ಗೋಣಿಕೊಪ್ಪಲು, ಸೆ.೭: ಗೋಣಿಕೊಪ್ಪದ ಪ್ರತಿಷ್ಠಿತ ಕ್ಯಾಲ್ಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ರಾಷ್ಟçಮಟ್ಟದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್ ಅತ್ಯಂತ ಯಶಸ್ವಿಯಾಗಿ ನಡೆಯಿತು. ದೇಶ ಹಾಗೂ ವಿದೇಶದಿಂದ ಆಗಮಿಸಿದ್ದ ಮ್ಯಾರಥಾನ್ ಪಟುಗಳು ಮುಂಜಾನೆಯ ಚುಮು-ಚುಮು ಚಳಿಯ ನಡುವೆ ಓಟದಲ್ಲಿ ಭಾಗವಹಿಸಿ ಗಮನ ಸೆಳೆದರು. ಮೂರು ವಿಭಾಗಗಳಲ್ಲಿ ನಡೆದ ಓಟದ ಸ್ಪರ್ಧೆಯು ೨೧ ಕಿ.ಮಿ(ಹಾಫ್ ಮ್ಯಾರಥಾನ್), ೧೦ ಕಿ.ಮಿ ಹಾಗೂ ೫ ಕಿ.ಮಿ ಸ್ಪರ್ಧೆಗಳನ್ನು ಒಳಗೊಂಡಿತ್ತು. ಶಾಲಾ ಆವರಣದಿಂದ ಮ್ಯಾರಥಾನ್ ಪಟುಗಳು ಬೆಳಿಗ್ಗೆ ೬ ಗಂಟೆಗೆ ಮೊದಲ ಸುತ್ತಿನಲ್ಲಿ ಓಟ ಆರಂಭಿಸಿದರು. ಎರಡನೇ ಸುತ್ತಿನ ಮ್ಯಾರಥಾನ್ ೬.೪೫ಕ್ಕೆ ಪ್ರಾರಂಭÀವಾದರೆ, ಮೂರನೇ ಸುತ್ತಿನ ಓಟವು ೮:೩೦ ಗಂಟೆಗೆ ಆರಂಭವಾಯಿತು. ಮ್ಯಾರಥಾನ್ ಪಟುಗಳು ಕೈಕೇರಿ, ಕಳತ್ಮಾಡು, ಪಾಲಿಬೆಟ್ಟ ಟಾಟಾ ಕಾಫಿ ತೋಟದ ಮೂಲಕ ಸಾಗಿ ನಂತರ ಕ್ಯಾಲ್ಸ್ ಮೈದಾನಕ್ಕೆ ಆಗಮಿಸಿದರು. ಐದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮ್ಯಾರಥಾನ್ ಕ್ರೀಡಾಪಟುಗಳು ಆಗಮಿಸುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದರು.
ಶ್ರೀಲಂಕಾ ಹಾಗೂ ಇಥಿಯೋಪಿಯ ದೇಶಗಳÀ ಮ್ಯಾರಥಾನ್ ಪಟುಗಳು ಆಗಮಿಸಿ ಪುರುಷರ ಹಾಗೂ ಮಹಿಳಾ ವಿಭಾಗದ ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ಗಮನ ಸೆಳೆದರು. ಸಣ್ಣ ಮಕ್ಕಳಿಂದ ಹಿಡಿದು ೭೨ ವಯಸ್ಸಿನ ಕ್ರೀಡಾಪಟುಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕ್ಯಾಲ್ಸ್ ವಿದ್ಯಾಸಂಸ್ಥೆಯ ಟರ್ಫ್ ಮೈದಾನದಲ್ಲಿ ಮುಂಜಾನೆಯ ೫ ಗಂಟೆಯ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಜಮಾವಣೆಗೊಳ್ಳುವ ಮೂಲಕ ನಿಗದಿತ ಸಮಯದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಪರಸ್ಪರ ಸಂತಸ ಹಂಚಿಕೊAಡರು.
ಕರುAಬಯ್ಯಾಸ್ ಅಕಾಡೆಮಿ ಫಾರ್ ಲರ್ನಿಂಗ್ ಆ್ಯಂಡ್ ಸ್ಪೋರ್ಟ್ಸ್ (ಕ್ಯಾಲ್ಸ್), ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್, ಎನ್.ಇ.ಬಿ ಫೆಡರಲ್ ಬ್ಯಾಂಕ್, ಲೋಪಾಮುದ್ರ ಆಸ್ಪತ್ರೆ ಹಾಗೂ ಟಾಟಾ ಕಾಫಿ ಸಹಯೋಗದೊಂದಿಗೆ ೪ನೇ ಆವೃತ್ತಿಯ ರಾಷ್ಟ್ರೀಯ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್ ಅಚ್ಚುಕಟ್ಟಾಗಿ ನೆರವೇರಿತು.
೨೧ ಕಿ.ಮಿ ಓಟ - ಹಾಫ್ ಮ್ಯಾರಥಾನ್‌ಗೆ ಫೆಡರಲ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ವೆಂಕಟ್‌ರಾಮನ್ ವೆಂಕಟೇಶ್ವರನ್ ಹಾಗೂ ಕರ್ನಾಟಕ ಸರ್ಕಾರದ ಸಾರಿಗೆ, ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಯ ಕಾರ್ಯದರ್ಶಿ ರಾಜೇಂದರ್ ಕಠಾರಿಯ (ಐಎಎಸ್) ಅವರುಗಳು ಚಾಲನೆ ನೀಡಿದರು. ೧೦ ಕಿ.ಮಿ ಓಟದ ಸ್ಪರ್ಧೆಯನ್ನು ಕ್ಯಾಲ್ಸ್ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಭಾರತ ಹಾಕಿ ತಂಡದ ಆಟಗಾರ ಚಂದೂರ ಪೂವಣ್ಣ, ಅರ್ಜುನ ಪ್ರಶಸ್ತಿ ವಿಜೇತೆ ಹಾಗೂ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ಸಂಸ್ಥಾಪಕಿ ಅಶ್ವಿನಿ ನಾಚಪ್ಪ, ಕ್ಯಾಲ್ಸ್ ಶಾಲೆ ಸ್ಥಾಪಕ ಅಧ್ಯಕ್ಷ ದತ್ತ ಕರುಂಬಯ್ಯ, ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ, ಎನ್.ಇ.ಬಿ ಸ್ಪೋರ್ಟ್ಸ್ ನಿರ್ದೇಶಕಿ ರೀತ್ ದೇವಯ್ಯ ಹಾಗೂ ೪ಏಳನೇ ಪು ಎನ್.ಇ.ಬಿ ಸ್ಪೋರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಅಡಿಗ ಅವರುಗಳು ಚಾಲನೆ ನೀಡಿದರು.
೫ ಕಿ.ಮಿ ಓಟಕ್ಕೆ ಟಾಟಾ ಕಾಫಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸಿ.ಎ ಬೋಪಯ್ಯ ಚಾಲನೆ ನೀಡಿದರು.
ವಿಜೇತರ ವಿವರ
ಹಾಫ್ ಮ್ಯಾರಥಾನ್ ಮಹಿಳೆಯರ ವಿಭಾಗದಲ್ಲಿ ಸೆನೈಟ್ ಕೆಫೆಲೆಗನ್ ಲೆಶಾರ್ಜ್, ಬಿಜಾಯ್ ಬರ್ಮನ್ ಹಾಗೂ ವಿಜಯಲಕ್ಷಿö್ಮÃ ಕರಲಿಂಗಣ್ಣವರ್ ಅವರುಗಳು ಕ್ರಮವಾಗಿ ಪ್ರಥಮ ೩ ಸ್ಥಾನಗಳನ್ನು ಅಲಂಕರಿಸಿದರು. ಹಾಫ್ ಮ್ಯಾರಥಾನ್ ಪುರುಷರ ವಿಭಾಗದಲ್ಲಿ ನಿಗುಸೆ ಕೆಬೆಡೆ ಗುರ್ಮೆಸ್ಸಾ, ಶಿವಾನಂದ ಲಕ್ಷö್ಮಣ ಚಿಗಾರಿ ಹಾಗೂ ರಂಗಣ್ಣ ನಾಯ್ಕರ್ ಪ್ರಥಮ, ದ್ವಿತೀಯ, ತೃತೀಯ ಪಡೆದು ವಿಜೇತರಾಗಿ ಹೊರಹೊಮ್ಮಿದರು. ಮಹಿಳೆಯರ ೧೦ ಕಿ.ಮಿ ಓಟದಲ್ಲಿ ನೂರ್‌ಜಹಾನ್ ಎ ಮುಜಾವರ್, ರೋಹಿಣಿ ಎ ದುರಾದುಂಡಿ, ಚೋಂದಮ್ಮ ಕೆ.ಟಿ ಅವರುಗಳು ಕ್ರಮವಾಗಿ ೩ ಸ್ಥಾನಗಳನ್ನು ಗಳಿಸಿದರು. ಪುರುಷರ ೧೦ ಕಿ.ಮಿ ವಿಭಾಗದಲ್ಲಿ ಮಣಿಕಂಠ, ದೇವ್ ನಾರಾಯಣ್ ಗುರುರಾಜ್, ಮಣಿಕಂಠ ಮಡಿವಾಳರ್ ಅವರುಗಳು ವಿಜೇತರಾಗಿ ಹೊರಹೊಮ್ಮಿದರು. ಹಾಫ್ ಮ್ಯಾರಥಾನ್ ವಿಜೇತರಿಗೆ ರೂ.೨೫,೦೦೦, ರೂ.೧೫,೦೦೦ ಹಾಗೂ ರೂ.೧೨,೫೦೦ ನಗದು ಬಹುಮಾನ ವಿತರಣೆ ಮಾಡಲಾಯಿತು.