ಮುಳ್ಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಮೀಪದ ಮಾಲಂಬಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೨೦ನೇ ವರ್ಷದ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಗೌರಿ ಗಣೇಶ ವಿಸರ್ಜನೋತ್ಸವ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಸಂಜೆ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಕೆ.ಎಂ.ಮಾಚಯ್ಯ ಮತ್ತು ಮಾದಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಮಾಚಯ್ಯ, ಇಂದು ಯುವ ಸಮೂಹದವರು ಆಚರಣೆ, ಸಂಸ್ಕೃತಿ, ಆಚಾರ ವಿಚಾರ ಮುಂತಾದವುಗಳನ್ನು ಮರೆತಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಕರು ಗೌರಿ ಗಣೇಶ ಉತ್ಸವಗಳನ್ನು ಆಚರಿಸುತ್ತಿರುವುದಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಮಾದಪ್ಪ, ಪ್ರಮುಖರಾದ ಎಂ.ಡಿ.ಸುರೇಶ್, ಆಲೂರುಸಿದ್ದಾಪುರ ರೋಟರಿ ಕ್ಲಬ್ ಸದಸ್ಯ ವೆಂಕಟೇಶ್, ಬೆಳೆಗಾರ ಕೊಮಾರಪ್ಪ, ಸೇವಾ ಸಮಿತಿ ಸದಸ್ಯ ಸುಂದರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಸುನಿಲ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯೆ ಮುತ್ತಮ್ಮ, ಸೇವಾ ಸಮಿತಿ ಉಪಾಧ್ಯಕ್ಷ ಚನ್ನಕೇಶವ, ಲತಾ ದೇವರಾಜ್ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಅನ್ನಸಂತರ್ಪಣೆ ನಡೆಯಿತು.
ಭಾನುವಾರ ಬೆಳಿಗ್ಗೆ ಗೌರಿ ಗಣೇಶ ಮೂರ್ತಿ ವಿಸರ್ಜನೋತ್ಸವ ಅಂಗವಾಗಿ ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಅರ್ಚಕರಾದ ಭಾನುಪ್ರಕಾಶ್ ನೇತೃತ್ವದಲ್ಲಿ ಅರ್ಚಕರು ಪೂಜಾ ವಿದಿ ವಿಧಾನ ನೆರವೇರಿಸಿದ ಬಳಿಕ ಅಲಂಕರಿಸಿದ ವಾಹನದ ಮಂಟಪದಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಯನ್ನು ಕೂರಿಸಲಾಯಿತು. ನಂತರ ವಿಸರ್ಜನೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿಸರ್ಜನೋತ್ಸವ ಮೆರವಣಿಗೆಯು ಮಾಲಂಬಿ ಮುಖ್ಯ ರಸ್ತೆ ಮೂಲಕ ಮಾಲಂಬಿ ಹೊಸಗುತ್ತಿ ಕೂಡುರಸ್ತೆ ಮೂಲಕ ಸಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ಮಾಲಂಬಿ-ಗಣಗೂರು ಜಂಕ್ಷನ್ನತ್ತ ವಾಪಾಸಾಗಿ ಸಂಜೆ ಮಾಲಂಬಿ ಗ್ರಾಮದ ಬಾಲ ಕೆರೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಮೂಲಕ ವಿಸರ್ಜನೋತ್ಸವ ಕಾರ್ಯಕ್ರಮ ಸಂಪನ್ನಗೊAಡಿತು. ಅದ್ದೂರಿ ಮೆರವಣಿಗೆ ಸಂದರ್ಭ ಪುರುಷರು, ಮಹಿಳೆಯರು, ಯುವಕ, ಯುವತಿ ಯರು, ಮಕ್ಕಳು ಹಿರಿಯರು, ಕಿರಿಯರು ಎನ್ನದೆ ನೂರಾರು ಜನರು ಪಾಲ್ಗೊಂಡಿದ್ದರು. ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು ಹಾಜರಿದ್ದರು.
ವೀರಾಜಪೇಟೆ: ನಿಸರ್ಗ ಪ್ರೇಮಿಗಳಿಗೆ ಅದ್ಭುತ ಅನುಭವವನ್ನು ನೀಡುವ ಮೂಲಕ ನಿಸರ್ಗ ಪ್ರೇಮಿಯಂತೆ ಗಣೇಶ, ಅಯ್ಯಪ್ಪ ಬೆಟ್ಟದ ಮೇಲೆ ಸ್ಥಿತನಾಗಿ ಭಕ್ತರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದ್ದಾನೆ.
ಇದೇನು ನಿಸರ್ಗ ಪ್ರೇಮಿ ಗಣೇಶ ಅಂತ ಯೋಚಿಸಬಹುದು ಅಲ್ಲವೇ, ಇತಿಹಾಸ ಪ್ರಸಿದ್ದ ವೀರಾಜಪೇಟೆ ಗೌರಿ ಗಣೇಶೋತ್ಸವ ಸದಾ ಒಂದಿಲ್ಲೊAದು ರೀತಿಯಲ್ಲಿ ತನ್ನ ಛಾಪನ್ನು ಮೂಡಿಸುತ್ತಲೇ ಬರುತ್ತದೆ.
ಈ ವರ್ಷದ ಆಕರ್ಷಣೆ ಏನು ಎಂದು ಗೊತ್ತೇ..? ೩೦೦ಕ್ಕೂ ಹೆಚ್ಚು ಗೋಣಿಚೀಲಗಳನ್ನು ಬಳಸಿ ನಿರ್ಮಿಸಿರುವ ಅರಣ್ಯ ಗುಹೆಯ ಅಲಂಕಾರ. ಈ ಬಾರಿ ವೀರಾಜಪೇಟೆಯ ಶ್ರೀ ವರದ ವಿನಾಯಕ ಸೇವಾ ಸಮಿತಿಯವರು ಅಯ್ಯಪ್ಪ ಬೆಟ್ಟದಲ್ಲಿ ಅದ್ದೂರಿಯಾಗಿ ಆಯೋಜಿಸಿರುವ ಈ ಗಣೇಶೋತ್ಸವ ಎಲ್ಲರ ಗಮನ ಸೆಳೆಯುತ್ತಿದೆ.
ಈ ಅರಣ್ಯ ಗುಹೆ ಯೊಳಗೆ ಗಣಪತಿಯ ಸುಂದರ ಮೂರ್ತಿಯನ್ನು ಪ್ರತಿಷ್ಠಾಪಿಸ ಲಾಗಿದೆ. ಇದು ಸಮಿತಿಯ ೧೧ನೇ ವರ್ಷದ ಸಂಭ್ರಮ ಮತ್ತು ಅದನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸುತ್ತಿದ್ದಾರೆ. ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿಕೊಂಡು ಇಂತಹ ಅದ್ಭುತ ಕಲಾಕೃತಿಯನ್ನು ಸೃಷ್ಟಿಸಿರುವ ಸಮಿತಿಯ ಕಾರ್ಯಕ್ಕೆ ಹಾಗೂ ನಿಸರ್ಗದ ಸೌಂದರ್ಯವನ್ನು ಪ್ರತಿಬಿಂಬಿಸುವ ಈ ಅರಣ್ಯ ಗುಹೆ ಭಕ್ತರಿಗೆ ವಿಶೇಷ ಅನುಭವ ನೀಡುತ್ತಿದೆ.
ವರದ ವಿನಾಯಕ ಸೇವಾ ಸಮಿತಿಯ ಉತ್ಸಾಹಿ ಯುವಕರ ತಂಡ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿಕೊಂಡು ನಿರ್ಮಿಸಿದ ಗುಹೆಯನ್ನು ನೋಡಿ ಭಕ್ತರು, ಸಾರ್ವಜನಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪೂಜಾ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಭಕ್ತರಿಗೆ ಇದೊಂದು ಸೆಲ್ಫಿ ಪಾಯಿಂಟ್ ಕೂಡ ಆಗಿದೆ.ಮುಳ್ಳೂರು: ಮುಳ್ಳೂರು-ಜಾಗೇನಹಳ್ಳಿ ಗ್ರಾಮಗಳ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಯ ವಿಸರ್ಜನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗೆ ಅರ್ಚಕರು ಪೂಜೆ ಸಲ್ಲಿಸಿದರು. ನಂತರ ಅಲಂಕಾರಗೊಳಿಸಿದ ವಾಹನದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಕೂರಿಸಲಾಯಿತು.
ನಂತರ ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮೆರವಣಿಗೆಯನ್ನು ಬರ ಮಾಡಿಕೊಂಡು ಗೌರಿ-ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು.
ಸಂಜೆ ಗ್ರಾಮದ ಇಂಟಿನಾಯಕನ ಕೆರೆಯಲ್ಲಿ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡಿದ್ದರು.ಸೋಮವಾರಪೇಟೆ:ಪಟ್ಟಣದ ಸಾರ್ವಜನಿಕ ಗೌರಿ ಗಣೇಶೋತ್ಸವ ಸಮಿತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಅದ್ದೂರಿಯಾಗಿ ನೆರವೇರಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿಗಳನ್ನು ಜಡಿಮಳೆಯ ನಡುವೆಯೂ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ, ನಂತರ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು. ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನ ನಡೆಯಿತು.
ಸಂಜೆ ಅಬ್ಬರದ ಸಂಗೀತ, ಕಡಬದ ಗೊಂಬೆ ಕುಣಿತ, ಬ್ಯಾಂಡ್ ಸೆಟ್ನೊಂದಿಗೆ ಪಟ್ಟಣದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ೧೦೧ ತೆಂಗಿನ ಈಡುಗಾಯಿಯೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಳೆಯ ನಡುವೆಯೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಸಮಿತಿಯ ಪ್ರಕಾಶ್, ದರ್ಶನ್ ಜೋಯಪ್ಪ, ನಂಜುAಡ, ಮಹೇಶ್, ಸಂಪತ್, ಪ್ರವೀಣ್, ಮನೋಹರ್, ಸುಜಿತ್ ಸೇರಿದಂತೆ ಇತರರು ಇದ್ದರು.
ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘದಿAದ ಸಮುದಾಯ ಭವನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಉತ್ಸವ ಮೂರ್ತಿಗಳನ್ನು ಅಲಂಕೃತ ರಥದಲ್ಲಿ ಮೆರವಣಿಗೆ ನಡೆಸಿ, ಆನೆಕೆರೆಯಲ್ಲಿ ವಿಸರ್ಜಿಸಲಾಯಿತು. ಸಂಘದ ಅಧ್ಯಕ್ಷ ಸತೀಶ್, ಕೃಷ್ಣಮೂರ್ತಿ, ಗಂಗಾಧರ್, ಪದ್ಮನಾಭ್, ಮೋಹನ್ ಸೇರಿದಂತೆ ಗ್ರಾಮಸ್ಥರು ಇದ್ದರು.
ತಾಲೂಕಿನ ಕೂತಿ ಗ್ರಾಮದ ಗ್ರಾಮ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಗ್ರಾಮದ ದೇವರ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ಗ್ರಾಮಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಎಂ. ಜಯರಾಮ್, ಉಪಾಧ್ಯಕ್ಷ ಕೆ.ಡಿ. ಗಿರೀಶ್, ಕಾರ್ಯದರ್ಶಿ ಯಾದವ್ ಕುಮಾರ್, ಖಜಾಂಚಿ ಲಕ್ಷ್ಮಯ್ಯ, ಅರ್ಚಕ ಅನಂತ್ ರಾಮ್, ಕೆ.ಎಂ. ಅಶ್ವತ್, ಸಿ.ಯು. ಭರತ್, ರಾಜೇಶ್, ಭಾನುಪ್ರಸಾದ್ ಹಾಗೂ ಗ್ರಾಮಸ್ಥರು ಇದ್ದರು.
ವೀರಾಜಪೇಟೆ: ವೀರಾಜಪೇಟೆ ವಿಜಯ ವಿನಾಯಕ ಉತ್ಸವ ಸಮಿತಿ ವತಿಯಿಂದ ೩೬ನೇ ವರ್ಷದ ಗಣಪತಿ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ನೆರವೇರಿತು.
ಉತ್ಸವದ ಪ್ರಯುಕ್ತ ದಾನಿಗಳಿಂದ ಹಾಗೂ ಆಡಳಿತ ಮಂಡಳಿ ವತಿಯಿಂದ ಸರ್ವ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ನೂತನ ಆಡಳಿತ ಮಂಡಳಿಯ ಸದಸ್ಯರು ಈ ಬಾರಿ ಎಲ್ಲಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದರು.
ಅನ್ನಸಂತರ್ಪಣೆ ಸಂದರ್ಭದಲ್ಲಿ ಮಳೆ ಬಾರದೇ ವರುಣನು ಆಶಿರ್ವಾದ ಮಾಡಿದ್ದು ವಿಶೇಷವಾಗಿತ್ತು.
ಸಿದ್ದಾಪುರ: ಬಾಡಗ ಬಾಣಂಗಾಲ ಗ್ರಾಮದ ಫ್ಯಾರ್ ಲ್ಯಾಂಡ್ ಕಾಫಿ ತೋಟದ ಶ್ರೀ ಗೌರಿ ಗಣೇಶ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಉತ್ಸವವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು. ಸಮಿತಿಯ ವತಿಯಿಂದ ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಬಳಿಕ ಉತ್ಸವ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ತೆರಳಿ ವಿಸರ್ಜನೆ ಮಾಡಲಾಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸ ಲಾಗಿತ್ತು.ವೀರಾಜಪೇಟೆ: ವೀರಾಜಪೇಟೆ ಸಮೀಪದ ವಿನಾಯಕ ನಗರದ ವರ ಸಿದ್ಧಿ ವಿನಾಯಕ ದೇವಸ್ಥಾನದ ೪೭ನೇ ವರ್ಷದ ಗಣೇಶ ಉತ್ಸವವು ೯ ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
೯ ದಿನ ರಾತ್ರಿ ೮ ಗಂಟೆಗೆ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದು ಪ್ರಸಾದ ಸ್ವೀಕರಿಸಿದರು. ನಂತರ ವಿದ್ಯುತ್ ಅಲಂಕಾರ ಮಂಟಪದಲ್ಲಿ ಮೆರವಣಿಗೆ ನಡೆಸಿ ದೇವರ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಕಡಂಗ: ಅರಪಟ್ಟು-ಕಡಂಗ ಪಟ್ಟಣದ ಶ್ರೀ ಬಲಮುರಿ ಮಹಾಗಣಪತಿ ದೇವಸ್ಥಾನದಲ್ಲಿ ೩೪ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವವನ್ನು ಆಚರಿಸಲಾಯಿತು.
ಆಗಸ್ಟ್ ೨೭ ರಂದು ಗಣಪತಿ ಹೋಮದೊಂದಿಗೆ ಪ್ರಾರಂಭಗೊAಡು ಸೆಪ್ಟೆಂಬರ್ ೨ ರವರೆಗೆ ವಿವಿಧ ಪೂಜೆಗಳಿಂದ ಗೌರಿ ಗಣೇಶೋತ್ಸವವನ್ನು ಆಚರಿಸಲಾಯಿತು.ತಾ.೨ ರಂದು ವಿಸರ್ಜನಾ ಮೂರ್ತಿಯನ್ನು ಪೊದ್ದಮಾನಿಯ ಕಾಂಡ ಕೆರೆಯಲ್ಲಿ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಊರಿನ ಪ್ರಮುಖರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಸಮಿತಿ ವತಿಯಿಂದ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಮೆರವಣಿಗೆ ಮೂಲಕ ಮೂರ್ತಿಯನ್ನು ವಿಸರ್ಜಿಸಲಾಯಿತು.