ವೀರಾಜಪೇಟೆ, ಸೆ. ೯: ಕೊಡಗು ಜಿಲ್ಲೆಯ ಬಹುತೇಕ ದೇವರುಗಳ ಮೂಲ ಸ್ಥಾನ ಕೇರಳವಾಗಿದ್ದು, ಕೇರಳ ಹಾಗೂ ಕೊಡಗು ಜಿಲ್ಲೆಗೂ ಅವಿನಾಭಾವ ಸಂಬAಧ ಇರುವುದರಿಂದ ಕೇರಳದ ಉಳಿಕಲ್ ತಾಲೂಕಿನಲ್ಲಿರುವ ಆದಿ ಬೈತೂರು ದೇವಾಲಯದಲ್ಲಿ ಪುಗ್ಗೆರ ಕುಟುಂಬಸ್ಥರ ಮುಂದಾಳತ್ವದಲ್ಲಿ ಶ್ರೀ ಆದಿ ಬೈತೂರಪ್ಪ ಭಕ್ತ ಜನ ಸಂಘದ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂದು ತಕ್ಕ ಮಖ್ಯಸ್ಥರಾದ ಪುಗ್ಗೆರ ಪೊನ್ನಪ್ಪ ಹೇಳಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುಗ್ಗೆರ ಕುಟುಂಬವು ಅನಾದಿ ಕಾಲದಿಂದಲೂ ಕ್ಷೇತ್ರದ ತಕ್ಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೊಡಗಿನ ಭಕ್ತರಿಂದ ಧನಸಹಾಯ ಪಡೆದು ಹಬ್ಬದ ಸಮಯದಲ್ಲಿ ಕೊಡಗಿನಿಂದ ಬರುವ ಭಕ್ತರಿಗೆ ತಂಗಲು ಬೈತೂರಪ್ಪ ಭವನವನ್ನು ನಿರ್ಮಿಸಲಾಗಿದೆ. ಭವನದ ನಿರ್ವಹಣೆಯನ್ನು ಆದಿ ಬೈತೂರಪ್ಪ ಭಕ್ತ ಜನಸಂಘ ನಿರ್ವಹಿಸುತ್ತಿದೆ. ಭಕ್ತಜನ ಸಂಘದಿAದ ದೇವಾಲಯಕ್ಕೆ ತೆರಳುವ ರಸ್ತೆಗೆ ಕಲ್ಲು ಹಾಕಲಾಗಿದೆ. ದೇವಸ್ಥಾನದಿಂದ ಹೊಳೆಗೆ ತೆರಳುವ ರಸ್ತೆಗೆ ಇಂಟರ್‌ಲಾಕ್ ವ್ಯವಸ್ಥೆ, ಹೊಳೆಗೆ ಇಳಿಯಲು ಮೆಟ್ಟಿಲುಗಳ ವ್ಯವಸ್ಥೆ, ಭವನದ ಸುರಕ್ಷತೆಗಾಗಿ ಸಿಸಿ ಟಿ.ವಿ ಅಳವಡಿಕೆ, ಶೌಚಗೃಹಗಳು, ಅಂದಾಜು ೧೦ ಲಕ್ಷ ವೆಚ್ಚದಲ್ಲಿ ಬೇಟೆ ಕುರಮಗನ್ ದೇವಾಲಯದ ಜೀರ್ಣೋದ್ದಾರ ಕಾರ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಶ್ರೀ ಆದಿ ಬೈತೂರಪ್ಪ ಭಕ್ತ ಜನಸಂಘ ಅಧ್ಯಕ್ಷ ಅಮ್ಮಣಕುಟ್ಟಂಡ ಕಿರಣ್ ಸುಬ್ರಮಣಿ ಮಾತನಾಡಿ ಮುಂದಿನ ದಿನಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದ್ದು ಬೈತೂರು ದೇವಾಲಯದ ಬಲಪೌಳಿ ಶಿಥಿಲಗೊಂಡಿದ್ದು ಅದರ ಪುನರ್ ನಿರ್ಮಾಣ ಕಾರ್ಯ, ಭೋಜನ ಮಂದಿರದ ಕಾಮಗಾರಿ, ದೇವಾಲಯದ ಉತ್ತರ ಭಾಗದಲ್ಲಿರುವ ಚಾಮುಂಡಿ ದೇವರ ಗೋಪುರ(ವಡಕನಡೆ)ವನ್ನು ನಿರ್ಮಾಣ ಮಾಡುವ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ೩೦ರಿಂದ ೪೦ ಲಕ್ಷ ಅಂದಾಜು ವೆಚ್ಚವಾಗುವುದು. ಅಭಿವೃದ್ಧಿ ಕಾರ್ಯಗಳಿಗೆ ಕೊಡಗಿನ ಭಕ್ತರು ಉದಾರ ಧನಸಹಾಯ ಮಾಡುವಂತೆ ಕೋರಿದರು. ಧನಸಹಾಯ ಕೊಡಲು ಇಚ್ಚಿಸುವವರು ಡಿಸಿಸಿ ಬ್ಯಾಂಕ್ ಅಕೌಂಟ್ ಸಂಖ್ಯೆ ೧೨೧೦೦೪೩೪೩೭೭೭ ಶ್ರೀ ಆದಿ ಬೈತೂರಪ್ಪ ಭಕ್ತ ಜನಸಂಘ ಅಕೌಂಟ್‌ಗೆ ನೇರವಾಗಿ ನೀಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಈ ೯೬೮೬೩೫೫೭೮೯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಚಾಲಕ ಚೇಂದAಡ ಶಿವಕುಮಾರ್, ಕಾರ್ಯದರ್ಶಿ ಮಾಳೇಟಿರ ಅಜಿತ್ ಪೂವಣ್ಣ, ನಿರ್ದೇಶಕ ಮಂಡೇಪAಡ ರಿಶು ಕಾರ್ಯಪ್ಪ ಉಪಸ್ಥಿತರಿದ್ದರು.