ವೀರಾಜಪೇಟೆ, ಸೆ. ೭: ಪಡುವಣದಲ್ಲಿ ಸೂರ್ಯ ಮರೆಯಾಗಿ ಕತ್ತಲು ಆವರಿಸುತ್ತಿದಂತೆ ಬೆಳಕಿನ ರಂಗವಲ್ಲಿ ಪಟ್ಟಣವನ್ನು ಸುತ್ತುವರೆದಿತ್ತು. ಗಗನಚುಂಬಿ ಬೆಳಕಿನ ವೈಭವದೊಂದಿಗೆ ಕಲಾತ್ಮಕ ಮಂಟಪಗಳ ಪ್ರದರ್ಶನ ವೀರಾಜಪೇಟೆಯ ಐತಿಹಾಸಿಕ ಗಣೇಶ ವಿಸರ್ಜನೋತ್ಸವಕ್ಕೆ ವೈಭವ ತರುವುದರೊಂದಿಗೆ ೧೧ ದಿನಗಳ ಕಾಲ ನಡೆದ ಉತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ವೀರಾಜಪೇಟೆ ಪಟ್ಟಣದಲ್ಲಿ ನಡೆದ ವಿಸರ್ಜನೋತ್ಸವ ಅದ್ದೂರಿತನದೊಂದಿಗೆ ಉತ್ಸಾಹಭರಿತದಿಂದ ಕೂಡಿತ್ತು. ಮಳೆಯ ಸಿಂಚನ ನಡುವೆ ಜನರು ಸಂಭ್ರಮ, ಸಡಗರವನ್ನು ಅನುಭವಿಸಿದರು. ಗಣೇಶೋತ್ಸವದಂದು ನಗರದ ೨೨ ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಆಕರ್ಷಕವಾಗಿ ಸಾಗುವುದರೊಂದಿಗೆ ಶೋಭಾಯಾತ್ರೆ ಕಣ್ಮನ ಸೆಳೆಯಿತು.

ಭೀತಿ ಹುಟ್ಟಿಸಿದ ವರುಣ

೬ ಗಂಟೆ ವೇಳೆಯಲ್ಲಿ ಸುರಿಯಲಾರಂಭಿಸಿದ ಮಳೆ ೮ ಗಂಟೆ ತನಕವೂ ಮುಂದುವರೆಯಿತು. ವಿಸರ್ಜನೋತ್ಸವವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದ ಜನರಲ್ಲಿ ನಿರಾಸೆ ಭಾವ ಮೂಡಿತು. ೮.೩೦ರ ವೇಳೆಗೆ ವರುಣ ಕೃಪೆ ತೋರಿ ಅಬ್ಬರ ತಗ್ಗಿದ ಹಿನ್ನೆಲೆ ಸಂಭ್ರಮದ ಕಳೆ ಮರುಸೃಷ್ಟಿಯಾಯಿತು. ಜಿಲ್ಲೆ, ಹೊರ ಜಿಲ್ಲೆಯ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯ ಜನರು ಕಂಡುಬAದರು. ನಗರದ ರಾಜಬೀದಿಗಳು ಬೆಳಕಿನ ವೈಭವದಿಂದ ಕಂಗೊಳಿಸುತ್ತಿತ್ತು. ಗಡಿಯಾರ ಕಂಬದ ಬಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ೧೦೧ ಈಡುಗಾಯಿ ಅರ್ಪಿಸಿ ಪುಷ್ಪಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಿಡಿಮದ್ದು ಸಿಡಿಸಿ ಇತರ ಸಮಿತಿಗಳು ಮೂರ್ತಿಯನ್ನು ಮಂಟಪಕ್ಕೆ ಸ್ಥಳಾಂತರಿಸಿ ಮೆರವಣಿಗೆ ಸಜ್ಜಾಗುವಂತೆ ಸಂದೇಶ ನೀಡುವ ಮೂಲಕ ವಿಸರ್ಜನೋತ್ಸವಕ್ಕೆ ಮುನ್ನುಡಿಯಿಡಲಾಯಿತು.

ಉತ್ಸವದ ಸಾರಥಿಯಾದ ಶ್ರೀ ಮಹಾಗಣಪತಿ ದೇವಾಲಯದ ಮೂರ್ತಿಯನ್ನು ಮೆರವಣಿಗೆ ಮೂಲಕ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿ ಪ್ರದೇಶ ಗೌರಿ ೪ಏಳನೇ ಪ ಮೊದಲ ಪುಟದಿಂದ)

ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಉಳಿದ ಎಲ್ಲಾ ಮಂಟಪಗಳ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ದೊರೆಯಿತು. ಎಲ್ಲ ಮಂಟಪಗಳಲ್ಲಿ ಗಣೇಶ ಉತ್ಸವ ಮೂರ್ತಿಯಾಗಿ ಪ್ರತಿಷ್ಠಾಪಿಸಿದರೆ, ಶ್ರೀ ಬಸವೇಶ್ವರ ದೇವಾಲಯದ ಮಂಟಪದಲ್ಲಿ ಮಾತ್ರ ಐತಿಹಾಸಿಕ ಪ್ರತೀತಿ ಇರುವ ಹಿನ್ನೆಲೆ ಪ್ರದೇಶ ಗೌರಿಯನ್ನು ಉತ್ಸವ ಮೂರ್ತಿಯಾಗಿ ಪ್ರತಿಷ್ಠಾಪಿಸಲಾಗಿತ್ತು.

ಮೆರವಣಿಗೆಯಲ್ಲಿ ಗಡಿಯಾರ ಕಂಬದ ಶ್ರೀ ಮಹಾಗಣಪತಿ ದೇವಾಲಯ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಅರಸುನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ತೆಲುಗರ ಬೀದಿಯ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದ ವಿನಾಯಕ ಯುವಕ ಭಕ್ತ ಮಂಡಳಿ, ಮೀನುಪೇಟೆಯ (ಕಂಚಿಕಾಮಾಕ್ಷಿ ರಸ್ತೆ) ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಪುರಸಭೆಯ ಗಣಪತಿ ಸೇವಾ ಸಮಿತಿ, ಅಯ್ಯಪ್ಪ ಬೆಟ್ಟದ ಶ್ರೀ ವರದ ವಿನಾಯಕ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ಗಣಪತಿ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ, ನೆಹರು ನಗರದ ನೇತಾಜಿ ಉತ್ಸವ ಸಮಿತಿ, ಗಣಪತಿ ಬೀದಿಯ (ಪಂಜರಪೇಟೆ) ಶ್ರೀ ಮಹಾಗಣಪತಿ ಸೇವಾ ಸಂಘ, ಮಲೆತಿರಿಕೆ ಬೆಟ್ಟದ ಶ್ರೀ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ಸುಣ್ಣದ ಬೀದಿಯ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಚಿಕ್ಕಪೇಟೆ (ಛತ್ರಕೆರೆ) ಆಂಜನೇಯ ದೇವಾಲಯದ ಶ್ರೀ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಸುಂಕದ ಕಟ್ಟೆಯ ಶ್ರೀ ಸರ್ವ ಸಿದ್ಧಿ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲದ ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ, ಗೌರಿಕೆರೆಯ ಶ್ರೀ ಗಣಪತಿ ಉತ್ಸವ ಸಮಿತಿ, ಪಂಜರಪೇಟೆಯ ವಿನಾಯಕ ಸೇವಾ ಸಮಿತಿ, ಕುಕ್ಲೂರಿನ ಕುಂದತ್ ವಿಘ್ನೇಶ್ವರ ಸೇವಾ ಸಮಿತಿ, ಶಿವಕೇರಿಯ ಶ್ರೀ ವಿನಾಯಕ ಯುವ ಸಮಿತಿ, ಕೆ.ಬೋಯಿಕೇರಿಯ ಕೆಂಕೇರಮ್ಮ ದೇವಾಲಯದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಗಾಂಧಿ ನಗರ ಗಣಪತಿ ಸೇವಾ ಸಮಿತಿಯ ಮಂಟಪಗಳು ನಗರದ ರಾಜಬೀದಿಯಲ್ಲಿ ಸಾಗಿದವು.

ಬೆಳಕಿನ ದಿಬ್ಬಣ

ರಾಜಬೀದಿಯಲ್ಲಿ ಮಂಟಪದ ಶೋಭಾಯಾತ್ರೆ ಕಂಡು ಜನ ಪುಳಕಿತರಾದರು. ಮಂಟಪಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ವಿವಿಧ ಭಂಗಿಯ ಮೂರ್ತಿಗಳಿಗೆ ಭಕ್ತರು ಪೂಜೆ ಸಲ್ಲಿಸಿ, ನಮಿಸಿ ಪುನೀತರಾದರು.

ಮಿನಿ ದಸರಾವೆಂದೆ ಕರೆಸಿಕೊಳ್ಳುವ ವಿಸರ್ಜನೋತ್ಸವದಲ್ಲಿ ಬಾನೆತ್ತರಕ್ಕೆ ಹೊರಹೊಮ್ಮುವ ಬೆಳಕಿನಿಂದ ಅಕ್ಷರಶಃ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತಿತ್ತು. ಪಟ್ಟಣ ನವವಧುವಿನಂತೆ ಶೃಂಗಾರ ಗೊಂಡು ಕಂಗೊಳಿಸುತ್ತಿತ್ತು. ಸಂಭ್ರಮದೊAದಿಗೆ ಭಕ್ತಾದಿ ಗಳು ಪ್ರತಿಷ್ಠಾಪಿತ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದರು. ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಎಲ್ಲಾ ವಯೋಮಾನದ ಜನ ಸಂಭ್ರಮವನ್ನು ಸಾಕ್ಷೀ ಕರಿಸಿದರು. ಗೌರಿ ಕೆರೆಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಉತ್ಸವ ಸಂಪನ್ನಗೊAಡಿತು.

ವಿಸರ್ಜನೆ ವೇಳೆ ವಿವಿಧ ಸಮಿತಿಗಳಿಂದ ಅನ್ನದಾನ ನಡೆಯಿತು. ಕಾರು ನಿಲ್ದಾಣ ಬಳಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು

ಚಿತ್ರ-ವರದಿ : ಹೆಚ್.ಜೆ. ರಾಕೇಶ್,

ಕಿಶೋರ್ ಶೆಟ್ಟಿ

ಚಿತ್ರ ವಿವರ

೧ : ಗೌರಿಕೆರೆಯ ಶ್ರೀ ಗಣಪತಿ ಉತ್ಸವ ಸಮಿತಿ

೨ : ಪುರಸಭೆಯ ಗಣಪತಿ ಸೇವಾ ಸಮಿತಿ

೩ : ಸುಣ್ಣದ ಬೀದಿಯ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ

ಸೇವಾ ಸಮಿತಿ

೪ : ದಖ್ಖನಿ ಮೊಹಲ್ಲದ ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ

೫ : ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ,

೬ : ಪಂಜರಪೇಟೆಯ ವಿನಾಯಕ ಸೇವಾ ಸಮಿತಿ

೭ : ಮೀನುಪೇಟೆಯ ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ

೮ : ಗಾಂಧಿ ನಗರ ಗಣಪತಿ ಸೇವಾ ಸಮಿತಿ

೯ : ನೆಹರು ನಗರದ ನೇತಾಜಿ ಉತ್ಸವ ಸಮಿತಿ

೧೦ : ಗಣಪತಿ ಬೀದಿಯ ಶ್ರೀ ಮಹಾಗಣಪತಿ ಸೇವಾ ಸಂಘ

೧೧ : ಶ್ರೀ ಮಹಾಗಣಪತಿ ದೇವಾಲಯ

೧೨ : ಅರಸುನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ

೧೩ : ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ

೧೪ : ಸುಂಕದ ಕಟ್ಟೆಯ ಶ್ರೀ ಸರ್ವ ಸಿದ್ಧಿ ವಿನಾಯಕ ಉತ್ಸವ ಸಮಿತಿ

೧೫ : ಅಯ್ಯಪ್ಪ ಬೆಟ್ಟದ ಶ್ರೀ ವರದ ವಿನಾಯಕ ಸೇವಾ ಸಮಿತಿ

೧೬ : ಮಲೆತಿರಿಕೆ ಬೆಟ್ಟದ ಶ್ರೀ ಕಣ್ಮಣಿ ವಿನಾಯಕ ಉತ್ಸವ ಸಮಿತಿ

೧೭ : ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ಗಣಪತಿ

ಉತ್ಸವ ಸಮಿತಿ

೧೮ : ಕುಕ್ಲೂರಿನ ಕುಂದತ್ ವಿಘ್ನೇಶ್ವರ ಸೇವಾ ಸಮಿತಿ

೧೯ : ಶಿವಕೇರಿಯ ಶ್ರೀ ವಿನಾಯಕ ಯುವ ಸಮಿತಿ

೨೦ : ಶ್ರೀ ಜಲದರ್ಶಿನಿ ವಿನಾಯಕ ಸೇವಾ ಸಮಿತಿ

೨೧ : ಕೆ.ಬೋಯಿಕೇರಿಯ ಕೆಂಕೇರಮ್ಮ ದೇವಾಲಯದ ಶ್ರೀ ವಿಘ್ನೇಶ್ವರ

ಸೇವಾ ಸಮಿತಿ

೨೨ : ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದ ವಿನಾಯಕ ಯುವಕ

ಭಕ್ತ ಮಂಡಳಿ