ಮಡಿಕೇರಿ,ಸೆ.೮: ವಿಶ್ವಾವಸು ಸಂವತ್ಸರ ಭಾದ್ರಪದ ಶುಕ್ಲ ಹುಣ್ಣಿಮೆಯಾದ ನಿನ್ನೆ ರಾತ್ರಿ ಜರುಗಿದ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದೋಷ ಪರಿಹಾರಕ್ಕಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಸಂಕಲ್ಪ, ಅಭಿಷೇಕಾದಿ ಕಾರ್ಯಗಳು ನೆರವೇರಿದವು.
ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ಗ್ರಹಣ ದೋಷ ಪರಿಹಾರಕ್ಕಾಗಿ ವಿಶೇಷ ಸಂಕಲ್ಪ ಸೇವೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಿಗ್ಗೆಯಿಂದಲೇ ಸಮರೋಪಾದಿಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಸಂಕಲ್ಪ ಸೇವೆ ಮಾಡಿಸಿದರು. ದೇವಾಲಯದಿಂದ ಪುಷ್ಕರಿಣಿವರೆಗೂ ಭಕ್ತರ ಸರತಿ ಸಾಲು ಕಂಡುಬAದಿತು. ಪೂಜೆಗಾಗಿ ಭಕ್ತರ ನೂಕು ನುಗ್ಗಲು ಕೂಡ ಕಂಡುಬAದಿತು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಉಪಸ್ಥಿತರಿದ್ದು ವ್ಯವಸ್ಥೆಯ ಜವಾಬ್ದಾರಿ ನಿರ್ವಹಿಸಿದರು.