ಎಂ. ಚಿನ್ಮಯಿ ಅವರಿಂದ ಮಾಹಿತಿ ಪಡೆದರು.

ಆರೋಗ್ಯ ಕೇಂದ್ರÀದಲ್ಲಿನÀ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಸುವಂತೆ ಈ ಸಂದರ್ಭ ಸ್ಥಳೀಯರು ಬೇಡಿಕೆಯಿಟ್ಟರು. ಸರ್ಕಾರದ ಮಟ್ಟದಲ್ಲಿ ನೇಮಕಾತಿ ಪ್ರÀಕ್ರಿಯೆ ನಡೆಯುತ್ತಿದ್ದು, ನಂತರ ಖಾಲಿ ಹುದ್ದೆಗಳು ಭರ್ತಿಯಾಗಲಿವೆ. ತಾನೂ ಕೂಡ ಇಲಾಖೆಯ ಮಟ್ಟದಲ್ಲಿ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಆಸ್ಪತ್ರೆಯಲ್ಲಿ ಎಲ್ಲಾ ತರಹದ ಔಷಧಿ, ಮಾತ್ರೆಗಳು ಸಿಗಬೇಕು. ಈ ಬಗ್ಗೆ ವೈದ್ಯರು ಗಮನಹರಿಸಿ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭ ಆಸ್ಪತ್ರೆಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಅನುದಾನ ಕಲ್ಪಿಸುವ ಭರವಸೆ ನೀಡಿದರು. ನಂತರ ಗ್ರಾಮೀಣ ಭಾಗದ ರಸ್ತೆಗಳ ಪರಿಶೀಲನೆ ನಡೆಸಿದ ಶಾಸಕರು, ಚನ್ನಾಪುರ ಕಾಲೋನಿ ರಸ್ತೆ, ಕಾರೇಕೊಪ್ಪ ಗ್ರಾಮದೊಳಗಿನ ರಸ್ತೆಗೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು. ಗೌಡಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬಸವೇಶ್ವರ ದೇವಾಲಯಕ್ಕೆ ಅನುದಾನ ನೀಡುವುದಾಗಿ ತಿಳಿಸಿದರು. ಈ ಸಂದರ್ಭ ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್, ಗೌಡಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸನ್ನ, ಗ್ರಾಮದ ಪ್ರಮುಖರುಗಳಾದ ಜಿ.ಎ. ಮಹೇಶ್, ಗೌಡಳ್ಳಿ ಪ್ರಸಿ, ಜಿ.ಪಿ. ಸುನಿಲ್, ಕೂಗೂರು ಸುಮಂತ್, ಲೋಕೇಶ್, ಕಾಂಗ್ರೆಸ್ ಪಕ್ಷದ ಪ್ರಮುಖರುಗಳಾದ ಚೇತನ್, ಕಿರಣ್ ಉದಯಶಂಕರ್ ಸೇರಿದಂತೆ ಇತರರು ಇದ್ದರು.