ಗೋಣಿಕೊಪ್ಪ, ಸೆ. ೯: ಸರ್ವರ ದಸರಾ ಸಮಿತಿ ೩ನೇ ವಿಭಾಗದ ೨೬ನೇ ವರ್ಷದ ಅಧ್ಯಕ್ಷರಾಗಿ ಟಿ.ಎನ್.ಗೋವಿಂದಪ್ಪ ಆಯ್ಕೆಯಾಗಿದ್ದಾರೆ. ಸರ್ವರ ದಸರಾ ಸಮಿತಿಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಗೌರವಾಧ್ಯಕ್ಷರಾಗಿ ಅನಿಶ್, ಕಾರ್ಯಾಧ್ಯಕ್ಷರಾಗಿ ಮುರುಗ, ಉಪಾಧ್ಯಕ್ಷರಾಗಿ ಖಾಲಿದ್, ನೌಶಾದ್, ಪ್ರಧಾನ ಕಾರ್ಯದರ್ಶಿಗಳಾಗಿ ನೂರು ಭಾಷಾ, ಸಹ ಕಾರ್ಯದರ್ಶಿ ನಾಗೇಂದ್ರ, ಖಜಾಂಚಿ ವಿ.ವಿ. ಲಕ್ಷö್ಮಣ್, ಸಲಹೆಗಾರಾಗಿ ಮಂಜುಳ ಎಂ, ಅರವಿಂದ್ ಕುಟ್ಟಪ್ಪ, ಬಿ.ವಿ. ರಾಜು, ಸದಸ್ಯರುಗಳಾಗಿ ಚನ್ನಕೇಶವ, ರವಿ, ಶರಣು, ನಾರಾಯಣ ಆರ್ಮಿ, ಜಿಕ್ರು, ದಿನೇಶ, ವೈ ಬಿ ಗಣೇಶ್, ಮತ್ತು ಮಂಟಪ ಸಮಿತಿ ಸದಸ್ಯರುಗಳಾಗಿ ಎಂ.ಜಿ ಶ್ರಿಜಿತ್, ಮಂಜು, ಎ. ಕರಣ್, ಹೆಚ್.ಆರ್. ಮಂಜುನಾಥ್, ಜೆ ಜನಾರ್ಧನ್ ಜಗ್ಗು, ಪಿ.ಎ. ಮಣಿ, ಜಾನ್ಸನ್ ಜೋಸೆಫ್, ಮೈದು ಸೆಂಟ್ರಿAಗ್, ಶಿವು ಟ್ಯಾಕ್ಟರ್ ಆಯ್ಕೆಯಾಗಿದ್ದಾರೆ.

ಈ ಸಂದರ್ಭ ಮಾತನಾಡಿದ ಟಿ.ಎನ್ ಗೋವಿಂದಪ್ಪ ಅವರು ೨೬ನೇ ವರ್ಷಕ್ಕೂ ಅತ್ಯುತ್ತಮ ಕಾರ್ಯಕ್ರಮ ನೀಡುವ ಮೂಲಕ ಪೌರಾಣಿಕ ಹಿನ್ನೆಲೆಯ ಸುಂದರ ಭವ್ಯ ಮಂಟಪದೊAದಿಗೆ ಸಾಂಸ್ಕೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ತಾ. ೨೮ರಂದು ಮಧ್ಯಾಹ್ನ ಅನ್ನ ಸಂತರ್ಪಣೆ ನಂತರ ಅಕ್ಟೋಬರ್ ೨ರ ವಿಜಯ ದಶಮಿಯಂದು ಸಂಜೆ ವಾದ್ಯಗೋಷ್ಠಿಯೊಂದಿಗೆ ವಿದ್ಯುತ್ ಅಲಂಕೃತ ಮಂಟಪದ ಮೆರವಣಿಗೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.