ಮಡಿಕೇರಿ, ಸೆ. ೫: ಭಾರತ್ ಕೆರಿಯರ್ ನೆಕ್ಟ್ ಸೊಲ್ಯೂಶನ್ಸ್ ಸಹಯೋಗದಲ್ಲಿ ಅಪೋಲೊ ಮೆಡ್ ಸ್ಕಿಲ್ಸ್ ಸಂಸ್ಥೆಯಿAದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ೬ ತಿಂಗಳ ಉಚಿತ ಜನರಲ್ ಡ್ಯೂಟಿ ಅಸಿಸ್ಟೆಂಟ್ (ಜಿಡಿಎ) ತರಬೇತಿ ಬೆಂಗಳೂರಿನಲ್ಲಿ ನೀಡಲಾಗುತ್ತಿದೆ. ೧೮-೩೦ ವರ್ಷ ವಯಸ್ಸಿನ ಕನಿಷ್ಟ ೧೦ನೇ ತರಗತಿ ಉತ್ತೀರ್ಣರು ಅರ್ಹರಾಗಿದ್ದು ಆಸ್ಪತ್ರೆ ಹಾಗೂ ಆರೈಕೆ ಕ್ಷೇತ್ರಗಳಿಗೆ ಸಂಬAಧಿಸಿದ ಕೆಲಸ ಒಳಗೊಂಡ ತರಬೇತಿಯ ಬಳಿಕ ಖಾಸಗಿ ಆಸ್ಪತ್ರೆ ವೃದ್ದಾಶ್ರಮ ಹಾಗೂ ಹಿರಿಯರ ಆರೈಕೆ ಕೇಂದ್ರಗಳಲ್ಲಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ೯೫೩೫೬೦೨೮೮೮/ ೬೩೬೨೯೦೨೩೧೧/ ೬೩೩೨೯೦೨೩೩೫ ಸಂಪರ್ಕಿಸಬಹುದು ಎಂದು ಭಾರತ್ ಕೆರಿಯರ್ ಕನೆಕ್ಟ್ ಸೊಲ್ಯೂಶನ್ಸ್ ಎಲ್.ಎಲ್.ಪಿ, ಇದರ ಸಿ.ಇ.ಒ ವಿ.ಹೇಮಂತ್ ಕುಮಾರ್ ಅವರು ತಿಳಿಸಿದ್ದಾರೆ.

ಭಾರತ್ ಕೆರಿಯರ್ ನೆಕ್ಟ್ ಸೊಲ್ಯೂಶನ್ಸ್ ಸಹಯೋಗದಲ್ಲಿ ಅಶೀರ್ವಾದ್ ಪ್ಲಂಬಿAಗ್ ಸ್ಕೂಲ್ ಸಂಸ್ಥೆ ಬೆಂಗಳೂರಿನಲ್ಲಿ ೭೫ ದಿನಗಳ ಪ್ಲಂಬಿAಗ್ ತರಬೇತಿಯನ್ನು ೧೮-೪೫ ವರ್ಷದ ಅರ್ಹ ಪುರುಷ ಅಭ್ಯರ್ಥಿಗಳಿಗೆ ಅಂತರರಾಷ್ಟೀಯ ಮಟ್ಟದ ಉಚಿತ ತರಬೇತಿ, ಉಚಿತ ವಸತಿ, ಆಹಾರದೊಂದಿಗೆ ನೀಡುತ್ತಿದೆ. ತರಬೇತಿ ನಂತರ (ಡಬ್ಲುö್ಯಎಂಎಸ್‌ಪಿಸಿ) ಪ್ರಮಾಣಪತ್ರ ಮತ್ತು ಉದ್ಯೋಗ ಸಹಾಯ ಲಭ್ಯವಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ೯೫೩೫೬೦೨೮೮೮/೬೩೬೨೯೦೨೩೧೧/ ೬೩೬೨೯೦೨೮೩೪ ಅನ್ನು ಸಂಪರ್ಕಿಸಬಹುದು.