ಕೂಡಿಗೆ, ಸೆ. ೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಾವಳಿ ಅಧಿಕವಾಗಿದೆ. ಗ್ರಾಮದ ರೈತರಾದ ಮಲ್ಲಿಕಾರ್ಜುನ, ಬಸವ ರಾಜ್ ಎಂಬವರಿಗೆ ಸೇರಿದ ಜಮೀನಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಬಾಳೆ, ಅಡಿಕೆ, ಸಿಹಿ ಗೆಣಸು ಬೆಳೆಗಳನ್ನು ತುಳಿದು ತಿಂದು ಭಾರಿ ನಷ್ಟ ಪಡಿಸಿವೆ. ಸ್ಥಳಕ್ಕೆ ಅತ್ತೂರು ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.