ವೀರಾಜಪೇಟೆ, ಸೆ. ೯: ಗೌರಿ ಗಣೇಶ ವಿಸರ್ಜನೋತ್ಸವದ ವೇಳೆ ಡಿಜೆ ಬಳಕೆ ಸಂಬAಧ ಪೊಲೀಸ್ ಇಲಾಖೆ ಆಯೋಜಕರು, ಧ್ವನಿವರ್ಧಕ ಮಾಲೀಕರಿಗೆ, ವಾಹನದ ಮಾಲೀಕರಿಗೆ, ಚಾಲಕರಿಗೆ ಯಾವುದೇ ದಂಡವನ್ನು ವಿಧಿಸಬಾರದು ಮತ್ತು ಮೊಕದ್ದಮೆ ದಾಖಲಿಸಬಾರದೆಂದು ಪಿ.ಎ. ಮಂಜುನಾಥ್ ಡಿವೈಎಸ್‌ಪಿಗೆ ಮನವಿ ಸಲ್ಲಿಸಿದ್ದಾರೆ.

ವೀರಾಜಪೇಟೆಯ ಐತಿಹಾಸಿಕ ಗೌರಿಗಣೇಶೋತ್ಸವದಲ್ಲಿ ವಿಸರ್ಜನಾ ಮೆರವಣಿಗೆ ವೇಳೆ ಧ್ವನಿವರ್ಧಕ, ವಾದ್ಯಗೋಷ್ಠಿಯನ್ನು ಬಳಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇಷ್ಟು ವರ್ಷಗಳ ಕಾಲ ಎಲ್ಲರೂ ಸಹೋದರ ಸಹೋದರಿಯರಂತೆ ಅನ್ಯೋನ್ಯತೆಯಿಂದ ಆಚರಿಸುತ್ತಾ ಬಂದಿದ್ದೇವೆ. ಕರ್ನಾಟಕ ರಾಜ್ಯದಲ್ಲೇ ದಸರಾವನ್ನು ಹೊರತುಪಡಿ ಸಿದರೆ, ವೀರಾಜಪೇಟೆಯ ಗೌರಿಗಣೇಶೋತ್ಸವಕ್ಕೆ ಹೆಚ್ಚಾಗಿ ಜನರು ಆಗಮಿಸಿ ಸಂಭ್ರಮಿಸುತ್ತಾರೆ. ಸಾರ್ವಜನಿಕರಿಂದ, ದಾನಿಗಳಿಂದ ಮತ್ತು ವರ್ತಕರಿಂದ ಚಂದಾ ವಸೂಲಿ ಮಾಡಿ ಸಮಿತಿ ಸದಸ್ಯರು ಹಗಲು ರಾತ್ರಿ ಕಷ್ಟಪಟ್ಟು ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದಾರೆ, ಸಾರ್ವಜನಿಕರಲ್ಲಿ ಸುಮಾರು ೯೯ ಶೇ. ಯಾರಿಗೂ ಯಾವುದೇ ಆಕ್ಷೇಪಣೆಗಳಿಲ್ಲ. ಕೇವಲ ೧ ಶೇ ಮಾತ್ರ ನಿರಾಕರಿಸುತ್ತಿದ್ದಾರೆ. ಆದ್ದರಿಂದ ಇದನ್ನೆಲ್ಲಾ ಮನಗಂಡು ಸಮಿತಿಗಳ ಮೇಲೆ ಮೊಕದ್ದಮೆ ದಾಖಲಿಸಬಾರದು ಎಂದು ಮನವಿಯಲ್ಲಿ ಕೋರಿದ್ದಾರೆ.