ಕೂಡಿಗೆ, ಆ. ೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬ್ಯಾಡಗೊಟ್ಟ, ಸೀಗೆಹೊಸೂರು ಯಲಕನೂರು ಕಡೆಗೆ ಹೋಗುವ ದಾರಿಯ ಸಮೀಪದಲ್ಲಿರುವ ಪರಿಶಿಷ್ಟ ಜಾತಿಯ ೨೫ಕ್ಕೂ ಹೆಚ್ಚು ಕುಟುಂಬಗಳು ವಾಸ ಇರುವ ಗ್ರಾಮ. ಆದರೆ ಕಳೆದ ೩೫ ವರ್ಷಗಳಿಂದಲೂ ಇಲ್ಲಿನ ನಿವಾಸಿಗಳಿಗೆ ಮನೆಗಳ ಭಾಗ್ಯ ಮಾತ್ರ ಇನ್ನೂ ದೊರಕಿಲ್ಲ.
೨೫ ಕುಟುಂಬದವರು ಕೂಡ ಕಡು ಬಡವರಾಗಿದ್ದು ಕೂಲಿ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಅತಿಯಾದ ಮಳೆಯಿಂದಾಗಿ ೧೦ಕ್ಕೂ ಹೆಚ್ಚು ಮನೆಗಳು ಬಿದ್ದುಹೋದರೂ ಸರಕಾರ ಸಣ್ಣ ಪ್ರಮಾಣದ ಪರಿಹಾರ ನೀಡಿ, ನಂತರ ಪರಿಶಿಷ್ಟ ಜಾತಿ ಆಧಾರದ ಮೇಲೆ ನೂತನ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಹೇಳಿ ೩೫ ವರ್ಷ ಕಳೆದರೂ ಇದುವರೆಗೂ ಮನೆಗಳ ನಿರ್ಮಾಣವಾಗಿಲ್ಲ.
ಇಲ್ಲಿನ ಕುಟುಂಬಗಳಿಗೆ ಸರ್ಕಾರದ ರಾಜೀವ್ ಗಾಂಧಿ ವಸತಿ ಯೋಜನೆ, ಬಸವ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲು ಅವಕಾಶಗಳಿದ್ದರೂ ಸಹ ಸಂಬAಧಿಸಿದ ಇಲಾಖೆ ಸಮರ್ಪಕವಾಗಿ ಕ್ರಮ ಕೈಗೊಳ್ಳದೆ ಇರುವುದರಿಂದಾಗಿ ಇಲ್ಲಿ ವಾಸಿಸುವ ೧೦ ಕುಟುಂಬಗಳ ಮನೆಗಳ ಸ್ಥಿತಿ ಅಧೋಗತಿಯಾಗಿದೆ. ಕೆಲವು ಮನೆಗಳಲ್ಲಿ ಒಂದು ಬದಿಯ ಗೋಡೆ ಕುಸಿದಿದ್ದರೂ ಅದರಲ್ಲೇ ವಾಸಿಸುತ್ತಿರುವುದು ಕಂಡುಬAದಿದೆ.
ಇನ್ನೊAದೆಡೆ ಗ್ರಾಮದಲ್ಲಿರುವ ೧೨ ಕುಟುಂಬಗಳ ಮನೆಗಳ ಹಂಚುಗಳು ಮಳೆಯಿಂದಾಗಿ ಹಾನಿಯಾಗಿದ್ದು, ಮಳೆಯ ನೀರು ಮನೆಯ ಒಳಗೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಕುಟುಂಬಗಳು ಪ್ಲಾಸ್ಟಿಕ್ ಹೊದಿಕೆಯನ್ನು ಅವಲಂಬಿಸಿವೆ. ಈಗಾಗಲೇ ಸ್ಥಳಕ್ಕೆ ಜಿಲ್ಲೆಯ ಮೂವರೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಸಹ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ.
ತಮ್ಮ ಅಳಲನ್ನು ಅನೇಕ ಬಾರಿ ಜಿಲ್ಲಾಧಿಕಾರಿ, ತಾಲೂಕು ಮಟ್ಟದ ಅಧಿಕಾರಿಗಳ ಮುಂದೆ, ರಾಜಕಾರಣಿಗಳ ಮುಂದೆ ತೊಡಿಕೊಂಡರೂ ಸಹ ಯಾವುದೇ ಸ್ಪಂದನ ಸಿಕ್ಕಿಲ್ಲ ಎಂದು ಇಲ್ಲಿನ ನಿವಾಸಿಗಳಾದ ಈರಮ್ಮ, ಕಾಳಯ್ಯ, ಕೃಷ್ಣ, ಅರುಣ್, ಸುಜಾತ, ಕಮಲಮ್ಮ, ಮುತ್ತಮ್ಮ, ಲಕ್ಷಮ್ಮ ಗಣೇಶ್, ರಾಮಕೃಷ್ಣ ಕರಿಯಪ್ಪ, ಮಹೇಶ್ ತಿಳಿಸಿದ್ದಾರೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಬ್ಯಾಡಗೊಟ್ಟ ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ೬ ತಿಂಗಳು ಕಳೆದರೂ ಸಹ ಸಂಬAಧಿಸಿದ ಅಧಿಕಾರಿ ವರ್ಗ ಮಾತ್ರ ಭೇಟಿ ನೀಡಿ ಸಮರ್ಪಕವಾದ ಮಾಹಿತಿಯನ್ನು ಪಡೆದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಬಂದು ಮನೆಗಳ ಸಂಖ್ಯೆ ಪಡೆದು ಇದುವರೆಗೆ ಯಾವುದೇ ಕ್ರಮವಾಗಿಲ್ಲ. ಬೀಳುವ ಹಂತದ ಮನೆಗಳ ಲೆಕ್ಕ ಮಾತ್ರ ಗ್ರಾಮ ಪಂಚಾಯಿತಿ ಪುಸ್ತಕದಲ್ಲಿದೆ! ನಂತರ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಮೂರು ಕುಟುಂಬಗಳ ವಾಸ
ಇಲ್ಲಿ ಬೀಳುವ ಹಂತದಲ್ಲಿರುವ ಮನೆಯೊಂದರಲ್ಲಿ ಮೂರು ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮಕ್ಕೆ ಸಮರ್ಪಕವಾದ ಚರಂಡಿ ವ್ಯವಸ್ಥೆ, ಮನೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬAಧಿಸಿದವರು ಇನ್ನಾದರೂ ಕ್ರಮಕೈಗೊಳ್ಳಬೇಕಿದೆ.-ಕೆ.ಕೆ. ನಾಗರಾಜಶೆಟ್ಟಿ