ನಾಪೋಕ್ಲು, ಸೆ. ೭: : ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹÀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಸೇವೆಯಲ್ಲಿರುವ ಶಾಲಾ ಶಿಕ್ಷಕರನ್ನು ಗೌರವಿಸಲಾಯಿತು. ಈ ಸಂದರ್ಭ ಶಿಕ್ಷಕಿ ಕೂಡಕಂಡಿ ಸೋನಿ ಸುದೀಪ್ ಅವರು ಮಾತನಾಡಿ ಜೀವ ಕೊಟ್ಟ ತಾಯಿ ಮೊದಲ ಗುರು ಎಂದೆನಿಸಿಕೊAಡು ಜೀವನದ ದಾರಿ ತೋರಿದರೆ ೪ ಗೋಡೆಯ ಕೋಣೆಯೊಳಗೆ ಮಗುವಿನ ಜೀವನ ರೂಪಿಸುವವರು ಶಿಕ್ಷಕರು ಆದ್ದರಿಂದ ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರು ಸ್ಮರಣೀಯರು ಎಂದರು.
ಮತ್ತೊಬ್ಬ ಶಿಕ್ಷಕಿ ಕುದುಪಜೆ ಬೃಂದಾ ಕವÀನ್ ಮಾತನಾಡಿ ಶಿಕ್ಷಕರ ದಿನಾಚರಣೆ ಎಂಬುದು ಒಂದು ದಿನದ ಆಚರಣೆಗೆ ಸೀಮಿತವಾಗಬಾರದು ಎಂದರು.
ತುಳಸಿ ಮೋಹನ್ ಮಾತನಾಡಿ ಮನೆಯೇ ಮೊದಲ ಶಾಲೆ ತಾಯಿ ಯೇ ಮೊದಲ ಗುರು. ಆದರೂ ನಮ್ಮ ಜೀವನ ಹಾಗೂ ವ್ಯವಹಾರಿಕ ವಿಚಾರಗಳಿಗೆ ಮನೆಯ ಪಾಠ ಸಾಲದು ಆದ್ದರಿಂದ ವಿಚಾರವಂತ ಗುರುಗಳಿಂದ ಶಿಕ್ಷಣ ಪಡೆಯಬೇಕು ಎಂದರು.
ನಿವೃತ್ತ ಶಿಕ್ಷಕಿ ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ, ಶಿಕ್ಷಕಿ ಕುದುಪಜೆ ಬೃಂದಾ ಕವನ್, ಬಾಡನ ಡೈಸಿ ಲೋಕೇಶ್, ಕೂಡಕಂಡಿ ಸೋನಿ ಸುದೀಪ್ ಇವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು. ಕರ್ನಾಟಕ ಬೆಸ್ಟ್ ಡ್ಯಾನ್ಸರ್ ಸೀಸನ್ ೧ ಇದರಲ್ಲಿ ನಾಲ್ಕನೇ ಸ್ಥಾನ ಪಡೆದ ಮಡಿಕೇರಿ ಡಾನ್ಸ್ ಲ್ಯಾಬ್ ನೃತ್ಯ ಶಾಲೆಯ ವಿದ್ಯಾರ್ಥಿನಿ ಪೊಡನೋಳನ ಸಿಂಚನ ಗಿರೀಶ್ ಅವರ ನೃತ್ಯ ಪ್ರದರ್ಶನ ನಡೆಯಿತು. ಒಕ್ಕೂಟದ ಸದಸ್ಯರು ಗುರುವಂದನಾ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ಹೊಸೊಕ್ಲು ಲತಾ ಮೊಣ್ಣಪ್ಪ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ ಪ್ರಾರ್ಥಿಸಿ, ಬೈಚನ ಸ್ವಾತಿ ಮಂದಪ್ಪ ಸ್ವಾಗತಿಸಿ ಕಾಳೇರಮ್ಮನ ರಶಿ ಅಶೋಕ್ ಕಾರ್ಯಕ್ರಮ ನಿರೂಪಿಸಿ ಕಡ್ಯದ ಸ್ಮಿತಾ ಜೀವನ್ ವಂದಿಸಿದರು.